Headlines

ಮಧ್ಯಪ್ರಾಚ್ಯ ದೇಶಗಳ ಯುದ್ಧದ ಬಳಿಕ ಮಂಗಳೂರಿಗೆ ಬಂತು ಪ್ರಥಮ ಎಲ್‌ಪಿಜಿ ಹಡಗು- ಚೀನಾಕ್ಕೆ ಹೊರಟಿದ್ದ ಅಕ್ವಾ ಟೈಟಾನ್‌ | First Liquefied Petroleum Gas Tanker Reaches Mangaluru After War Disruptions

ಮಧ್ಯಪ್ರಾಚ್ಯ ದೇಶಗಳ ಯುದ್ಧದ ನಡುವೆ ಶನಿವಾರ ಕಚ್ಚಾತೈಲ ಹಡಗು ಮಂಗಳೂರು ಬಂದರಿಗೆ ಆಗಮಿಸಿದ ಬೆನ್ನಲ್ಲೇ ಭಾನುವಾರ ಎಲ್‌ಪಿಜಿ ಹೊತ್ತ ಮತ್ತೊಂದು ಸರಕು ಹಡಗು ಬಂದು ತಲುಪಿದೆ. ಪಿಕ್ಸಿಸ್ ಪಯನೀರ್ ಹೆಸರಿನ ಈ ಸರಕು ಹಡಗು 16 ಸಾವಿರ ಮೆಟ್ರಿಕ್‌ ಟನ್‌ ಎಲ್‌ಪಿಜಿ ಹೊತ್ತು ತಂದಿದೆ.

ಮಂಗಳೂರು : ಮಧ್ಯಪ್ರಾಚ್ಯ ದೇಶಗಳ ಯುದ್ಧದ ನಡುವೆ ಶನಿವಾರ ಕಚ್ಚಾತೈಲ ಹಡಗು ಮಂಗಳೂರು ಬಂದರಿಗೆ ಆಗಮಿಸಿದ ಬೆನ್ನಲ್ಲೇ ಭಾನುವಾರ ಎಲ್‌ಪಿಜಿ ಹೊತ್ತ ಮತ್ತೊಂದು ಸರಕು ಹಡಗು ಬಂದು ತಲುಪಿದೆ. ಪಿಕ್ಸಿಸ್ ಪಯನೀರ್ ಹೆಸರಿನ ಈ ಸರಕು ಹಡಗು ಅಮೆರಿಕದ ಟೆಕ್ಸಾಸ್‌ನಿಂದ ಸುಮಾರು 16 ಸಾವಿರ ಮೆಟ್ರಿಕ್‌ ಟನ್‌ ಎಲ್‌ಪಿಜಿ ಹೊತ್ತು ತಂದಿದೆ. ಯುದ್ಧ ಆರಂಭವಾದ ಬಳಿಕ ವಿದೇಶದಿಂದ ಕರ್ನಾಟಕಕ್ಕೆ ಆಗಮಿಸಿದ ಮೊದಲ ಎಲ್‌ಪಿಜಿ ಹಡಗು ಇದು.

ಮಾ.14ರಂದು ಅಮೆರಿಕದಿಂದ ಹೊರಟಿದ್ದ ಈ ಪಿಕ್ಸಿಸ್ ಪಯನೀರ್

ಮಾ.14ರಂದು ಅಮೆರಿಕದಿಂದ ಹೊರಟಿದ್ದ ಈ ಪಿಕ್ಸಿಸ್ ಪಯನೀರ್ ಹಡಗು ಯಶಸ್ವಿಯಾಗಿ ಮಂಗಳೂರು ತಲುಪಿದ್ದು, ಅನ್‌ಲೋಡಿಂಗ್‌ ಕಾರ್ಯ ಕೂಡ ಆರಂಭವಾಗಿದೆ ಎಂದು ತಿಳಿದುಬಂದಿದೆ.

ರಷ್ಯಾದಿಂದ ಚೀನಾಕ್ಕೆ ಹೊರಟಿದ್ದ ಅಕ್ವಾ ಟೈಟಾನ್‌

ಇದಕ್ಕೂ ಮೊದಲು ಶನಿವಾರ, ರಷ್ಯಾದಿಂದ ಚೀನಾಕ್ಕೆ ಹೊರಟಿದ್ದ ಅಕ್ವಾ ಟೈಟಾನ್‌ ಹೆಸರಿನ ಕಚ್ಛಾ ತೈಲ ಹೊತ್ತ ಬೃಹತ್‌ ಹಡಗು ಮಂಗಳೂರು ತಲುಪಿದ್ದು, ಪೈಪ್‌ಲೈನ್‌ ಮೂಲಕ ಎಂಆರ್‌ಪಿಎಲ್‌ ಸಂಸ್ಕರಣಾ ಘಟಕಕ್ಕೆ ತೈಲ ಇಳಿಸುವ ಭಾನುವಾರವೂ ಮುಂದುವರಿದಿದೆ. ಈ ಎರಡು ಹಡಗುಗಳ ಆಗಮನದಿಂದಾಗಿ ತೈಲ ಮತ್ತು ಅನಿಲ ಭೀತಿಯಲ್ಲಿದ್ದ ರಾಜ್ಯದ ಜನತೆ ನಿಟ್ಟುಸಿರು ಬಿಡುವಂತಾಗಿದೆ. ಎಲ್ಲೆಡೆ ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್‌ಗಳ ಅಭಾವ ತಲೆದೋರಿದ್ದು, ಹೊಟೇಲ್‌, ಕ್ಯಾಂಟಿನ್‌ಗಳು ಮುಚ್ಚುವ ಸ್ಥಿತಿಗೆ ತಲುಪಿದ್ದವು. ಇದೀಗ ಅನಿಲ ಹೊತ್ತ ನೌಕೆ ಆಗಮಿಸಿರುವುದು ವ್ಯಾಪಾರಿಗಳಲ್ಲಿ ಹರ್ಷ ತಂದಿದೆ.

Source link

Leave a Reply

Your email address will not be published. Required fields are marked *