Kangana Ranaut Diet: ಅಸಿಡಿಟಿ, ಗ್ಯಾಸ್ಟ್ರಿಕ್‌ಗೆ ಕಂಗನಾ ಡಯಟ್ ರಾಮಬಾಣ! ನೀವೂ ಟ್ರೈ ಮಾಡಿ ನೋಡಿ | Kangana Ranaut Reveals Her Diet Secrets To Combat Acidity And Pitta Dosha Gvd

Kangana Ranaut Diet: ಅಸಿಡಿಟಿ, ಗ್ಯಾಸ್ಟ್ರಿಕ್‌ಗೆ ಕಂಗನಾ ಡಯಟ್ ರಾಮಬಾಣ! ನೀವೂ ಟ್ರೈ ಮಾಡಿ ನೋಡಿ | Kangana Ranaut Reveals Her Diet Secrets To Combat Acidity And Pitta Dosha Gvd



Kangana Ranaut Diet: ಅಸಿಡಿಟಿ, ಗ್ಯಾಸ್ಟ್ರಿಕ್‌ಗೆ ಕಂಗನಾ ಡಯಟ್ ರಾಮಬಾಣ! ನೀವೂ ಟ್ರೈ ಮಾಡಿ ನೋಡಿ | Kangana Ranaut Reveals Her Diet Secrets To Combat Acidity And Pitta Dosha Gvd

ಮಾರ್ಚ್ 23ಕ್ಕೆ ನಟಿ ಕಂಗನಾ ರನೌತ್‌ಗೆ 40ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಕಂಗನಾ ಅಂದ್ರೆ ಬರೀ ಬೋಲ್ಡ್ ಮಾತುಗಳಷ್ಟೇ ಅಲ್ಲ, ಅವರ ಫಿಟ್ನೆಸ್‌ ಕೂಡ ಸಖತ್ ಫೇಮಸ್. ತಮ್ಮ ಫಿಟ್ನೆಸ್‌ಗಾಗಿ ಕಂಗನಾ ತಮ್ಮ ಆಹಾರ ಪದ್ಧತಿಯ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ.

ನಟಿ ಕಂಗನಾ ರನೌತ್ ತಮ್ಮ 40ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅಸಿಡಿಟಿ, ಗ್ಯಾಸ್ಟ್ರಿಕ್‌ನಂತಹ ಪಿತ್ತ ದೋಷದ ಸಮಸ್ಯೆಯಿಂದ ಬಳಲುತ್ತಿರುವ ಕಂಗನಾ, ಅದನ್ನು ನಿಯಂತ್ರಿಸಲು ವಿಶೇಷ ಡಯಟ್ ಪಾಲಿಸುತ್ತಾರೆ. ನೆನೆಸಿದ ದ್ರಾಕ್ಷಿ, ಹಣ್ಣುಗಳು ಮತ್ತು ಸರಳ ಭಾರತೀಯ ಊಟದ ಮೂಲಕ ಅವರು ಆರೋಗ್ಯ ಕಾಪಾಡಿಕೊಳ್ಳುವ ಗುಟ್ಟನ್ನು ಇಲ್ಲಿ ತಿಳಿಯಿರಿ.

ಮಾರ್ಚ್ 23ಕ್ಕೆ ನಟಿ ಕಂಗನಾ ರನೌತ್‌ಗೆ 40ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಕಂಗನಾ ಅಂದ್ರೆ ಬರೀ ಬೋಲ್ಡ್ ಮಾತುಗಳಷ್ಟೇ ಅಲ್ಲ, ಅವರ ಫಿಟ್ನೆಸ್‌ ಕೂಡ ಸಖತ್ ಫೇಮಸ್. ತಮ್ಮ ಫಿಟ್ನೆಸ್‌ಗಾಗಿ ಕಂಗನಾ ತಮ್ಮ ಆಹಾರ ಪದ್ಧತಿಯ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ. ಅವರ ಡಯಟ್‌ನಲ್ಲಿ ಹೆಚ್ಚಾಗಿ ಭಾರತೀಯ ಆಹಾರವೇ ಇರುತ್ತದೆ. ಒಂದು ವೆಬ್‌ಸೈಟ್‌ಗೆ ನೀಡಿದ ಸಂದರ್ಶನದಲ್ಲಿ, ತಮಗೆ ಅತಿಯಾದ ‘ಪಿತ್ತ’ದ ಸಮಸ್ಯೆ ಇದೆ ಎಂದು ಕಂಗನಾ ಹೇಳಿಕೊಂಡಿದ್ದರು. ಆಯುರ್ವೇದದ ಪ್ರಕಾರ, ಇದೊಂದು ರೀತಿ ದೋಷ. ಇದರಿಂದ ಅಸಿಡಿಟಿ ಹಾಗೂ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಶುರುವಾಗುತ್ತವೆ. ನಿಮಗೂ ಗ್ಯಾಸ್, ಅಸಿಡಿಟಿ ಅಥವಾ ಪಿತ್ತದ ಸಮಸ್ಯೆ ಇದ್ದರೆ, ಕಂಗನಾ ಅವರ ಡಯಟ್‌ನಿಂದ ಒಂದಿಷ್ಟು ಟಿಪ್ಸ್ ಪಾಲಿಸಬಹುದು. ಹಾಗಿದ್ರೆ, ಕಂಗನಾ ಯಾವ ರೀತಿಯ ಡಯಟ್ ಮಾಡ್ತಾರೆ ಅಂತ ನೋಡೋಣ ಬನ್ನಿ.

ನೆನೆಸಿದ ದ್ರಾಕ್ಷಿ, ನೀರಿನಿಂದ ಅಸಿಡಿಟಿ ಕಂಟ್ರೋಲ್

ಕಂಗನಾ ತಮ್ಮ ದಿನವನ್ನು ಒಂದು ಗ್ಲಾಸ್ ನೀರಿನಿಂದ ಶುರು ಮಾಡ್ತಾರೆ. ಪಿತ್ತ ದೋಷ ಹೆಚ್ಚಾಗಿರುವವರ ದೇಹದಲ್ಲಿ ಬೆಳಗ್ಗೆ ಏಳುವಾಗಲೇ ಹೆಚ್ಚು ಆಮ್ಲ ಉತ್ಪತ್ತಿಯಾಗಿರುತ್ತದೆ. ಇದನ್ನು ನಿಯಂತ್ರಿಸುವುದು ಬಹಳ ಮುಖ್ಯ. ಇದಕ್ಕಾಗಿ, ಕಂಗನಾ ಪ್ರತಿದಿನ ಬೆಳಗ್ಗೆ ಉಗುರುಬೆಚ್ಚಗಿನ ನೀರಿಗೆ ಜೇನುತುಪ್ಪ ಬೆರೆಸಿ ಕುಡಿಯುತ್ತಾರೆ. ನಂತರ, ಚಹಾದ ಜೊತೆ ನೆನೆಸಿದ ಒಣದ್ರಾಕ್ಷಿ ಮತ್ತು ಬಾದಾಮಿ ತಿನ್ನುತ್ತಾರೆ. ನೆನೆಸಿದ ದ್ರಾಕ್ಷಿ, ಚಹಾದಲ್ಲಿರುವ ಆಮ್ಲೀಯತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತೆ. ಇದರಿಂದ ದೇಹದಲ್ಲಿ ಅಸಿಡಿಟಿ ನಿಯಂತ್ರಣಕ್ಕೆ ಬರುತ್ತದೆ.

ಬೆಳಗಿನ ತಿಂಡಿಗೆ ಹಣ್ಣುಗಳೇ ಬೆಸ್ಟ್

ಕಂಗನಾ ಬ್ರೇಕ್‌ಫಾಸ್ಟ್‌ಗೆ ಬೇಯಿಸಿದ ಆಹಾರವನ್ನು ತಿನ್ನಲು ಇಷ್ಟಪಡುವುದಿಲ್ಲ. ಅವರು ತಿಂಡಿಗೆ ಸೇಬು, ಮಾವು, ದಾಳಿಂಬೆಯಂತಹ ಸೀಸನಲ್ ಹಣ್ಣುಗಳನ್ನು ತಿನ್ನಲು ಆದ್ಯತೆ ನೀಡುತ್ತಾರೆ. ಒಂದು ವೇಳೆ ನಿಮ್ಮ ದೇಹಕ್ಕೆ ಹೆಚ್ಚು ಕ್ಯಾಲೋರಿ ಬೇಕಿದ್ದರೆ ಅಥವಾ ನೀವು ಹೆಚ್ಚು ದೈಹಿಕ ಶ್ರಮದ ಕೆಲಸ ಮಾಡುತ್ತಿದ್ದರೆ, ಕೇವಲ ಹಣ್ಣುಗಳನ್ನು ತಿನ್ನಬೇಡಿ. ನಿಮ್ಮ ಆಹಾರದಲ್ಲಿ ಫೈಬರ್ ಮತ್ತು ಪ್ರೊಟೀನ್‌ಯುಕ್ತ ಪದಾರ್ಥಗಳನ್ನು ಸೇರಿಸಿಕೊಳ್ಳಬಹುದು ಎಂಬುದು ಕಂಗನಾ ಅವರ ಸಲಹೆ.

ಮಧ್ಯಾಹ್ನದ ಊಟ ತುಂಬಾ ಸರಳ

ಕಂಗನಾ ರನೌತ್ ಅವರ ಮಧ್ಯಾಹ್ನದ ಊಟ ತುಂಬಾ ಸರಳವಾಗಿರುತ್ತದೆ. ಅಸಿಡಿಟಿ ಸಮಸ್ಯೆ ಇರುವವರಿಗೆ ಇದು ಹೇಳಿ ಮಾಡಿಸಿದಂತಿದೆ. ಕಂಗನಾ ಊಟಕ್ಕೆ ಬೇಳೆ ಸಾರು, ಪಲ್ಯ ಮತ್ತು ಅನ್ನ ತಿನ್ನಲು ಇಷ್ಟಪಡುತ್ತಾರೆ. ಅವರಿಗೆ ಪಕೋಡ ಅಂದ್ರೆ ಕೂಡ ತುಂಬಾ ಇಷ್ಟವಂತೆ. ಮಹಾರಾಷ್ಟ್ರ ಶೈಲಿಯ ಪಾಂಫ್ರೆಟ್ ಮೀನಿನ ಕರಿ ಮತ್ತು ಫಿಶ್ ಫ್ರೈ ಕೂಡ ತಮಗೆ ಇಷ್ಟ ಅಂತ ಕಂಗನಾ ಹೇಳಿಕೊಂಡಿದ್ದಾರೆ. ಅಸಿಡಿಟಿಯನ್ನು ನಿಯಂತ್ರಿಸಲು, ಕಂಗನಾ ಸಾರು ಮತ್ತು ಪಲ್ಯಕ್ಕೆ ನಿಂಬೆರಸ ಹಿಂಡಿಕೊಳ್ಳುತ್ತಾರೆ. ನಿಂಬೆಹಣ್ಣು ಆಮ್ಲೀಯವಾಗಿದ್ದರೂ, ಜೀರ್ಣವಾದ ನಂತರ ದೇಹದಲ್ಲಿ ಕ್ಷಾರೀಯ (alkaline) ಪರಿಣಾಮವನ್ನು ಉಂಟುಮಾಡುತ್ತದೆ. ಇದರ ಜೊತೆಗೆ, ಊಟದಲ್ಲಿ ಮೊಸರು ಇರಲೇಬೇಕು.



Source link

Leave a Reply

Your email address will not be published. Required fields are marked *