
ಬೊಗೊಟಾ (ಕೊಲಂಬಿಯಾ), ಮಾರ್ಚ್ 23: ಕೊಲಂಬಿಯಾದಲ್ಲಿ ಭಾರೀ ದುರಂತ ಸಂಭವಿಸಿದೆ. ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಕೊಲಂಬಿಯಾದ ಮಿಲಿಟರಿಯ ವಿಮಾನವೊಂದು ಅಪಘಾತಕ್ಕೀಡಾಗಿದೆ. ವಾಯುಪಡೆಯ ಈ ಹಾರ್ಕ್ಯುಲಸ್ ಸಿ -130 ವಿಮಾನವು 110 ಸೈನಿಕರನ್ನು ಹೊತ್ತೊಯ್ಯುತ್ತಿತ್ತು. ಈ ಘಟನೆಯಲ್ಲಿ ಕೊಲಂಬಿಯಾದ ವಿಮಾನದಲ್ಲಿದ್ದ ಎಲ್ಲ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಆದರೆ, ಕೊಲಂಬಿಯಾದ ಮಿಲಿಟರಿ ಇನ್ನೂ ಈ ಘಟನೆಯ ಸಾವಿನ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ