Headlines

ಅಣ್ಣಾವ್ರ ಹುಟ್ಟೂರಲ್ಲಿ ಕಿಚ್ಚ ಸುದೀಪ್​ಗೆ ಗುಡಿ ಕಟ್ಟಿ ನಿತ್ಯ ಆರಾಧನೆ ಮಾಡ್ತಾರೆ ಈ ಅಭಿಮಾನಿ!

ಅಣ್ಣಾವ್ರ ಹುಟ್ಟೂರಲ್ಲಿ ಕಿಚ್ಚ ಸುದೀಪ್​ಗೆ ಗುಡಿ ಕಟ್ಟಿ ನಿತ್ಯ ಆರಾಧನೆ ಮಾಡ್ತಾರೆ ಈ ಅಭಿಮಾನಿ!


ಅಣ್ಣಾವ್ರ ಹುಟ್ಟೂರಲ್ಲಿ ಕಿಚ್ಚ ಸುದೀಪ್ ಗೆ ಗುಡಿ ಕಟ್ಟಿ ನಿತ್ಯ ಆರಾಧನೆ ಮಾಡ್ತಾರೆ ಈ ಅಭಿಮಾನಿ!

ಚಾಮರಾಜನಗರ, ಮಾರ್ಚ್ 23: ಅಣ್ಣಾವ್ರ ಹುಟ್ಟೂರಲ್ಲಿ, ಕರ್ನಾಟಕ-ತಮಿಳುನಾಡು ಗಡಿ ಭಾಗದ ತಾಳವಾಡಿ ತಾಲ್ಲೂಕಿನ ದೊಡ್ಡ ಗಾಜನೂರಿನಲ್ಲಿ ನಟ ಕಿಚ್ಚ ಸುದೀಪ್ ಅಭಿಮಾನಿಗಳು ಇದೀಗ ಕನ್ನಡಿಗರ ಗಮನ ಸೆಳೆಯುವಂತೆ ಮಾಡಿದ್ದಾರೆ. ದೊಡ್ಡ ಗಾಜನೂರು ಗ್ರಾಮದ ಸಿದ್ದರಾಜು ಎಂಬ ಅಭಿಮಾನಿ, ಸುದೀಪ್ ಮೇಲೆ ಅಪಾರ ಭಕ್ತಿ. ಐಎಸ್ ಕ್ಯಾಂಡಿ ಮಾರಾಟ ಮಾಡುತ್ತಾ ಜೀವನ ನಡೆಸುವ ಸಿದ್ದರಾಜುಗೆ ‘ಕಿಚ್ಚ’ ಸುದೀಪ್ ಎಂದರೆ ಪಂಚಪ್ರಾಣ. ಅದಕ್ಕಾಗಿ ಅವರ ಮನೆ ಬಳಿ ಸುದೀಪ್‌ಗಾಗಿ ಗುಡಿ ನಿರ್ಮಿಸಿದ್ದು, ಪ್ರತಿದಿನವೂ ನಿತ್ಯ ಆರಾಧನೆ ಮಾಡುತ್ತಾರೆ! ಸೋಮವಾರ ಮತ್ತು ಶುಕ್ರವಾರ ವಿಶೇಷ ಪೂಜೆ ಕೂಡ ಮಾಡುತ್ತಾರೆ. ಸುದೀಪ್ ಜೊತೆಗೆ ಮಹರ್ಷಿ ವಾಲ್ಮೀಕಿ ಹಾಗೂ ವೀರ ಮದಕರಿ ನಾಯಕ ಅವರನ್ನೂ ಗುಡಿಯಲ್ಲಿ ಆರಾಧಿಸುತ್ತಾ ಬರುತ್ತಿದ್ದಾರೆ.

ಸುದೀಪ್ ಅವರ ಪ್ರತಿಯೊಂದು ಸಿನಿಮಾವನ್ನೂ ‘ಫಸ್ಟ್ ಡೇ ಫಸ್ಟ್ ಶೋ’ ನೋಡುವ ಸಿದ್ದರಾಜುವಿನ ಈ ಅಭಿಮಾನಕ್ಕೆ ಅವರ ಕುಟುಂಬದವರು ಸಂಪೂರ್ಣ ಬೆಂಬಲ ನೀಡಿದ್ದಾರೆ.

ಸುದೀಪ್ ಇದೆ ವರನಟ ಡಾ. ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಬಗ್ಗೆಯೂ ಸಿದ್ದರಾಜು ಅಪಾರ ಅಭಿಮಾನವಿರಿಸಿದ್ದಾರೆ. ಸದ್ಯ, ನಟ ಸುದೀಪ್ ಮೇಲಿನ ಸಿದ್ದರಾಜು ಅವರ ಈ ವಿಶಿಷ್ಟ ಅಭಿಮಾನ ವೈರಲ್ ಆಗುತ್ತಿದೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *