‘ನನ್ನ ನಿಶ್ಚಿತಾರ್ಥ ಆಯ್ತು, ಆದ್ರೆ ನನಗೆ ಹೋಗೋಕೆ ಆಗಿಲ್ಲ’; ವದಂತಿಗೆ ಅನುಪಮಾ ಸ್ಪಷ್ಟನೆ

‘ನನ್ನ ನಿಶ್ಚಿತಾರ್ಥ ಆಯ್ತು, ಆದ್ರೆ ನನಗೆ ಹೋಗೋಕೆ ಆಗಿಲ್ಲ’; ವದಂತಿಗೆ ಅನುಪಮಾ ಸ್ಪಷ್ಟನೆ


'ನನ್ನ ನಿಶ್ಚಿತಾರ್ಥ ಆಯ್ತು, ಆದರೆ ನನಗೆ ಹೋಗೋಕೆ ಆಗಿಲ್ಲ'; ವದಂತಿಗೆ ಅನುಪಮಾ ಸ್ಪಷ್ಟನೆ

ಅನುಪಮಾ ಗೌಡ ಅವರು (ಅನುಪಮಾ ಗೌಡ) ನಟಿ ಹಾಗೂ ನಿರೂಪಕಿ. ಕಲರ್ಸ್ ಶೋಗಳನ್ನು ಅವರು ಹೋಸ್ಟ್ ಮಾಡುತ್ತಾರೆ. ಈಗ ಅವರು ನಿರೂಪಣೆಯಲ್ಲಿ ಬ್ಯೂಸಿ ಇದ್ದಾರೆ. ಈ ಮೊದಲು ಬಿಗ್ ಬಾಸ್ ಅಲ್ಲಿ ಅನುಪಮಾ ಗೌಡ ಅವರು ಮಿಂಚಿದ್ದರು. ಕಳೆದ ಕೆಲ ದಿನಗಳಿಂದ ಅವರ ನಿಶ್ಚಿತಾರ್ಥ ಎಂಬ ಸುದ್ದಿ ಹರಿದಾಡಿತ್ತು. ಇದಕ್ಕೆ ಅವರು ಸ್ಪಷ್ಟನೆ ನೀಡಿದ್ದಾರೆ.

ಇತ್ತೀಚೆಗೆ ಅವರ ಗೆಳೆಯ ರಾಘವ್ ಜೊತೆ ಅನುಪಮಾ ಗೌಡ ಫೋಟೋ ಹಂಚಿಕೊಂಡಿದ್ದರು. ಈ ಫೋಟೋ ನೋಡಿದ ಅನೇಕರು ಅನುಪಮಾ ಗೌಡ ನಿಶ್ಚಿತಾರ್ಥ ಮಾಡಿಕೊಂಡರು ಎಂದೆಲ್ಲ ಸುದ್ದಿ ಹಬ್ಬಿಸಿದರು. ಈ ವಿಷಯದ ಕುರಿತು ಅನುಪಮಾ ಗೌಡ ಅವರು ನೇರವಾಗಿ ಪ್ರತಿಕ್ರಿಯಿಸಿದ್ದಾರೆ. ಈ ವದಂತಿ ಸುಳ್ಳು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅನುಪಮಾ ಗೌಡ ಅಂದಕ್ಕೆ ಸರಿ ಸಾಟಿಯಾರು? ವಿಡಿಯೋ ನೋಡಿ

‘ಒಂದು ಸೀಕ್ರೆಟ್ ಶೇರ್ ಮಾಡಬೇಕಿತ್ತು. ನಾನು ಸಾಮಾನ್ಯವಾಗಿ ಯಾವುದಕ್ಕೂ ರಿಯಾಕ್ಟ್ ಮಾಡಲ್ಲ. ಆದರೆ, ಶೂಟ್‌ಗೆ ಬಂದಾಗ ಎಲ್ಲರೂ ಕನ್ನಡಿಗ ಹೇಳಿದರು. ಮೆಸೇಜ್ ಕೂಡ ಬರುತ್ತಿತ್ತು. ನನ್ನ ಬೆಸ್ಟ್ ಫ್ರೆಂಡ್ ರಾಘವ್ ಜೊತೆ ಎಂಗೇಜ್ಮೆಂಟ್ ಆಯ್ತು. ಆದರೆ ಎಂಗೇಜ್ಮೆಂಟ್ಗೆ ಹಾಜರಾಗಲು ನಮಗೆ ಸಾಧ್ಯವಾಗಲಿಲ್ಲ. ನಮಗೆ ಯಾರೂ ಮಾಹಿತಿ ನೀಡಲಿಲ್ಲ. ಒಂದಷ್ಟು ಪೇಜ್‌ನವರು ಈ ರೀತಿ ಸುದ್ದಿ ಹಬ್ಬಿಸುತ್ತಿದ್ದಾರೆ’ ಎಂದು ವ್ಯಂಗ್ಯವಾಗಿ ಅನುಪಮಾ ಮಾತನಾಡಿದ್ದಾರೆ.

 

Instagram ನಲ್ಲಿ ಈ ಪೋಸ್ಟ್ ಅನ್ನು ವೀಕ್ಷಿಸಿ

 

ರಾಘವ (@_raaghava) ಅವರು ಹಂಚಿಕೊಂಡ ಪೋಸ್ಟ್

 

Instagram ನಲ್ಲಿ ಈ ಪೋಸ್ಟ್ ಅನ್ನು ವೀಕ್ಷಿಸಿ

 

ಸಾರ್ವಭೌಮ ಟಿವಿ (@sarvabhauma_tv) ಅವರು ಹಂಚಿಕೊಂಡ ಪೋಸ್ಟ್

‘ಮುಂದಿನ ಬಾರಿ ಒಳ್ಳೆಯ ಇಮೇಜ್ ಕ್ರಿಯೇಟ್ ಮಾಡಿ. ಉಂಗುರು ಹಾಕುವ ರೀತಿಯ ಫೋಟೋ ಸೃಷ್ಟಿ ಮಾಡಿ. ಈಗ ಹೇಗಿದ್ದರೂ ಎಐ ಬಂದಿದೆ. ಆಗ ಇನ್ನೂ ಖುಷಿಯಾಗುತ್ತದೆ. ಇನ್ನೂ ಟೈಮ್ ಇದೆ. ಮದುವೆನ ಈಗಲೇ ಮಾಡಿಸೋಕೆ ಹೋಗಬೇಡಿ. ಎರಡು ತಿಂಗಳು ಬಿಟ್ಟು ಮಾಡಿ. ಆಗ ಜನರು ನೋಡ್ತಾರೆ. ಟ್ರೆಡಿಷಿನಲ್ ಔಟ್ ಫಿಟ್ ಹಾಕಿ. ನನ್ನ ರಾಘವ್ ಅವರನ್ನು ಮದುವೆಗೆ ಕರೆಯಿರಿ’ ಎಂದು ಅನುಪಮಾ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.





Source link

Leave a Reply

Your email address will not be published. Required fields are marked *