Headlines

ಟ್ರಂಪ್ ನಮ್ಮ ಕರಾವಳಿ ಮೇಲೆ ದಾಳಿ ನಡೆಸಿದರೆ ಗಲ್ಫ್​ನಲ್ಲಿ ಸಮುದ್ರ ಗಣಿಗಳನ್ನು ಹಾಕುತ್ತೇವೆ; ಇರಾನ್ ಎಚ್ಚರಿಕೆ

ಟ್ರಂಪ್ ನಮ್ಮ ಕರಾವಳಿ ಮೇಲೆ ದಾಳಿ ನಡೆಸಿದರೆ ಗಲ್ಫ್​ನಲ್ಲಿ ಸಮುದ್ರ ಗಣಿಗಳನ್ನು ಹಾಕುತ್ತೇವೆ; ಇರಾನ್ ಎಚ್ಚರಿಕೆ


ಟ್ರಂಪ್ ನಮ್ಮ ಕರಾವಳಿಯ ಮೇಲೆ ದಾಳಿ ನಡೆಸಿದರೆ ಗಲ್ಫ್ನಲ್ಲಿ ಸಮುದ್ರ ಗಣಿಗಳನ್ನು ಹಾಕುತ್ತೇವೆ; ಇರಾನ್ ಎಚ್ಚರಿಕೆ

ಟೆಹ್ರಾನ್, ಮಾರ್ಚ್ 23: ಇರಾನ್ ದೇಶದ ಕರಾವಳಿ ಅಥವಾ ದ್ವೀಪಗಳ ಮೇಲೆ ಯಾವುದಾದರೂ ದಾಳಿ ನಡೆದರೆ ಇಡೀ ಪರ್ಷಿಯನ್ ಕೊಲ್ಲಿಯಾದ್ಯಂತ ಸ್ಫೋಟಕ ಸಮುದ್ರ ಗಣಿಗಾರಿಕೆ ನಡೆಸಲಾಗಿದೆ ಎಂದು ಇರಾನ್ ರಕ್ಷಣಾ ಮಂಡಳಿ ಇಂದು ಎಚ್ಚರಿಸಿದೆ. ಇಂದು ರಾತ್ರಿಯೊಳಗೆ ಇರಾನ್ಇರಾನ್ ಯುದ್ಧ) ಪ್ರಮುಖ ಜಲಮಾರ್ಗವನ್ನು ಮತ್ತೆ ತೆರೆಯಲು ವಿಫಲವಾದರೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಅಮೆರಿಕದ ಅಧ್ಯಕ್ಷ ಟ್ರಂಪ್ ಬೆದರಿಕೆ ಹಾಕಿದ್ದರು. ಇದರ ಬೆನ್ನಲ್ಲೇ ಇರಾನ್ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ.

ಇರಾನ್ ಮೇಲಿನ ನಿರಂತರ ದಾಳಿಗಳಿಂದಾಗಿ ಹಾರ್ಮುಜ್ ಜಲಸಂಧಿಯನ್ನು ಮುಚ್ಚಲಾಗಿದೆ. ಇದು ಜಾಗತಿಕ ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲದ ಐದನೇ ಒಂದು ಭಾಗವನ್ನು ಹೊಂದಿದೆ. ಇದು 1970 ರ ನಂತರದ ಅತ್ಯಂತ ಕೆಟ್ಟ ತೈಲ ಬಿಕ್ಕಟ್ಟನ್ನು ಉಂಟುಮಾಡಿದೆ.

ಇದನ್ನೂ ಓದಿ: ಇರಾನ್ 140 ಮಿಲಿಯನ್ ಬ್ಯಾರೆಲ್ ತೈಲವನ್ನು ಜಾಗತಿಕ ಮಾರುಕಟ್ಟೆಗೆ ಬಿಡುಗಡೆ ಮಾಡುವಂತೆ ಅಮೆರಿಕ!

“ಇರಾನ್‌ನ ಕರಾವಳಿ ಅಥವಾ ದ್ವೀಪಗಳ ಮೇಲೆ ದಾಳಿ ನಡೆಸುವ ಯಾವುದೇ ಪ್ರಯತ್ನಕ್ಕೆ ನಾವು ಸೂಕ್ತ ಉತ್ತರ ನೀಡುತ್ತೇವೆ” ಎಂದು ಇರಾನ್‌ನ ಹೇಳಿಕೆಯಲ್ಲಿ ತಿಳಿಸಲಾಗಿದೆ. ಟೆಹ್ರಾನ್‌ನಲ್ಲಿ ಹೆಚ್ಚುತ್ತಿರುವ ಕಳವಳದ ನಡುವೆ ಇರಾನ್ ಈ ಹೇಳಿಕೆಯನ್ನು ಬಿಡುಗಡೆ ಮಾಡಲಾಗಿದೆ.

ಹಾರ್ಮುಜ್ ಜಲಸಂಧಿಯನ್ನು ಎಲ್ಲಾ ಹಡಗುಗಳಿಗೆ ಮತ್ತೆ ತೆರೆಯುವಂತೆ ಟೆಹ್ರಾನ್ ಮೇಲೆ ಒತ್ತಡ ಹೇರಲು, ದೇಶದ ಪ್ರಮುಖ ತೈಲ ರಫ್ತು ಕೇಂದ್ರವಾದ ಇರಾನ್‌ನ ಖಾರ್ಗ್ ದ್ವೀಪವನ್ನು ಆಕ್ರಮಿಸಿಕೊಳ್ಳಲು ಅಥವಾ ದಿಗ್ಬಂಧನ ಮಾಡಲು ಅಮೆರಿಕ ಪ್ಲಾನ್ ಮಾಡಲಾಗುತ್ತಿದೆ. ಅದಕ್ಕೆ ತಿರುಗೇಟು ನೀಡಲು ಇರಾನ್ ಕೂಡ ಸಜ್ಜಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *