Headlines

ಜರ್ಮನಿಯಲ್ಲಿ ಉದ್ಯೋಗಿಗಳ ಕೊರತೆ, ಲಕ್ಷಾಂತರ ಭಾರತೀಯರಿಗೆ ಭರ್ಜರಿ ವೇತನದ ಆಫರ್

ಜರ್ಮನಿಯಲ್ಲಿ ಉದ್ಯೋಗಿಗಳ ಕೊರತೆ, ಲಕ್ಷಾಂತರ ಭಾರತೀಯರಿಗೆ ಭರ್ಜರಿ ವೇತನದ ಆಫರ್

ಜರ್ಮನಿಯಲ್ಲಿ ಉದ್ಯೋಗಿಗಳ ಕೊರತೆ, ಲಕ್ಷಾಂತರ ಭಾರತೀಯರಿಗೆ ಭರ್ಜರಿ ವೇತನದ ಆಫರ್

ಜರ್ಮನಿಯಲ್ಲಿ ಉದ್ಯೋಗಿಗಳ ಕೊರತೆ, ಲಕ್ಷಾಂತರ ಭಾರತೀಯರಿಗೆ ಭರ್ಜರಿ ವೇತನದ ಆಫರ್ ನೀಡಿದೆ. ಈಗಾಗಲೇ ಭಾರತದ ಜೊತೆ ಒಪ್ಪಂದ ಮಾಡಿಕೊಂಡಿರುವ ಜರ್ಮನಿ, ಭಾರತದ ಯುವ ಹಾಗೂ ನುರಿತ ಪ್ರತಿಭೆಗಳಿಗೆ ಭರ್ಜರಿ ಸ್ವಾಗತ ನೀಡುತ್ತಿದೆ.

ಭಾರತದಲ್ಲಿ ಉದ್ಯೋಗಕ್ಕಾಗಿ ಲಕ್ಷಾಂತರ ಮಂದಿ ಪ್ರತಿ ದಿನ ಅಲೆದಾಡುತ್ತಿದ್ದಾರೆ. ಪ್ರತಿಭೆ, ಅನುಭವ ಇದ್ದರೂ ಸರಿಯಾದ ಉದ್ಯೋಗ ಸಿಗುತ್ತಿಲ್ಲ ಅನ್ನೋ ಕೂಗು ಇದೆ. ಇದೀಗ ಭಾರತೀಯರಿಗೆ ಜರ್ಮನಿ ಭರ್ಜರಿ ಆಫರ್ ನೀಡಿದೆ. ಜರ್ಮನಿಯಲ್ಲಿ ಉದ್ಯೋಗಿಗಳ ಕೊರತೆ ಇದೆ. ಹಲವು ಹುದ್ದೆಗಳು ಖಾಲಿ ಇದೆ. ಉದ್ಯೋಗಿಗಳ ಕೊರತೆ ಎದುರಿಸುತ್ತಿರುವ ಜರ್ಮನಿ ನುರಿತ ಹಾಗೂ ಪ್ರತಿಭಾವಂತರಿಗೆ ಮಣೆ ಹಾಕಲು ಮುಂದಾಗಿದೆ.

ಉದ್ಯೋಗ ಸಮಸ್ಯೆ ನೀಗಿಸಲು ಭಾರತದ ನೆರವು ಕೇಳಿದೆ. ಜರ್ಮನಿ ಇದೀಗ ಭಾರತೀಯರಿಗೆ ಉತ್ತಮ ವೇತನ ಸೇರಿದಂತೆ ಹಲುವ ಸೌಲಭ್ಯಗಳ ಉದ್ಯೋಗ ಆಫರ್ ನೀಡಿದೆ. ಭಾರತದ ಕಾರ್ಮಿಕರ ಮೇಲೆ ಜರ್ಮನಿ ಅತೀವ ನಂಬಿಕೆ ಹಾಗೂ ವಿಶ್ವಾಸ ಇಟ್ಟುಕೊಂಡಿದೆ. ಜರ್ಮನಿಯ ಆರ್ಥಿಕತೆ ಹಾಗೂ ಕೈಗಾರಿಗಳ ಕಾರ್ಮಿಕರ ಕೊರತೆ ನೀಗಿಸಲು ಭಾರತದಿಂದ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದೆ.

ಆರೋಗ್ಯ, ಐಟಿ, ಎಂಜಿನೀಯರಿಂಗ್, ಸಾಫ್ಟವೇರ್, ಕೈಗಾರಿಕೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಲಕ್ಷಾಂತರ ಉದ್ಯೋಗಳ ಭರ್ತಿಗೆ ಭಾರತೀಯರನ್ನು ಆಕರ್ಷಿಸಲು ಮುಂದಾಗಿದೆ. ನುರಿತ, ಪರಿಣಿತ ಹಾಗೂ ಪ್ರತಿಭಾವಂತ ಉದ್ಯೋಗಿಗಳನ್ನು ಉತ್ತಮ ಸ್ಯಾಲರಿ ನೀಡಿ ನೇಮಕ ಮಾಡಿಕೊಳ್ಳಲು ಜರ್ಮನಿ ತುದಿಗಾಲಲ್ಲಿ ನಿಂತಿದೆ.

ಭಾರತ ಸರ್ಕಾರದ ಜೊತೆ ಜರ್ಮನಿ ಇದೇ ಉದ್ಯೋಗ ವಿಚಾರದಲ್ಲಿ ವಲಸೆ ಒಪ್ಪಂದ ಮಾಡಿಕೊಂಡಿದೆ. ಈ ಮೂಲಕ ಜರ್ಮನಿಗೆ ಕೆಲಸಕ್ಕಾಗಿ ತೆರಳುವವರಿಗೆ ಅತೀ ಸುಲಭವಾಗಿ ವೀಸಾ ಸೇರಿದಂತೆ ಇತರ ಸೌಲಭ್ಯಗಳು ಸಿಗುವಂತೆ ಮಾಡಿದೆ. ಶೈಕ್ಷಣಿಕ ಅರ್ಹತೆ, ಇತರ ದಾಖಲೆಗಳ ಕಠಿಣ ನಿಯಮವನ್ನು ಸರಳೀಕರಣ ಮಾಡಲಾಗಿದೆ. ಕನಿಷ್ಠ ವೇತನ, ಭತ್ಯೆ, ವಿಮೆ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡಲು ಒಪ್ಪಂದ ಮಾಡಿಕೊಂಡಿದೆ.ರ್ಮನಿಯ ಚಾನ್ಸೆಲರ್ ಓಲಾಫ್ ಶೋಲ್ಜ್, ಭಾರತ ಸರ್ಕಾರ ಜೊತೆ ಕಾರ್ಮಿಕ ವಲಸೆ ಒಪ್ಪಂದ ಮಾಡಿಕೊಂಡಿದ್ದಾರೆ.

ಜರ್ಮನಿ ಈಗಾಗಲೇ ಒಪ್ಪಂದ ಮಾಡಿಕೊಂಡು ನೇಮಕಾತಿ ಕೆಲಸ ಆರಂಭಿಸಿದೆ. ಪ್ರತಿ ವರ್ಷ ಜರ್ಮನಿ 4 ಲಕ್ಷ ವಿದೇಶಿ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವ ಗುರಿ ಇಟ್ಟುಕೊಂಡಿದೆ. ಈ ಪೈಕಿ ಬಹುತೇಕ ಭಾರತದಿಂದಲೇ ನೇಮಕ ಮಾಡಿಕೊಳ್ಳಲು ಜರ್ಮನಿ ಆಸಕ್ತಿ ತೋರಿದೆ. ಭಾರತದ ಜೊತೆಗಿನ ಈ ಪಾಲುದಾರಿಗೆ ಉಭಯ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಗೊಳಿಸಲಿದೆ ಎಂದು ಜರ್ಮನಿ ಹೇಳಿದೆ.

ಭಾರತದಿಂದ ಜರ್ಮನಿಗೆ ಕೆಲಸಕ್ಕಾಗಿ ತೆರಳುವ ಬಹುತೇಕರಿಗೆ ಭಾಷೆ ಹಾಗೂ ಸಂಸ್ಕೃತಿ, ಪದ್ಧತಿಗಳ ಸಮಸ್ಯೆ ಎದುರಾಗಲಿದೆ. ಇದನ್ನು ನೀಗಿಸಲು ಒಪ್ಪಂದದಲ್ಲೇ ಮಹತ್ವದ ಕೆಲಸಕ್ಕೂ ಗ್ರೀನ್ ಸಿಗ್ನಲ್ ಪಡೆದುಕೊಂಡಿದೆ. ಭಾರತದಲ್ಲಿ ಜರ್ಮನ್ ಭಾಷಾ ತರಬೇತಿ ಕೇಂದ್ರಗಳನ್ನು ಆರಂಭಿಸುತ್ತಿದೆ. ಇದು ಒಪ್ಪಂದದ ಭಾಗವಾಗಿ ಆರಂಭಗೊಳ್ಳುತ್ತಿದೆ.

ಭಾರತದಲ್ಲಿ ಭಾಷಾ ತರಬೇತಿ ಕೇಂದ್ರ

Source link

Leave a Reply

Your email address will not be published. Required fields are marked *