ಇರಾನ್ ಯುದ್ಧದಲ್ಲಿ ಕಂಗಾಲದ ಪಾಕಿಸ್ತಾನ, ಪೆಟ್ರೋಲ್ ಬೆಲೆ ಶೇಕಡಾ 200ರಷ್ಟು ಹೆಚ್ಚಳ, ಭಾರತದಲ್ಲಿ 2 ರೂಪಾಯಿ ಏರಿಕೆ ಮಾಡಲಾಗಿದೆ. ಆದರೆ ಪಾಕಿಸ್ತಾನದಲ್ಲಿ ಬರೋಬ್ಬರಿ 200 ಪರ್ಸೆಂಟ್ ಏರಿಕೆಯಾಗಿದೆ.

ಇರಾನ್ ಹಾಗೂ ಇಸ್ರೇಲ್ ಯುದ್ದದಿಂದ ಹೊರ್ಮುಜ್ ಜಲಸಂಧಿ ಮೂಲಕ ಸರಕು ಸಾಗಾಣೆ ಹಡಗುಗಳು ಸಾಗುತ್ತಿಲ್ಲ. ಇದರ ಪರಿಣಾಮ ಗ್ಯಾಸ್, ತೈಲ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಜೊತೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ಹೀಗಾಗಿ ಪ್ರತಿ ದೇಶಗಳು ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಏರಿಕೆ ಮಾಡುತ್ತಿದೆ. ಭಾರತ ಇತ್ತೀಚೆಗೆ ಪ್ರೀಮಿಯಂ ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ 2 ರೂಪಾಯಿ ಏರಿಕೆ ಮಾಡಿತ್ತು. ಇದೀಗ ಪಾಕಿಸ್ತಾನದ ಬೆಲೆ ಏರಿಕೆಗೆ ಜನರು ಕಂಗಾಲಾಗಿದ್ದಾರೆ.

ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಪ್ ಸೇರಿದಂತೆ ಉನ್ನತ ಮಟ್ಟದ ನಿಯೋಗ ಇಂದು ಸಭೆ ಸೇರಿ ಬೆಲೆ ಏರಿಕೆಗೆ ಅನುಮೋದನೆ ನೀಡಿದೆ. ತಕ್ಷಣದಿಂದಲೇ ಪರಿಷ್ಕೃತ ಬೆಲೆ ಜಾರಿಗೆ ಬಂದಿದೆ. ಇದರೊಂದಿಗೆ ಪಾಕಿಸ್ತಾನದಲ್ಲಿ ಒಂದು ಲೀಟರ್ ಪ್ರೀಮಿಯಂ ಪೆಟ್ರೋಲ್ ಬೆಲೆ PKR 266.17 ರೂಪಾಯಿಂದ ಇದೀಗ PKR 321.17 ರೂಪಾಯಿಗೆ ಏರಿಕೆಯಾಗಿದೆ.

ಬೆಲೆ ಏರಿಕೆಯಿಂದ ಪ್ರೀಮಿಯಂ ಡೀಸೆಲ್ ಬೆಲೆ ಪಾಕಿಸ್ತಾನದಲ್ಲಿ ಒಂದು ಲೀಟರ್‌ಗೆ PKR 335.86 ರೂಪಾಯಿ ಆಗಿದೆ. PKR 280.86 ರೂಪಾಯಿ ಇದ್ದ ಡೀಸೆಲ್ ಇದೀಗ ದುಬಾರಿಯಾಗಿದೆ. ಪ್ರಿಮಿಯಂ ಪೆಟ್ರೋಲ್ ಹಾಗೂ ಡೀಸೆಲ್ ಎರಡೂ ಬೆಲೆ ಹೆಚ್ಚಾಗಿದೆ.ಇದು ಲಕ್ಷುರಿ ವಾಹನ ಸೇರಿದಂತೆ ಹೈ ಒಕ್ಟೇನ್ ಪೆಟ್ರೋಲಿಯಂ ಆಗಿದೆ. ಜನಸಾಮಾನ್ಯರು ವಾಹನಗಳಿಗೆ ಬಳಸುವ ಪೆಟ್ರೋಲ್ ಡೀಸೆಲ್ ಅಲ್ಲ.

ಮಾರ್ಚ್ 6 ರಂದು ಪಾಕಿಸ್ತಾನದಲ್ಲಿ ಸಾಮಾನ್ಯ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಮಾಡಿದೆ. ಯುದ್ದದ ಬೆನ್ನಲ್ಲೇ ಪಾಕಿಸ್ತಾನದಲ್ಲಿ ಸಾಮಾನ್ಯ ಪೆಟ್ರೋಲ್ ಬೆಲೆ ಲೀಟರ್ ಮೇಲೆ PKR 55 ರೂಪಾಯಿ ಏರಿಕೆ ಮಾಡಿತ್ತು.

ಪಾಕಿಸ್ತಾನದಲ್ಲಿ ತೈಲ ಕೊರತೆ, ಬೆಲೆ ಏರಿಕೆಯಿಂದ ಈಗಾಗಲೇ ವಿಮಾನಯಾನ ಟಿಕೆಟ್ ದರಗಳು ಏರಿಕೆಯಾಗಿದೆ. ಪಾಕಿಸ್ತಾನದಲ್ಲಿ ವಿಮಾನ ಪ್ರಯಾಣ ದುಬಾರಿಯಾಗಿದೆ. ಇದೀಗ ಬೆಲೆ ಏರಿಕೆಯಿಂದ ಮತ್ತಷ್ಟು ದುಬಾರಿಯಾಗಿದೆ. ವಿಮಾನ ಟಿಕೆಟ್ ದರ ಏರಿಕೆ ಕುರಿತು ಪಾಕಿಸ್ತಾನ ಮಾರ್ಚ್ 10 ರಂದು ಆದೇಶ ಹೊರಡಿಸಿತ್ತು.

ವಿಮಾನ ಟಿಕೆಟ್ ದರ ಹೆಚ್ಚಿಸಿದ ಪಾಕಿಸ್ತಾನ

Source link
ಇರಾನ್ ಯುದ್ಧದಲ್ಲಿ ಕಂಗಾಲದ ಪಾಕಿಸ್ತಾನ, ಪೆಟ್ರೋಲ್ ಬೆಲೆ ಶೇಕಡಾ 200ರಷ್ಟು ಹೆಚ್ಚಳ