Headlines

ಡ್ರೈವರ್‌ಲೆಸ್ ನಮ್ಮ ಮೆಟ್ರೋ ಗುಲಾಬಿ ಮಾರ್ಗ ಒಂದೂವರೆ ತಿಂಗಳಲ್ಲಿ ಸಾರ್ವಜನಿಕ ಸೇವೆಗೆ ಮುಕ್ತ ಬಹುತೇಕ ಖಚಿತ | Namma Metro Pink Line Launch Likely In May Trial Runs And Safety Checks Underway Gdp

ಡ್ರೈವರ್‌ಲೆಸ್ ನಮ್ಮ ಮೆಟ್ರೋ ಗುಲಾಬಿ ಮಾರ್ಗ ಒಂದೂವರೆ ತಿಂಗಳಲ್ಲಿ ಸಾರ್ವಜನಿಕ ಸೇವೆಗೆ ಮುಕ್ತ ಬಹುತೇಕ ಖಚಿತ | Namma Metro Pink Line Launch Likely In May Trial Runs And Safety Checks Underway Gdp



ಡ್ರೈವರ್‌ಲೆಸ್ ನಮ್ಮ ಮೆಟ್ರೋ ಗುಲಾಬಿ ಮಾರ್ಗ ಒಂದೂವರೆ ತಿಂಗಳಲ್ಲಿ ಸಾರ್ವಜನಿಕ ಸೇವೆಗೆ ಮುಕ್ತ ಬಹುತೇಕ ಖಚಿತ | Namma Metro Pink Line Launch Likely In May Trial Runs And Safety Checks Underway Gdp

ಬೆಂಗಳೂರಿನ ನಮ್ಮ ಮೆಟ್ರೋ ಗುಲಾಬಿ ಮಾರ್ಗದ (ಕಾಳೇನ ಅಗ್ರಹಾರ-ನಾಗವಾರ) ಮೊದಲ ಹಂತವು ಮೇ ಅಂತ್ಯದೊಳಗೆ ಆರಂಭವಾಗುವ ನಿರೀಕ್ಷೆಯಿದೆ. ಪ್ರಸ್ತುತ 7.50 ಕಿ.ಮೀ. ಉದ್ದದ ಮಾರ್ಗದಲ್ಲಿ ಟ್ರಯಲ್ ರನ್‌ಗಳು ಯಶಸ್ವಿಯಾಗಿದ್ದು, ಡ್ರೈವರ್‌ಲೆಸ್ ತಂತ್ರಜ್ಞಾನದೊಂದಿಗೆ ಸಾರ್ವಜನಿಕ ಸೇವೆಗೆ ಸಿದ್ಧತೆಗಳು ನಡೆಯುತ್ತಿವೆ.

ಬೆಂಗಳೂರು: ನಗರದ ಸಾರಿಗೆ ವ್ಯವಸ್ಥೆಯಲ್ಲಿ ಮಹತ್ವದ ಮೈಲುಗಲ್ಲಾಗಲಿರುವ ನಮ್ಮ ಮೆಟ್ರೋ ಗುಲಾಬಿ ಮಾರ್ಗ (ಪಿಂಕ್ ಲೈನ್) ಪ್ರಯಾಣಿಕರಿಗೆ ಶೀಘ್ರದಲ್ಲೇ ಲಭ್ಯವಾಗುವ ನಿರೀಕ್ಷೆ ಮೂಡಿದೆ. ಕಾಳೇನ ಅಗ್ರಹಾರದಿಂದ ನಾಗವಾರವರೆಗೆ ವಿಸ್ತರಿಸಲಿರುವ ಈ ಮಾರ್ಗದ ಒಂದು ಭಾಗವನ್ನು ಮೇ ತಿಂಗಳ ಅಂತ್ಯದೊಳಗೆ ಲೋಕಾರ್ಪಣೆ ಮಾಡುವ ಗುರಿಯನ್ನು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಹೊಂದಿದೆ.

ಪ್ರಸ್ತುತ ಬೆಂಗಳೂರಿನಲ್ಲಿ ಸುಮಾರು 96.10 ಕಿಲೋಮೀಟರ್ ಉದ್ದದ ಮೆಟ್ರೋ ಜಾಲದಲ್ಲಿ ರೈಲು ಸಂಚಾರ ನಡೆಯುತ್ತಿದ್ದು, ಅದರ ವಿಸ್ತರಣೆಯ ಭಾಗವಾಗಿ 21.26 ಕಿಲೋಮೀಟರ್ ಉದ್ದದ ಗುಲಾಬಿ ಮಾರ್ಗ ನಿರ್ಮಾಣ ಹಂತದಲ್ಲಿದೆ. ಈ ಮಾರ್ಗದಲ್ಲಿ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗೆ 7.50 ಕಿಲೋಮೀಟರ್ ಉದ್ದದ ಎಲಿವೇಟೆಡ್ ವಿಭಾಗದ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಈ ವಿಭಾಗದಲ್ಲೇ ಮೊದಲ ಹಂತದಲ್ಲಿ ಸೇವೆ ಆರಂಭಿಸುವ ಯೋಜನೆ ರೂಪಿಸಲಾಗಿದೆ.

ತಾಂತ್ರಿಕ ಮತ್ತು ಸುರಕ್ಷತಾ ಸಿದ್ಧತೆ

ರೈಲು ಸೇವೆ ಆರಂಭಕ್ಕೂ ಮುನ್ನ ಅಗತ್ಯವಿರುವ ಎಲ್ಲಾ ತಾಂತ್ರಿಕ ಮತ್ತು ಸುರಕ್ಷತಾ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ. ಈಗಾಗಲೇ ನಾಲ್ಕು ಹಂತಗಳಲ್ಲಿ ಟ್ರಯಲ್ ರನ್‌ಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. ಇದರ ಮುಂದುವರಿದ ಹಂತವಾಗಿ, ಭಾರತೀಯ ರೈಲ್ವೆಯ ಸಂಶೋಧನಾ ವಿನ್ಯಾಸಗಳು ಮತ್ತು ಮಾನದಂಡಗಳ ಸಂಸ್ಥೆ (RDSO) ಅಧಿಕಾರಿಗಳು ಮಾರ್ಗದ ಸಮಗ್ರ ಪರಿಶೀಲನೆಗೆ ಮುಂದಾಗಿದ್ದಾರೆ. ಈ ಪರಿಶೀಲನಾ ಕಾರ್ಯಗಳು ಏಪ್ರಿಲ್ 5ರವರೆಗೆ ನಡೆಯಲಿದ್ದು, ವಿವಿಧ ತಾಂತ್ರಿಕ ಅಂಶಗಳನ್ನು ವಿಶ್ಲೇಷಿಸಲಾಗುತ್ತಿದೆ.

ಈ ಪರೀಕ್ಷೆಗಳ ಅಂಗವಾಗಿ ರೈಲುಗಳ ಗರಿಷ್ಠ ವೇಗ, ಬ್ರೇಕಿಂಗ್ ವ್ಯವಸ್ಥೆ, ಟ್ರ್ಯಾಕ್‌ನ ಗುಣಮಟ್ಟ, ವಿದ್ಯುತ್ ಪೂರೈಕೆ ವ್ಯವಸ್ಥೆ, ಸಿಗ್ನಲಿಂಗ್ ಸಾಧನಗಳು ಹಾಗೂ ನಿಲ್ದಾಣಗಳ ಸಿದ್ಧತೆಗಳನ್ನು ಪರಿಶೀಲಿಸಲಾಗುತ್ತಿದೆ. ಜೊತೆಗೆ, ಪ್ರಯಾಣಿಕರ ಭಾರವನ್ನು ಅನುಕರಿಸುವ ಲೋಡ್ ಟೆಸ್ಟ್‌ಗಳನ್ನು ನಡೆಸುವ ಮೂಲಕ ಮಾರ್ಗದ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಲಾಗುತ್ತಿದೆ. ಕಾರಿಡಾರ್‌ನಾದ್ಯಂತ ನಿರ್ಮಾಣಗೊಂಡಿರುವ ಮೂಲಸೌಕರ್ಯದ ದೃಢತೆಯನ್ನೂ ತಜ್ಞರು ಪರಿಶೀಲಿಸಲಿದ್ದಾರೆ.

ಈ ಎಲ್ಲಾ ಪರೀಕ್ಷೆಗಳು ಯಶಸ್ವಿಯಾಗಿ ಪೂರ್ಣಗೊಂಡ ಬಳಿಕ, ವರದಿಯನ್ನು ತಾಂತ್ರಿಕ ಅನುಮೋದನೆಗಾಗಿ ರೈಲ್ವೆ ಮಂಡಳಿಗೆ ಸಲ್ಲಿಸಲಾಗುತ್ತದೆ. ಅಂತಿಮವಾಗಿ ಸುರಕ್ಷತಾ ಆಯುಕ್ತರಿಂದ ಅನುಮತಿ ದೊರೆತ ನಂತರವೇ ಸಾರ್ವಜನಿಕ ಸೇವೆ ಆರಂಭಕ್ಕೆ ಹಸಿರು ನಿಶಾನೆ ದೊರೆಯಲಿದೆ.

ಗುಲಾಬಿ ಮಾರ್ಗದ ವಿಶೇಷತೆ

ಗುಲಾಬಿ ಮಾರ್ಗದ ವಿಶೇಷತೆ ಎಂದರೆ, ಈ ಮಾರ್ಗದಲ್ಲಿ ಡ್ರೈವರ್‌ಲೆಸ್ ತಂತ್ರಜ್ಞಾನವನ್ನು ಅಳವಡಿಸಲಾಗುತ್ತಿದೆ. ಆರಂಭಿಕ ಹಂತದಲ್ಲಿ ಕಾರ್ಯಾರಂಭವಾಗಲಿರುವ 7.50 ಕಿಲೋಮೀಟರ್ ಉದ್ದದ ವಿಭಾಗದಲ್ಲಿ ಒಟ್ಟು ಆರು ನಿಲ್ದಾಣಗಳು ಇರಲಿವೆ. ಈ ಮಾರ್ಗದಲ್ಲಿ ಒಟ್ಟು 23 ರೈಲುಗಳನ್ನು ಬಳಸಲಾಗುತ್ತಿದ್ದು, ಅದರಲ್ಲಿ ಆರು ರೈಲುಗಳು ಚಾಲಕರಿಲ್ಲದೆ ಸಂಚರಿಸುವ ಸಾಮರ್ಥ್ಯ ಹೊಂದಿರುತ್ತವೆ. ಈಗಾಗಲೇ ನಾಲ್ಕು ಡ್ರೈವರ್‌ಲೆಸ್ ರೈಲುಗಳು ನಗರಕ್ಕೆ ಆಗಮಿಸಿದ್ದು, ಉಳಿದ ಎರಡು ರೈಲುಗಳು ಏಪ್ರಿಲ್ ಮೊದಲ ವಾರದಲ್ಲಿ ಸೇರ್ಪಡೆಯಾಗುವ ನಿರೀಕ್ಷೆಯಿದೆ.

ಈ ಮಾರ್ಗದ ಆರಂಭದಿಂದ ನಗರದ ದಕ್ಷಿಣ ಭಾಗದಿಂದ ಉತ್ತರ ಭಾಗದ ಸಂಪರ್ಕ ಸುಗಮವಾಗಲಿದ್ದು, ಟ್ರಾಫಿಕ್ ಒತ್ತಡ ತಗ್ಗಿಸಲು ಸಹಾಯವಾಗಲಿದೆ. ಒಟ್ಟಾರೆ, ಎಲ್ಲಾ ತಾಂತ್ರಿಕ ಹಾಗೂ ಸುರಕ್ಷತಾ ಮಾನದಂಡಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಂಡರೆ, ಮೇ ತಿಂಗಳಲ್ಲೇ ಗುಲಾಬಿ ಮಾರ್ಗದ ಮೊದಲ ಹಂತವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸುವ ಸಾಧ್ಯತೆ ಹೆಚ್ಚಾಗಿದೆ.



Source link

Leave a Reply

Your email address will not be published. Required fields are marked *