
ಶಾಲಿವಾಹನ ಶಕವರ್ಷ 1949ರ ಉತ್ತರಾಯಣ, ವಸಂತ ಋತುವಿನ ಚೈತ್ರ ಮಾಸದ ಶುಕ್ಲ ಪಕ್ಷದ ಷಷ್ಠೀ ತಿಥಿಯ ಮಂಗಳವಾರ ಪ್ರಚೋದನೆ, ಉತ್ತಮರ ಸಂಗ, ಸಾಮಾಜಿಕ ಕಾರ್ಯಕ್ಕೆ ಯತ್ನ, ಪ್ರೋತ್ಸಹ, ಧಾರ್ಮಿಕ ಕಾರ್ಯ, ಅನ್ಯಾಯ, ಗೆಲುವಿನ ಸಂಭ್ರಮ ಇಂದಿನ ವಿಶೇಷ.
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ವಾರ್ಷಿಕ : ವಸಂತ, ಚಂದ್ರಮಾಸ : ಚೈತ್ರ, ಸೌರ ಮಾಸ : ಮೀನ, ಮಹಾನಕ್ಷತ್ರ : ಉತ್ತರಾಭಾದ್ರ, ವಾರ : ಮಂಗಳ, ಪಕ್ಷ : ಶುಕ್ಲ, ತಿಥಿ : ಷಷ್ಠೀ, ನಿತ್ಯನಕ್ಷತ್ರ : ಕೃತ್ತಿಕಾ, ಯೋಗ : ಪ್ರೀತಿ, ಕರಣ : ಬಾಲವ, 06 ಸೂರ್ಯೋದಯ – 06 ಸೂರ್ಯೋದಯ – 06 ಸೂರ್ಯೋದಯ – 06 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:33 – 17:04, ಯಮಗಂಡ ಕಾಲ 09:29 – 10:59, ಗುಳಿಕ ಕಾಲ 12:31 – 14:02
ಮೇಷ ರಾಶಿ :
ನಿಮ್ಮ ಕೆಲಸವನ್ನು ಶಿಸ್ತಿನಿಂದ ಮಾಡಿ ಮುಗಿಸಿ. ನಿಮ್ಮ ವೇಗಕ್ಕೆ ವಹಿಸಿಕೊಂಡ ಕೆಲಸವು ಆಗದೇ ಇರುವುದು ನಿಮಗೆ ಬೇಸರ ತರಬಹುದು. ಕುಟುಂಬ ಮರ್ಯಾದೆಗೆ ತಕ್ಕಂತೆ ಇರಲಿ. ನಿಮಗೆ ಜೀವನ ಸುಮ್ಮನೆ ನಷ್ಟವಾಗದಂತೆ ಭಾಸವಾಗಿ, ಏನಾದರೂ ಹೊಸತನ್ನು ಮಾಡುವುದರಿಂದ ನಿಮ್ಮ ವಿಚಾರವನ್ನು ಹಂಚಿಕೊಳ್ಳುವಿರಿ. ಸಂತೋಷದ ದಿನಗಳ ನಿರೀಕ್ಷೆಯು ಹೆಚ್ಚಿರುವುದು.
ವೃಷಭ ರಾಶಿ :
ನಿಮ್ಮ ಉದ್ಯಮಕ್ಕೆ ಅನುಭವಿಗಳ ಕೊರತೆ ಅತಿಯಾದಂತೆ ಕಾಣಿಸುತ್ತದೆ. ಮಕ್ಕಳು ಅಡ್ಡದಾರಿಗೆ ಹೋಗುವ ಸನ್ನಿವೇಶವು ಬರಬಹುದು. ಮಾತಿಗೆ ದೋಷವು ನಿಮಗೆ ಕಾಣಲು ಸಿಗುವುದು. ಇಂದು ನಿಮಗೆ ಭವಿಷ್ಯವು ಅನಿಶ್ಚಿತ ಎನಿಸಬಹುದು. ನಿಮ್ಮದೇ ವಸ್ತುವನ್ನು ಗುರುತಿಸಲಾರದಷ್ಟು ಮರೆವು ನಿಮ್ಮದಾಗಿದೆ. ಪ್ರವಾಸವನ್ನು ಹೆಚ್ಚು ಮಾಡುವ ವಿಚಾರದಲ್ಲಿ ಆಸಕ್ತಿ ಇರುವುದು.
ಮಿಥುನ ರಾಶಿ :
ಕೆಲವು ಸೂಕ್ಷ್ಮ ವಿಚಾರಗಳನ್ನು ನೀವು ಜೋಪಾನವಾಗಿ ನಿರ್ವಹಿಸಬೇಕಾಗುವುದು. ಆಪ್ತರನ್ನು ನೀವು ಬಹಳ ಆತ್ಮೀಯವಾಗಿ ಕಾಣುವಿರಿ. ಸಂಪನ್ಮೂಲವನ್ನು ಹಿಡಿದಿಟ್ಟುಕೊಳ್ಳುವುದು ಅಗತ್ಯ. ಹಳೆಯ ರೋಗಗಳಿಂದ ನೀವು ಮುಕ್ತರಾಗದಂತೆ ತೋರುವುದು. ನಿಮ್ಮ ಸಿಟ್ಟನ್ನು ಇಂದು ತೋರಿಸುವುದು ಬೇಡ. ಇರುವುದರಲ್ಲಿ ಸುಖಪಡುವುದನ್ನು ಕಲಿತುಕೊಳ್ಳಬೇಕಾದೀತು. ಆಪ್ತರ ಅಗಲಿಕೆಯನ್ನು ಸಹಿಸಲಾಗದು.
ಕರ್ಕಾಟಕ ರಾಶಿ :
ಕಳೆದದ್ದನ್ನು ಚಿಂತಿಸಿ ಸಮಯ ವ್ಯರ್ಥ ಮಾಡಿಕೊಳ್ಳುವಿರಿ. ಬೇಕಾದವರನ್ನು ದೂರ ಮಾಡಿ ಏನನ್ನೂ ಸಾಧಿಸಲಾರಿರಿ. ಯಾರ ಬೆಂಬಲವನ್ನೂ ನಿರೀಕ್ಷಿಸಿದರೆ ನಿಮ್ಮ ಕಾರ್ಯವನ್ನು ಮಾಡುತ್ತೀರಿ. ಸ್ತ್ರೀಯರಿಗೆ ಆತ್ಮರಕ್ಷಣೆಯ ಆತಂಕ ಉಂಟಾಗುವುದು. ಮನೋಬಲವನ್ನು ಹೆಚ್ಚಿಸಿಕೊಳ್ಳುವುದು. ಯಾರ ಸಲಹೆ ಪಡೆಯದೆ ಮನಸ್ಸಿಗೆ ಬಂದಂತೆ ವ್ಯವಹರಿಸುವುದನ್ನು ಬಿಡಿ. ಸಂಗಾತಿಯ ಆರೋಗ್ಯದ ಬಗ್ಗೆ ಅಧಿಕ ಲಕ್ಷ್ಯ ಅಗತ್ಯ.
ಸಿಂಹ ರಾಶಿ :
ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ತಡೆಗಟ್ಟಲು ಕೆಲಸದಲ್ಲಿ ಅತಿಯಾದ ದೃಢತೆಯನ್ನು ಸ್ಥಾಪಿಸಲಾಗಿದೆ. ಸಣ್ಣ ವ್ಯಾಪಾರವು ಅಧಿಕಫಲವನ್ನು ಕೊಡುವುದು. ಕೆಟ್ಟ ಅಭ್ಯಾಸಕ್ಕೆ ಹಣವನ್ನು ಖರ್ಚು ಮಾಡಿರಿ. ನಿಮ್ಮ ಸರಳ ಉಪಾಯವನ್ನು ಕಾರ್ಯದಲ್ಲಿ ಹಾಕುವಿರಿ. ಅತಿಯಾದ ಮಾತಿನಿಂದ ಇತರರಿಗೆ ಕಷ್ಟವಾಯಿತು. ಮನೆಯ ಕಾರ್ಯವು ನಿಮಗೆ ತೃಪ್ತಿ ಕೊಡುವುದು. ಉಪಕಾರದ ಸ್ಮರಣೆಯನ್ನು ನೀವು ಇಟ್ಟುಕೊಳ್ಳುವುದು ಅನಿವಾರ್ಯ. ನಿಮ್ಮ ಬಗ್ಗೆ ಇರಲೇಬೇಕಾದ ಕೆಲವು ವಿಚಾರಗಳನ್ನು ನಿಮಗೆ ಸೂಚಿಸಿ.
ಕನ್ಯಾ ರಾಶಿ :
ಯಾರಿಗೆ ಎಷ್ಟು ಪ್ರಾಮುಖ್ಯ ಕೊಡಬೇಕು ಎನ್ನುವುದನ್ನು ತಿಳಿದುಕೊಳ್ಳುವ ಅವಶ್ಯಕತೆಯಿದೆ. ಮುನ್ನುಗ್ಗಿ ನಡೆಯುವುದು ಸರಿಯಾದರೂ, ದಾರಿ ಹೇಗಿದೆ ಎಂಬುದನ್ನು ಗಮನಿಸುವುದು. ಪುಣ್ಯಸ್ಥಳಕ್ಕೆ ಏಕಾಂಗಿಯಾಗಿ ಹೋಗುವುದು ಬೇಡ. ಇತರರನ್ನು ಕಂಡು ಕೊರಗುವುದು ಬೇಡ. ಚಾಂಚಲ್ಯದ ಕಾರಣ ಉದ್ಯೋಗದಲ್ಲಿಯೂ ಸರಿಯಾದ ಏಕಾಗ್ರತೆಯಿಂದ ಕೆಲಸವನ್ನು ಮಾಡಲಾಗುವುದಿಲ್ಲ. ಸಾಮಾಜಿಕವಾಗಿ ಕಾರ್ಯಗಳಿಗೆ ನಿಮ್ಮ ಹಣವನ್ನು ಬಳಸುವಿರಿ. ಯಾವ ವಿರೋಧವನ್ನು ಸಹಿಸುವ ಮನಃಸ್ಥಿತಿ ಇಂದು ನಿಮಗೆ ಇರದು.
ತುಲಾ ರಾಶಿ :
ಶತ್ರುಗಳ ಬಗೆಗೆ ನಿಮಗೆ ಸರಿಯಾದ ಮಾಹಿತಿ ಇರದು. ದಾಂಪತ್ಯದಲ್ಲಿ ಇತರರ ಕಾರಣದಿಂದ ಕಲಹವಾಗಬಹುದು. ರಾಜಕೀಯದಲ್ಲಿ ತೃಪ್ತಿ ಸಿಗದೇ ತೊಳಲಾಟ ಇರಲಿದೆ. ಪರರ ಜೀವನಕ್ಕೆ ಸಣ್ಣ ಉಪಕಾರ ವಸ್ತು. ಕಿರಿಯರಿಂದ ಆಕಸ್ಮಿಕವಾಗಿ ಗೌರವಕ್ಕೆ ಪಾತ್ರರಾಗುವಿರಿ. ಎಂದೋ ಆದ ಬೇಸರವನ್ನು ಸ್ನೇಹಿತನ ಮುಂದೆ ಇಂದು ಪ್ರಕಟಿಸುವಿರಿ. ಅಸಹಜ ಮಾತುಗಳಿಗೆ ಸ್ಪಂದನೆ ಸಿಗದು. ಪ್ರತ್ಯೇಕತೆಯನ್ನು ನೀವು ಬಯಸುತ್ತಿರುವಿರಿ. ಹೂಡಿಕೆಯಿಂದ ಆರ್ಥಿಕ ಅಭಿವೃದ್ಧಿಯಾಗಲಿದೆ ಎಂಬ ನೆಮ್ಮದಿ ಇರುವುದು.
ವೃಶ್ಚಿಕ ರಾಶಿ :
ಸಮಚಿತ್ತವು ನಿಮ್ಮದ ನಿವಾರಣೆಗೆ ಕಾರಣವಾಗುತ್ತದೆ. ದೊಡ್ಡ ಕನಸನ್ನು ಸಾಕಾರಗೊಳಿಸಲು ಸಣ್ಣ ಪ್ರಯತ್ನವಾದರೂ ಬೇಕು. ನಕಾರಾತ್ಮಕ ವಿಚಾರಗಳ ಕಡೆ ಗಮನ ಬೇಡ. ಆದಾಯದ ಬಗ್ಗೆ ಅಸಮಾಧಾನ ಬರಬಹುದು. ಅಧಿಕ ಆದಾಯಕ್ಕಾಗಿ ಉದ್ಯೋಗವನ್ನು ನೀವು ತ್ಯಾಗಮಾಡುವಿರಿ. ಇದಕ್ಕೆ ಕಾರಣ ಹೊಸ ಉದ್ಯಮದ ಕಡೆ ಸೆಳೆತವು ಅತಿಯಾಗಿರುವುದು. ಮಾನಸಿಕ ಅಸಮತೋಲನವನ್ನು ಸರಿ ಮಾಡಿಕೊಳ್ಳುವಿರಿ.
ಧನು ರಾಶಿ :
ಮನಸ್ಸಿಗೆ ಬೇರೆ ಯಾವುದಾದರೂ ಕೆಲಸ ಕೊಡಿ. ಸಹೋದರರ ಬಗ್ಗೆ ನಿಮಗಿರುವ ಭಾವವು ಬದಲಾದೀತು. ಎಲ್ಲರ ಅನುಭವವನ್ನು ಕೇಳಿ ಸ್ವಂತ ನಿರ್ಧಾರಕ್ಕೆ ಬನ್ನಿ. ಕುಟುಂಬದ ಸಮಸ್ಯೆಗಳಿಂದಾಗಿ ನಿಮ್ಮ ಸಂಗಾತಿ ಇಂದು ಅಸಮಾಧಾನಗೊಳ್ಳಬಹುದು. ಇಂದು ಮಾಡುವ ಎಲ್ಲ ಕಾರ್ಯಗಳನ್ನೂ ಪೂರ್ಣ ಮಾಡಲಾರಿರಿ. ಇಷ್ಟವಿಲ್ಲದ ವ್ಯಕ್ತಿಗಳ ಜೊತೆ ಇರಲು ಕಸಿವಿಸಿ ಆದೀತು. ಮನೆಯವರ ಸಣ್ಣ ತಪ್ಪುಗಳನ್ನು ಸಹಿಸಿರಿ.
ಮಕರ ರಾಶಿ :
ನಿಮ್ಮ ಚುರುಕುತನದಿಂದ ಎಲ್ಲರಿಗೂ ಎಚ್ಚರಿಕೆ ನೀಡಿ. ಶತ್ರುಪಕ್ಷದವರು ನಿಮ್ಮ ಪಕ್ಷಕ್ಕೆ ಬರುವ ಸಾಧ್ಯತೆ ಇದೆ. ಇದ್ದಕಿದ್ದಂತೆ ಅಭ್ಯಾಸದ ಕಡೆ ಸೆಳೆತ ಹೆಚ್ಚಾಗುವುದು. ಸುಮ್ಮನಿರುವ ಶತ್ರುವನ್ನು ಕೆಣಕಿ ಮೈಮೇಲೆ ಹಾಕಿಕೊಳ್ಳುವಿರಿ. ಪ್ರೀತಿಯ ವಿಚಾರಕ್ಕೆ ಬಂದರೆ ಪೂರ್ಣ ಸಮಾಧಾನ’ ಕೃಷಿಯಲ್ಲಿ ನಿಮಗೆ ಉಪಯುಕ್ತ ಯೋಜನೆ ಹಾಕಿಕೊಳ್ಳಿ. ಮಕ್ಕಳ ಬಗ್ಗೆ ಇರುವ ನಿಮ್ಮ ಚಿಂತೆ ನಿವಾರಣೆ ಆಗುವುದು. ಪ್ರಯಾಣವನ್ನು ಆನಂದಿಸಿ. ಕಡಿಮೆ ವೆಚ್ಚವನ್ನು ಹೆಚ್ಚು ಮಾಡಿಕೊಳ್ಳುವ ಸಾಧ್ಯತೆಯಿದೆ.
ಕುಂಭ ರಾಶಿ :
ನೂತನ ಗೃಹನಿರ್ಮಾಣದ ಬಗ್ಗೆ ಚಿಂತನೆ ಆರಂಭ. ನಿಮ್ಮ ಉತ್ಸಾಹಕ್ಕೆ ಯಾರಾದರೂ ಅಡ್ಡಗಾಲು ಹಾಕಿಯಾರು. ನಿಮ್ಮ ಇಚ್ಛೆಗಳು ಪೂರ್ಣವಾಗದೇ ಬೇಸರವಾಗಬಹುದು. ಪ್ರಭಾವಿಗಳ ಮನವನ್ನು ಸೋಲಿಸಿ ಅವರ ಬೆಂಬಲವನ್ನು ಪಡೆಯಿರಿ. ಅನಂತರ ನೀವೂ ಹಗುರಾಗಬಹುದು. ಅನಾರೋಗ್ಯದ ಕಾರಣದಿಂದ ನೀವು ಇಂದಿನ ಪ್ರಯಾಣವನ್ನು ನಿಲ್ಲಿಸುವಿರಿ. ಕಳ್ಳತನ ಮಾಡಿದ ಅಪವಾದ ಬರಬಹುದೆಂಬ ಭೀತಿ ನಿಮಗೆ ಕಾಡುವುದು.
ಮೀನ ರಾಶಿ :
ನಿವು ಮನೆ ಕೆಲಸವನ್ನು ಬೇಗ ಮುಗಿಸಿ ಸ್ವಲ್ಪ ಬಿಡುವು ಮಾಡಿಕೊಳ್ಳಲು ಪ್ರಯತ್ನಿಸುವಿರಿ. ಹೂಡಿಕೆಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳುವಿರಿ. ಕೌಟುಂಬಿಕ ಜೀವನವು ಶಾಂತಿಯುತ ಮತ್ತು ಸಂತೋಷದಿಂದ ಇರುವುದು. ಎಲ್ಲದಕ್ಕೂ ಸಹ ತಾಳ್ಮೆ ಅತ್ಯಂತ ಅವಶ್ಯಕ. ಸ್ನೇಹಿತರ ಜೊತೆ ಮನಸ್ತಾಪವು ಬರಬಹುದು. ವ್ಯಾಪಾರದ ಏರಿಳಿತಗಳು ನಿಮ್ಮ ಗಮನಕ್ಕೆ ಬಾರದೇ ಹೋಗಬಹುದು. ಆಪ್ತರು ನಿಮ್ಮಿಂದ ಕಾರಣಾಂತರಗಳಿಂದ ದೂರವಾಗಬಹುದು.
– ಲೋಹಿತ ಹೆಬ್ಬಾರ್ – 8762924271 (What’s app only)