ನಿಷ್ಕ್ರಿಯ ಇಪಿಎಫ್ ಅಕೌಂಟ್​ಗಳಿಗೆ ಬಡ್ಡಿ ಸಿಗುತ್ತಾ? ಯಾವುದಕ್ಕೆ ಟ್ಯಾಕ್ಸ್ ಇರುತ್ತೆ?

ನಿಷ್ಕ್ರಿಯ ಇಪಿಎಫ್ ಅಕೌಂಟ್​ಗಳಿಗೆ ಬಡ್ಡಿ ಸಿಗುತ್ತಾ? ಯಾವುದಕ್ಕೆ ಟ್ಯಾಕ್ಸ್ ಇರುತ್ತೆ?


ನಿಷ್ಕ್ರಿಯ ಐಪಿಎಫ್ ಅಕೌಂಟ್‌ಗಳಿಗೆ ಬಡ್ಡಿ ಸಿಗುತ್ತಾ? ಯಾವುದಕ್ಕೆ ಟ್ಯಾಕ್ಸ್ ಇರುತ್ತೆ?

ಉದ್ಯೋಗಿಗಳ ಭವಿಷ್ಯ ನಿಧಿ ಅಥವಾ ಐಪಿಎಫ್ (ಇಪಿಎಫ್) ವಿಚಾರದಲ್ಲಿ ಬಹಳ ಜನರಿಗೆ ಗೊಂದಲಗಳಿವೆ. ಒಂದಕ್ಕಿಂತ ಹೆಚ್ಚು ಐಪಿಎಫ್ ಅಕೌಂಟ್‌ಗಳಿದ್ದು, ಅವು ವಿಲೀನಗೊಂಡಿರದಿದ್ದರೆ ಅವುಗಳಿಗೆ ವಾರ್ಷಿಕ ಬಡ್ಡಿ ಜಮೆ ಆಗುವುದಿಲ್ಲ ಎಂದು ಬಹಳ ಜನರು ಭಾವಿಸಿದ್ದಾರೆ. ನಿಷ್ಕ್ರಿಯ ಐಪಿಎಫ್ ಅಕೌಂಟ್‌ಗೆ ಸಂದಾಯವಾಗುವ ಬಡ್ಡಿಗೆ ಟ್ಯಾಕ್ಸ್ ಇರುತ್ತಾ ಕೆಲವರ ಸಂದೇಹ. ಈ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.

ನಿಷ್ಕ್ರಿಯ ಐಪಿಎಫ್ ಅಕೌಂಟ್‌ಗೆ ಬಡ್ಡಿ ಸಿಗುತ್ತೆ?

ಕೆಲಸ ಬಿಟ್ಟು ಬೇರೆ ಕೆಲಸಕ್ಕೆ ಸೇರಿದಾಗೆಲ್ಲಾ ಹೊಸ ಐಪಿಎಫ್ ಅಕೌಂಟ್‌ಗಳನ್ನು ಆಯ್ಕೆಮಾಡಿ ಹಳೆಯ ಅಕೌಂಟ್‌ಗಳನ್ನು ಹೊಸ ಅಕೌಂಟ್‌ಗೆ ವಿಲೀನ ಮಾಡದಿದ್ದರೆ ಒಬ್ಬ ಉದ್ಯೋಗಿಗೆ ಒಂದಕ್ಕಿಂತ ಹೆಚ್ಚು ಐಪಿಎಫ್ ಅಕೌಂಟ್‌ಗಳು ಇರಬಹುದು.

ಇದನ್ನೂ ಓದಿ: ಬ್ಯಾಂಕು, ಷೇರು, ಮ್ಯೂಚುವಲ್ ಫಂಡ್ ಸಂಸ್ಥೆಗಳು ದಿವಾಳಿ ಎದ್ದರೆ ಹೂಡಿಕೆದಾರರ ಹಣ ಏನಾಗುತ್ತೆ? ಇಲ್ಲಿದೆ ಡೀಟೇಲ್ಸ್

ಮೂರು ವರ್ಷ ಐಪಿಎಫ್ ಅಕೌಂಟ್‌ಗೆ ಕೊಡುಗೆ ಬರದೇ ಹೋದರೆ ಅದು ನಿಷ್ಕ್ರಿಯ ಅಕೌಂಟ್ ಎನಿಸುತ್ತದೆಯೇ? ಹಿಂದೆ ಇದ್ದ ನಿಯಮದಲ್ಲಿ ಹಾಗಿತ್ತು. ಆದರೆ, ಈಗ ಬದಲಾಗಿದೆ. ಉದ್ಯೋಗಿಯಿಂದಾಗಲೀ, ಕಂಪನಿಯಿಂದ ಆಗಲೇ ಕೊಡುಗೆ ಬರುವುದು ನಿಂತು ಹೋದರೂ ಅಕೌಂಟ್‌ನಲ್ಲಿರುವ ಹಣಕ್ಕೆ ಸರ್ಕಾರದಿಂದ ಬಡ್ಡಿ ಸಂದಾಯವಾಗುವುದು ಮುಂದುವರಿಯುತ್ತದೆ.

ನೀವು ನಿವೃತ್ತರಾಗುವವರೆಗೂ, ಅಥವಾ 58 ವರ್ಷ ವಯಸ್ಸು ಪೂರ್ಣಗೊಳ್ಳುವವರೆಗೂ ನಿಮ್ಮ ಎಲ್ಲಾ ಐಪಿಎಫ್ ಅಕೌಂಟ್‌ಗಳಲ್ಲಿ ಹಣಕ್ಕೆ ಬಡ್ಡಿ ಸಂದಾಯ ನಿಲ್ಲುವುದಿಲ್ಲ. ಐಪಿಎಫ್ ಸದಸ್ಯರ ವಯಸ್ಸು 58 ವರ್ಷವಾದ ಬಳಿಕ ಅವರ ಐಪಿಎಫ್ ಅಕೌಂಟ್‌ಗಳಿಗೆ ಬಡ್ಡಿ ಸಂದಾಯವಾಗುವುದು ನಿಲ್ಲುತ್ತದೆ.

ಇದನ್ನೂ ಓದಿ: ಒಂದಕ್ಕಿಂತ ಹೆಚ್ಚು ಐಪಿಎಫ್ ಅಕೌಂಟ್‌ಗಳನ್ನು ವಿಲೀನಗೊಳಿಸುವ ಸುಲಭ ಕ್ರಮಗಳು

ನಿಷ್ಕ್ರಿಯ ಅಕೌಂಟ್‌ಗೆ ಸಿಗುವ ಬಡ್ಡಿಗೆ ತೆರಿಗೆ?

ಒಂದು ವೇಳೆ ನೀವು ಮಧ್ಯದಲ್ಲೇ ಕೆಲಸ ಬಿಟ್ಟು ಹೊಸ ಕೆಲಸಕ್ಕೆ ಸೇರಿ ಅರ್ಲಿ ರಿಟೈರ್ಮೆಂಟ್ ಆಗಿದ್ದೀರಿ ಎಂದಿಟ್ಟುಕೊಳ್ಳಿ. ನೀವು ಐಪಿಎಫ್ ಸರಪಳಿಯಿಂದ ಕತ್ತರಿಸಿಕೊಂಡಂತೆ ಆಗುತ್ತದೆ. ನಿಮಗೆ 58 ವರ್ಷ ಆಗುವವರೆಗೂ ಐಪಿಎಫ್ ಅಕೌಂಟ್‌ಗೆ ಬಡ್ಡಿ ಜಾಮ್ ಆಗುವುದು ತಪ್ಪುವುದಿಲ್ಲ. ಆದರೆ, ಕೊನೆಯ ಐಪಿಎಫ್ ಕೊಡುಗೆಯ ದಿನದಿಂದ ಹಿಡಿದು ನಿವೃತ್ತಿಯ ದಿನದವರೆಗೆ ನಿಮ್ಮ ಐಪಿಎಫ್ ಹಣಕ್ಕೆ ಸಂದಾಯವಾಗುವ ಬಡ್ಡಿ ಹಣಕ್ಕೆ ಟ್ಯಾಕ್ಸ್ ಅನ್ವಯವಾಗುತ್ತದೆ. ಇದು ಗಮನದಲ್ಲಿರಲಿ. ಐಪಿಎಫ್ ಹಣಕ್ಕೆ ಟ್ಯಾಕ್ಸ್ ಹಾಕಲಾಗಿದೆ. ಬದಲಾಗಿ, ಬಡ್ಡಿ ಹಣಕ್ಕೆ ಟ್ಯಾಕ್ಸ್ ಇರುತ್ತೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *