ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಮಾರ್ಚ್ 23ರ ದಿನಭವಿಷ್ಯ

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಮಾರ್ಚ್ 23ರ ದಿನಭವಿಷ್ಯ


ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3 ರ ಮಾರ್ಚ್ 23 ರ ದಿನಭವಿಷ್ಯ

ನಿಮ್ಮಲ್ಲಿ ಯಾರು ಆಸ್ತಿ- ಮನೆ ಮೊದಲಾದ ಖರೀದಿಗೆ ಪ್ರಯತ್ನ ಮಾಡುತ್ತಾ ಇದ್ದೀರಿ ಅಂಥವರು ಬೆಲ್ಲವನ್ನು ದಾನ ಮಾಡಿ. ಇದರಿಂದ ನಿಮ್ಮ ಮನಸಿಗೆ ಒಪ್ಪುವಂಥದ್ದು ಆಸ್ತಿ- ಮನೆ ದೊರೆಯಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ಜೊತೆಗೆ ಕೆಲಸ ಮಾಡುವವರು ನಿಮ್ಮ ಸಾಮರ್ಥ್ಯದ ಬಗ್ಗೆ ಅಚ್ಚರಿ ವ್ಯಕ್ತಪಡಿಸಲಿದ್ದಾರೆ. ನಿಮ್ಮಲ್ಲಿ ಯಾರು ಸೈಟು, ಮನೆ ಅಥವಾ ಅಪಾರ್ಟ್ ಮೆಂಟ್ ಖರೀದಿಸುವ ಸಲುವಾಗಿ ಮಾಡುವ ಪ್ರಯತ್ನವನ್ನು ಮಾಡುತ್ತಿರುವ ಅಂಥವರಿಗೆ ಮನಸ್ಸಿಗೆ ಒಪ್ಪುವಂಥದ್ದು ದೊರೆಯುವ ಯೋಗವಿದೆ. ಯಾವುದೇ ಮುಖ್ಯ ಕೆಲಸದ ಮೇಲೆ ಮನೆಯಿಂದ ಹೊರಗೆ ಹೋಗುವಾಗ ಮನೆ ದೇವರನ್ನು ಮನಸ್ಸಲ್ಲಿ ಸ್ಮರಿಸಿಕೊಳ್ಳಿ.

ಜನ್ಮಸಂಖ್ಯೆ 2 (ಯಾವುದೇ ತಿಂಗಳ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ಬಜೆಟ್ ನಲ್ಲಿಯೇ ಕೆಲಸ- ಕಾರ್ಯಗಳನ್ನು ಮುಗಿಸಬೇಕು ಎಂಬ ಲೆಕ್ಕಾಚಾರ ನಿಮ್ಮಲ್ಲಿ ಇರಲಿದೆ. ಕುಟುಂಬದ ಸದಸ್ಯರ ಅಗತ್ಯಗಳಿಗೆ ಕೆಲವು ವಸ್ತುಗಳನ್ನು ಕೊಳ್ಳಬೇಕು ಎಂಬ ತೀರ್ಮಾನವನ್ನು ಮಾಡಲಾಗಿದೆ. ಹೊಸ ವಾಹನ ಖರೀದಿಗೆ ನಿರ್ಧಾರ ಮಾಡುವ ಸಾಧ್ಯತೆ ಇದೆ. ಇನ್ನು ನಿಮ್ಮಲ್ಲಿ ಅಚ್ಚರಿಯ ರೀತಿಯಲ್ಲಿ ಸೆಕೆಂಡ್ ಹ್ಯಾಂಡ್ ವಾಹನಗಳನ್ನು ಖರೀದಿಸಲು ಮಾಡಿಬಿಡುವ ಅವಕಾಶಗಳು ಸಹ ಹೆಚ್ಚಿವೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ಈ ದಿನ ನಿಮ್ಮ ಸಾಮಾಜಿಕ ಸ್ಥಾನ-ಮಾನಗಳು ವೃದ್ಧಿಯಾಗುವ ಸಾಧ್ಯತೆಗಳು ಹೆಚ್ಚಿವೆ. ವಿದ್ಯಾರ್ಥಿಗಳು ತಾತ್ಕಾಲಿಕವಾಗಿ ಮನೆಯಿಂದ ದೂರ ಇದ್ದು, ವ್ಯಾಸಂಗ ಮಾಡಬೇಕಾದ ಸನ್ನಿವೇಶ ಸೃಷ್ಟಿಯಾಗಬಹುದು. ಆದರೆ ಇದರಿಂದ ನಿಮಗೆ ಅನುಕೂಲವೇ ಆಗಲಿದೆ. ಲ್ಯಾಪ್ ಟಾಪ್, ಇಂತಹವನ್ನು ಖರೀದಿಸುವ ಯೋಗ ನಿಮ್ಮ ಪಾಲಿಗೆ ಇದೆ.

ಲೇಖನ- ಸ್ವಾತಿ ಎನ್.ಕೆ.



Source link

Leave a Reply

Your email address will not be published. Required fields are marked *