ರೈತರಿಗೆ ಅನ್ಯಾಯ ಮಾಡುವ ಅಧಿಕಾರಿಗಳನ್ನು ಪ್ರಶ್ನಿಸಿದರೆ ಅದು ಕಿರುಕುಳವೇ?: ಶಾಸಕ ಎಚ್.ಡಿ.ರೇವಣ್ಣ | Hd Revanna Slams Officials Farmers Compensation Hassan Land Issue Gvd

ರೈತರಿಗೆ ಅನ್ಯಾಯ ಮಾಡುವ ಅಧಿಕಾರಿಗಳನ್ನು ಪ್ರಶ್ನಿಸಿದರೆ ಅದು ಕಿರುಕುಳವೇ?: ಶಾಸಕ ಎಚ್.ಡಿ.ರೇವಣ್ಣ | Hd Revanna Slams Officials Farmers Compensation Hassan Land Issue Gvd



ರೈತರಿಗೆ ಅನ್ಯಾಯ ಮಾಡುವ ಅಧಿಕಾರಿಗಳನ್ನು ಪ್ರಶ್ನಿಸಿದರೆ ಅದು ಕಿರುಕುಳವೇ?: ಶಾಸಕ ಎಚ್.ಡಿ.ರೇವಣ್ಣ | Hd Revanna Slams Officials Farmers Compensation Hassan Land Issue Gvd

ರೈತರಿಗೆ ದ್ರೋಹ ಮಾಡುವ ಹಾಗೂ ಬೇಜವಾಬ್ದಾರಿ ಅಧಿಕಾರಿಗಳ ವರ್ತನೆಯನ್ನು ಟೀಕಿಸಿದರೆ ಅದು ಹೇಗೆ ಕಿರುಕುಳವಾಗುತ್ತದೆ. ಹಾಗೇನಾದರೂ ಆದರೆ ಸುಮ್ಮನೆ ಕೂರಲು ಸಾಧ್ಯವೇ ಎಂದು ಶಾಸಕ ಎಚ್.ಡಿ.ರೇವಣ್ಣ ಪ್ರಶ್ನಿಸಿದರು.

ಹೊಳೆನರಸೀಪುರ (ಮಾ.22): ಜಿಲ್ಲೆಯ ಹೇಮಾವತಿ, ಯಗಚಿ ವಾಟೆಹೊಳೆ ಹಾಗೂ ಹಾರಂಗಿ ಜಲಾಶಯಗಳ ವ್ಯಾಪ್ತಿಯ ಭೂಸ್ವಾಧೀನ ಪ್ರಕರಣಗಳ ಇತ್ಯರ್ಥಕ್ಕೆಂದು ರೈತರಿಗೆ ವಿತರಿಸಲು ಸರ್ಕಾರದಿಂದ ಮಂಜೂರಾಗಿದ್ದ 10 ಕೋಟಿ 95 ಲಕ್ಷಕ್ಕೂ ಹೆಚ್ಚು ಹಣವನ್ನು ಸರ್ಕಾರಕ್ಕೆ ವಾಪಸ್‌ ಕಳುಹಿಸಿದ್ದಾರೆ. ರೈತರಿಗೆ ದ್ರೋಹ ಮಾಡುವ ಹಾಗೂ ಬೇಜವಾಬ್ದಾರಿ ಅಧಿಕಾರಿಗಳ ವರ್ತನೆಯನ್ನು ಟೀಕಿಸಿದರೆ ಅದು ಹೇಗೆ ಕಿರುಕುಳವಾಗುತ್ತದೆ. ಹಾಗೇನಾದರೂ ಆದರೆ ಸುಮ್ಮನೆ ಕೂರಲು ಸಾಧ್ಯವೇ ಎಂದು ಶಾಸಕ ಎಚ್.ಡಿ.ರೇವಣ್ಣ ಪ್ರಶ್ನಿಸಿದರು.

ಪಟ್ಟಣದ ಅವರ ನಿವಾಸದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪಟ್ಟಣದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ರಥೋತ್ಸವ ಹಿನ್ನೆಲೆಯಲ್ಲಿ ತೆರಿಗೆ ಬಟ್ಟೆ ತೊಡಿಸುವ ವಿಚಾರದಲ್ಲಿ ನಡೆದ ಘಟನೆಗಳು ಹಾಗೂ ನನಗಾದ ಅವಮಾನವನ್ನು ಖಂಡಿಸಿ, ಹಕ್ಕುಚ್ಯುತಿ ಮಂಡಿಸಿದ್ದೇನೆ. ಈ ಕುರಿತು ಸರ್ಕಾರದ ವತಿಯಿಂದ ತನಿಖೆಯಾಗುತ್ತದೆ ಮತ್ತು ಸತ್ಯಾಂಶ ತಿಳಿಯುತ್ತದೆ. ಅವರದೇ ಪಕ್ಷ ಆಡಳಿತವಿರುವಾಗ ನಾ ಕಿರುಕುಳ ನೀಡಲು ಸಾಧ್ಯವೇ ಎಂದು ಪ್ರಶ್ನಿಸಿದರು. ತೇರಿಗೆ ಬಟ್ಟೆ ತೊಡಿಸಲು ಸಂಸದರು ೨ ಲಕ್ಷ ರುಪಾಯಿ ಕೊಟ್ಟ ವಿಚಾರ ನನಗೆ ತಿಳಿದಿಲ್ಲ. ನನಗೆ ಯಾರು ತಿಳಿಸಿದ್ದಾರೆ ಎಂದು ಪ್ರಶ್ನಿಸಿ, ನನಗೆ ತಿಳಿಯದ ವಿಷಯದಲ್ಲಿ ಇಲ್ಲ ಸಲದ ಆರೋಪ ಸರಿಯಲ್ಲವೆಂದರು.

ಹಾಸನದಲ್ಲಿ ಭೂ ಮಾಫಿಯಾ ವ್ಯಾಪಕವಾಗಿದೆ. ಏರ್‌ಪೋರ್ಟ್‌ಗೆ ಮೀಸಲಿಟ್ಟ ಜಾಗವನ್ನೂ ಕಬಳಿಸಲು ಹುನ್ನಾರ ನಡೆಯುತ್ತಿದೆ. ಭೂ ಮಾಫಿಯಾದಲ್ಲಿ ಯಾವ ಯಾವ ರಾಜಕಾರಣಿ ತೊಡಗಿಸಿಕೊಂಡಿದ್ದಾರೆ, ಅವರಿಗೆ ಯಾವ ಯಾವ ಅಧಿಕಾರಿಗಳು ಸಹಕಾರ ನೀಡುತ್ತಿದ್ದಾರೆ ಎನ್ನುವುದು ನನಗೆ ತಿಳಿಸಿದೆ. ಕಾಲ ಬಂದಾಗ ಎಲ್ಲವನ್ನೂ ದಾಖಲೆ ಸಹಿತ ನೀಡುತ್ತೇನೆ. ನನ್ನ ತಾಲೂಕಿನ ಕಲ್ಲೋಡೆಬಾರೆ ಕಾವಲಿನಲ್ಲಿ 95 ಸಾವಿರ ಮೆಟ್ರಿಕ್ ಟನ್ ಎಂ ಸ್ಯಾಂಡ್, ಜಲ್ಲಿ ಲೂಟಿ ಆಗಿದೆ.

ಜಿಲ್ಲಾಧಿಕಾರಿಗಳಿಗೆ ಇವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಹೇಳಿ. ಲೂಟಿಕೋರರು ಯಾವ ಪಕ್ಷ ಅಧಿಕಾರದಲ್ಲಿ ಇರುತ್ತದೋ ಆ ಪಕ್ಷದ ಜೊತೆಯಲ್ಲಿದ್ದು ಲೂಟಿ ಮಾಡಿಕೊಳ್ಳುತ್ತಾರೆ. ಹಂಗರಹಳ್ಳಿಯಲ್ಲಿ ಕಳೆದ ಹತ್ತಾರು ವರ್ಷಗಳಿಂದ ಕಾನೂನು ಬದ್ಧವಾಗಿ ನಡೆಯುತ್ತಿದ್ದ ಅನಂತ್‌ಕುಮಾರ್ ಎಂಬುವವರ ಕ್ರಷರ್‌ನ ಜಾಗವನ್ನು ಈಗ ಡೀಮ್ಡ್‌ ಫಾರೆಸ್ಟ್ ಪ್ರದೇಶಕ್ಕೆ ಸೇರಿದೆ ಎಂದು ನಿಲ್ಲಿಸುತ್ತಾರೆ. ಆದರೆ ಸಂಸದರ ಪಕ್ಕದಲ್ಲೇ ಇರುವವರು ಡೀಮ್ಡ್‌ ಫಾರೆಸ್ಟ್ ಹಾಗೂ ಮೀಸಲು ಅರಣ್ಯಪ್ರದೇಶದಲ್ಲಿ ಕ್ರಷರ್ ನಡೆಸುತ್ತಿದ್ದರೂ ಜಿಲ್ಲಾಧಿಕಾರಿಗಳು ಸುಮ್ಮನಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಲೂಕು ಹುಲಿವಾಲ ಗ್ರಾಮದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರಿಗೆ ಭೂಮಿ ನೋಂದಣಿಯನ್ನು ನುಗ್ಗೆಹಳ್ಳಿಯಲ್ಲಿ ನೋಂದಣಿ ಕಚೇರಿಯಲ್ಲಿ ಮಾಡಿಸುತ್ತಾರೆ ನಮ್ಮೂರಿನಲ್ಲಿ ನೋಂದಣಿ ಕಚೇರಿ ಇಲ್ವ, ಈ ಕೆಲಸಕ್ಕೆ ಏನ್ನಂತೀರಿ ಎಂದರು. ಹಾಸನ ನಗರಸಭೆ ಚುನಾವಣೆ ಸಂದರ್ಭದಲ್ಲಿ ನೀವು ತಿಳಿಸಿದ ವ್ಯಕ್ತಿ ಬಿಜೆಪಿ ಜೊತೆ ಸೇರಿ ಯಾರಿಗೆ ಮತ ನೀಡಿದರು ಎಂಬುದು ಎಲ್ಲರಿಗೂ ಗೊತ್ತಿದೆ, ಈ ರೀತಿ ಮತ ನೀಡುವಾಗ ನೈತಿಕತೆ ಇರಬೇಕಲ್ವಾ ಎಂದು ಪ್ರಶ್ನಿಸಿದರು.

ತಾಲೂಕಿನ ಗ್ರಾಮ ಪಂಚಾಯಿತಿ ಒಂದರಲ್ಲಿ 17 ಲಕ್ಷ ರುಪಾಯಿಗಳ ಬೋಗಸ್ ಬಿಲ್ ಮಾಡಿದ ಕುರಿತು ಶಾಸಕ ಮಂಜಣ್ಣ ಅವರು ವಿಧಾನಸಭೆಯಲ್ಲಿ ಪ್ರಶ್ನಿಸಿದ್ದಾರೆ. ಇದನ್ನ ಅಧಿಕಾರಿಗಳು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕಿತ್ತು, ಏಕೆ ಮಾಡಿಲ್ಲ ಪ್ರಶ್ನಿಸಿ, ಒಬ್ಬ ಅಧಿಕಾರಿಯ ಬೇಜವಾಬ್ದಾರಿ ವರ್ತನೆಯನ್ನು ವಿಧಾನಸಭೆಯಲ್ಲಿ ಪ್ರಶ್ನೆ ಮಾಡಿದ್ದಾರೆ ಎಂದು ಶಾಸಕ ಮಂಜಣ್ಣ ನಡೆಯನ್ನು ರೇವಣ್ಣ ಅವರು ಸಮರ್ಥಿಸಿದರು.

ಹಾಸನ ಮೆಡಿಕಲ್ ಕಾಲೇಜು, ಹಾಸನ ಹಾಗೂ ಹೊಳೆನರಸೀಪುರ ಫ್ಲೈಓವರ್‌ಗಳು ಎಷ್ಟು ವರ್ಷದಿಂದ ಬಾಕಿ ಉಳಿದಿತ್ತು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಆಡಳಿತದಲ್ಲಿ ಈ ಕಾರ್ಯಗಳಿಗೆ ಚಾಲನೆ ನೀಡಿ, ಜನರಿಗೆ ಉಪಯೋಗ ಆಗುವಂತಹ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಲಾಯಿತು. ಆದರೆ ಈಗ ಏರ್ಪೋರ್ಟಿಗೆಂದು ಭೂಸ್ವಾಧೀನ ಪಡಿಸಿಕೊಂಡ ಭೂಮಿಯನ್ನು ಕಬಳಿಸಲು ಹೊರಟಿದ್ದಾರೆ. ಇದನೆಲ್ಲ ನೋಡಿಕೊಂಡು ಹೇಗೆ ಸುಮ್ಮನಿರಲು ಸಾಧ್ಯ. ಕಾನೂನು ಬಾಹಿರ ಕೆಲಸ ಮಾಡುವುದನ್ನು ಪ್ರಶ್ನಿಸುವುದು ತಪ್ಪಾ, ಅಧಿಕಾರಿಗಳಿಗೆ ಲೂಟಿ ಮಾಡಿಕೊಂಡು ಇರಲು ಬಿಡಬೇಕು ಎಂದು ಮೂದಲಿಸಿದರು. ಅವರದೇ ಸರ್ಕಾರ ಇರುವಾಗ ನಾ ಹೇಗೆ ಕಿರುಕುಳ ನೀಡಲು ಸಾಧ್ಯ ರೀ ಅವರೇ ಅಧಿಕಾರಿಗಳು ಆಕಿಸಿಕೊಂಡು ಬರುತ್ತಾರೆ ಜತೆಗೆ ಇಂದಿನ ಆಡಳಿತದಿಂದ ಜನರಿಗೆ ಬಹಳ ಹಿಂಸೆಯಾಗುತ್ತಿದೆ. ಜನರ ಕೆಲಸ ಆಗುತ್ತಿಲ್ಲವೆಂದು ಬೇಸರದಿಂದ ನುಡಿದರು.

ದನದ ದೊಡ್ಡಿಯಂತಾಗಿದೆ ಹಿಮ್ಸ್‌: ರೇವಣ್ಣ ಅಸಮಾಧಾನ

ಇತ್ತೀಚಿನ ದಿನಗಳಲ್ಲಿ ಹಾಸನದ ಹಿಮ್ಸ್ ಆಸ್ಪತ್ರೆ ದನದ ದೊಡ್ಡಿಯಂತಾಗಿದೆ. ಈ ಬಗ್ಗೆ ವ್ಯಾಪಕ ದೂರುಗಳಿದ್ದು ಜಿಲ್ಲಾಧಿಕಾರಿಗಳು ಇಂತಹವುಗಳನ್ನು ಪರಿಶೀಲಿಸಿ ಕ್ರಮ ತೆಗೆದುಕೊಂಡು ಬಡಜನರಿಗೆ ಅನುಕೂಲ ಕಲ್ಪಿಸಿಲಿ ಎಂದು ಸಲಹೆ ನೀಡಿದರು. ಹೊಳೆನರಸೀಪುರ ಆಸ್ಪತ್ರೆಗೆ ಎಲ್ಲ ಅಗತ್ಯ ಸೌಲಭ್ಯಗಳನ್ನು, ಅಗತ್ಯಕ್ಕೆ ತಕ್ಕಷ್ಟು ವೈದ್ಯರನ್ನು ಹಾಕಿಸಿದ್ದೇನೆ. ಶಾಸಕರ ನಿಧಿಯಿಂದ ಕೆಲವು ಯಂತ್ರೋಪಕರಣ ಕೊಡಿಸಿದ್ದೇನೆ. ಇಲ್ಲಿ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಪ್ರಶಂಶಿಸಿದರು. ಡಿ ಗ್ರೂಪ್ ನೌಕರರನ್ನು ನೇಮಿಸಿಕೊಳ್ಳಲು ಹೊರಗುತ್ತಿಗೆಯ ಅವಧಿ ಮುಗಿದು ಟೆಂಡರ್ ಹಾಕಿ ತಿಂಗಳು ಕಳೆದಿದ್ದರೂ ಜಿಲ್ಲಾಧಿಕಾರಿಗಳು ಇನ್ನೂ ಅನುಮೋದನೆ ನೀಡಿಲ್ಲ ಎಂದರು.



Source link

Leave a Reply

Your email address will not be published. Required fields are marked *