Headlines

8931 ದಿನ ಸರ್ಕಾರದ ನೇತೃತ್ವ : ಪ್ರಧಾನಿ ಮೋದಿ ಹೊಸ ದಾಖಲೆ- ಸಿಕ್ಕಿಂ ಮಾಜಿ ಸಿಎಂ ಚಾಮ್ಲಿಂಗ್‌ ಹಿಂದಿಕ್ಕಿ ಸಾಧನೆ | Pm Modi Becomes Longest Serving Head Of Government In India

8931 ದಿನ ಸರ್ಕಾರದ ನೇತೃತ್ವ : ಪ್ರಧಾನಿ ಮೋದಿ ಹೊಸ ದಾಖಲೆ- ಸಿಕ್ಕಿಂ ಮಾಜಿ ಸಿಎಂ ಚಾಮ್ಲಿಂಗ್‌ ಹಿಂದಿಕ್ಕಿ ಸಾಧನೆ | Pm Modi Becomes Longest Serving Head Of Government In India



8931 ದಿನ ಸರ್ಕಾರದ ನೇತೃತ್ವ : ಪ್ರಧಾನಿ ಮೋದಿ ಹೊಸ ದಾಖಲೆ- ಸಿಕ್ಕಿಂ ಮಾಜಿ ಸಿಎಂ ಚಾಮ್ಲಿಂಗ್‌ ಹಿಂದಿಕ್ಕಿ ಸಾಧನೆ | Pm Modi Becomes Longest Serving Head Of Government In India

ಗುಜರಾತ್ ಮುಖ್ಯಮಂತ್ರಿ ಮತ್ತು ದೇಶದ ಪ್ರಧಾನಿಯಾಗಿ (ಒಟ್ಟಾರೆ ಚುನಾಯಿತ ಸರ್ಕಾರಗಳ ಮುಖ್ಯಸ್ಥರಾಗಿ) ನರೇಂದ್ರ ಮೋದಿ ಭಾನುವಾರ 8,931 ದಿನಗಳನ್ನು ಪೂರ್ಣಗೊಳಿಸಿದ್ದಾರೆ. ಈ ಮೂಲಕ ದೇಶದಲ್ಲಿ ಚುನಾಯಿತ ಸರ್ಕಾರದ ಅತ್ಯಂತ ದೀರ್ಘಾವಧಿಯ ಮುಖ್ಯಸ್ಥರೆನ್ನುವ ದಾಖಲೆ ಬರೆದಿದ್ದಾರೆ.

ನವದೆಹಲಿ: ಗುಜರಾತ್ ಮುಖ್ಯಮಂತ್ರಿ ಮತ್ತು ದೇಶದ ಪ್ರಧಾನಿಯಾಗಿ (ಒಟ್ಟಾರೆ ಚುನಾಯಿತ ಸರ್ಕಾರಗಳ ಮುಖ್ಯಸ್ಥರಾಗಿ) ನರೇಂದ್ರ ಮೋದಿ ಭಾನುವಾರ 8,931 ದಿನಗಳನ್ನು ಪೂರ್ಣಗೊಳಿಸಿದ್ದಾರೆ. ಈ ಮೂಲಕ ದೇಶದಲ್ಲಿ ಚುನಾಯಿತ ಸರ್ಕಾರದ ಅತ್ಯಂತ ದೀರ್ಘಾವಧಿಯ ಮುಖ್ಯಸ್ಥರೆನ್ನುವ ದಾಖಲೆ ಬರೆದಿದ್ದಾರೆ.

ಸಿಕ್ಕಿಂನ ಮಾಜಿ ಮುಖ್ಯಮಂತ್ರಿ ಪವನ್‌ ಕುಮಾರ್‌ ಚಾಮ್ಲಿಂಗ್‌ 8,930 ದಿನ ಸರ್ಕಾರದ ಮುಖ್ಯಸ್ಥರಾಗಿ ಅಧಿಕಾರದಲ್ಲಿದ್ದರು. ಇದೀಗ ಮೋದಿಯವರು ಚಾಮ್ಲಿಂಗ್‌ ಅವರ ದಾಖಲೆಯನ್ನು ಮುರಿದಿದ್ದಾರೆ.

ಮೋದಿ 2001ರ ಅ.7ರಂದು ಗುಜರಾತ್‌ ಮುಖ್ಯಮಂತ್ರಿ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಈ ಹುದ್ದೆಯಲ್ಲಿ ಅವರು 2014ರ ಮೇ 26ರವರೆಗೆ ಮುಂದುವರಿದಿದಿದ್ದರು ಹಾಗೂ ನಂತರ ದೇಶದ ಪ್ರಧಾನಿ ಆದರು. ಅವರು ಸಿಎಂ ಆದಾಗಿನಿಂದ ಇಂದಿನವರೆಗೂ ಒಂದೂ ದಿನ ಅಧಿಕಾರದಿಂದ ದೂರ ಉಳಿದಿಲ್ಲ.

ಮೋದಿಯವರ ಈ ಸಾಧನೆಗೆ ಗೃಹಸಚಿವ ಅಮಿತ್‌ ಶಾ ಸೇರಿ ಹಲವು ನಾಯಕರು ಅಭಿನಂದನೆ ಸಲ್ಲಿಸಿದ್ದಾರೆ.

ಇತರ ಹಲವು ದಾಖಲೆ:

ತಮ್ಮ ವೃತ್ತಿಜೀವನದಲ್ಲಿ, ಪ್ರಧಾನಿ ಮೋದಿ ಹಲವಾರು ಗಮನಾರ್ಹ ದಾಖಲೆಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಗುಜರಾತ್‌ನ ಅತಿ ದೀರ್ಘಕಾಲ ಮುಖ್ಯಮಂತ್ರಿ ಮತ್ತು ಮುಖ್ಯಮಂತ್ರಿಯಾಗಿ ದೀರ್ಘಾವಧಿ ಅನುಭವ ಹೊಂದಿರುವ ಪ್ರಧಾನಿ ಎಂಬ ಹೆಗ್ಗಳಿಕೆಗಳೂ ಸೇರಿವೆ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಜನಿಸಿದ ಮೊದಲ ಪ್ರಧಾನಿ, ಸತತ 3 ಲೋಕಸಭಾ ಚುನಾವಣೆಗಳಲ್ಲಿ ಗೆದ್ದ ಪ್ರಧಾನಿ, ಲೋಕಸಭೆಯಲ್ಲಿ ಪೂರ್ಣ ಬಹುಮತ ಪಡೆದ ಮೊದಲ ಕಾಂಗ್ರೆಸ್ಸೇತರ ನಾಯಕ, 2 ಪೂರ್ಣ ಅವಧಿಗಳನ್ನು ಪೂರ್ಣಗೊಳಿಸಿದ ಮತ್ತು ಸತತ 3ನೇ ಅವಧಿಗೆ ಮರಳಿ ಅಧಿಕಾರಕ್ಕೆ ಬಂದ ಮೊದಲ ಕಾಂಗ್ರೆಸ್ಸೇತರ ಪ್ರಧಾನಿ ಎಂಬ ದಾಖಲೆಗಳೂ ಸೇರಿವೆ.

ಇನ್ನು ಈ ವರ್ಷದ ಆರಂಭದಲ್ಲಿಯೇ ಮೋದಿ ಡಿಜಿಟಲ್‌ ವೇದಿಕೆಗಳಲ್ಲಿ ಹಲವಾರು ಮೈಲುಗಲ್ಲುಗಳನ್ನು ತಲುಪಿದ್ದರು. ಯೂಟ್ಯೂಬ್ ಚಾನೆಲ್‌ನಲ್ಲಿ 3 ಕೋಟಿ ಚಂದಾದಾರರು ಮತ್ತು ಇನ್‌ಸ್ಟಾಗ್ರಾಂನಲ್ಲಿ 1 ಕೋಟಿ ಹಿಂಬಾಲಕರನ್ನು ಹೊಂದುವ ಮೂಲಕ ಜಾಗತಿಕವಾಗಿ ಅತ್ಯಂತ ಪ್ರಭಾವಿ ನಾಯಕ ಎನಿಸಿದ್ದರು.

– 14 ವರ್ಷ ಸಿಎಂ, 11 ವರ್ಷ ಪ್ರಧಾನಿ ಹುದ್ದೆ

– 2001ರಿಂದ 2014ರವರೆಗೆ ಗುಜರಾತ್‌ ಮುಖ್ಯಮಂತ್ರಿಯಾಗಿ ಸೇವೆ

– ಬಳಿಕ ಸತತ 11 ವರ್ಷಗಳಿಂದ ಪ್ರಧಾನಿಯಾಗಿ ಮೋದಿ ಅಧಿಕಾರ

– 1994-2019ರವರೆಗೆ ಸಿಕ್ಕಿಂ ಸಿಎಂ ಆಗಿದ್ದ ಚಾಮ್ಲಿಂಗ್‌ ದಾಖಲೆ ಭಗ್ನ

– 3 ಲೋಕಸಭಾ ಚುನಾವಣೆಗಳನ್ನು ಗೆದ್ದ ಮೊದಲ ಪ್ರಧಾನಿ ದಾಖಲೆ

– ಸತತ 3ನೇ ಅವಧಿಗೆ ಮರಳಿ ಅಧಿಕಾರಕ್ಕೆ ಬಂದ ಮೊದಲ ಕಾಂಗ್ರೆಸ್ಸೇತರ ಪ್ರಧಾನಿ ಎಂಬ ದಾಖಲೆಯೂ ಮೋದಿಗಿದೆ



Source link

Leave a Reply

Your email address will not be published. Required fields are marked *