
ಯಾವುದೇ ಸಿನಿಮಾ ರಿಲೀಸ್ ಆದರೂ ಮೊದಲ ಮೂರುದಿನದ ಕಲೆಕ್ಷನ್ ಮೇಲೆ ಚಿತ್ರದ ಭವಿಷ್ಯ ನಿರ್ಧಾರ ಮಾಡೋದು ಕಷ್ಟ. ಮೊದಲ ಸೋಮವಾರ ಎಷ್ಟು ಕಲೆಕ್ಷನ್ ಮಾಡಿತು ಎಂಬುದು ಸಿನಿಮಾಗಳ ಪಾಲಿಗೆ ಬಹುಮುಖ್ಯವಾಗುವುದಿಲ್ಲ. ಸೋಮವಾರದ ಪರೀಕ್ಷೆಯಲ್ಲಿ ಪಾಸ್ ಆದರೆ ಸಿನಿಮಾ ಒಂದು ಹಂತಕ್ಕೆ ಗೆದ್ದಂತೆ. ಹಾಗಾದರೆ, ಮಾರ್ಚ್ 19ರಂದು ರಿಲೀಸ್ ಆದ ‘ಲವ್ ಮಾಕ್ಟೇಲ್ 3’ ಹಾಗೂ ‘ಧುರಂಧರ್ 2’ (ಧುರಂಧರ 2) ಚಿತ್ರಗಳು ಈ ಪರೀಕ್ಷೆಯಲ್ಲಿ ಪಾಸ್ ಆದವೇ? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.
‘ಧುರಂಧರ 2’
‘ಧುರಂಧರ 2’ ಸಿನಿಮಾ ಸೋಮವಾರ ಪರೀಕ್ಷೆಯಲ್ಲಿ ಫಸ್ಟ್ ಕ್ಲಾಸ್ ಅಲ್ಲಿ ಪಾಸ್ ಆಗಿದೆ! ಹೌದು, ‘ಧುರಂಧರ’ ಸಿನಿಮಾ ಮೊದಲ ನಾಲ್ಕು ದಿನಕ್ಕೆ 450 ಕೋಟಿ ರೂಪಾಯಿ ಗಳಿಸಿತು. ಸೋಮವಾರವೂ ಚಿತ್ರ ಅಬ್ಬರಿಸಿ, ಬೊಬ್ಬಿರಿದಿದೆ! ಇದು ಚಿತ್ರಕ್ಕೆ ಸಹಕಾರಿ ಆಗಿದೆ. ಮೊದಲ ಸೋಮವಾರ ಈ ಚಿತ್ರ ಗಳಿಕೆ ಮಾಡಿದ್ದು 77 ಕೋಟಿ ರೂಪಾಯಿ. ಸಾಮಾನ್ಯವಾಗಿ ಬಾಲಿವುಡ್ ಸ್ಟಾರ್ ನಟರ ಸಿನಿಮಾಗಳ ಮೊದಲ ದಿನದ ಗಳಿಗೆ 50 ಕೋಟಿ ರೂಪಾಯಿ ದಾಟಿದರೆ ಅದು ಅದ್ಭುತ ಎನ್ನುವ ರೀತಿಯಲ್ಲಿ ಇತ್ತು. ಆದರೆ, ‘ಧುರಂಧರ್ 2’ ಈ ಕಲ್ಪನೆ ತಪ್ಪಾಗಿದೆ.
‘ಧುರಂಧರ 2’ ಚಿತ್ರದ ವಿಶ್ವ ಮಟ್ಟದ ಗಳಿಕೆ 751 ಕೋಟಿ ರೂಪಾಯಿ ಆಗಿದೆ. ಭಾರತದಲ್ಲಿ 541 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇದು ಗ್ರಾಸ್ ಕಲೆಕ್ಷನ್. ನೆಟ್ ಕಲೆಕ್ಷನ್ 519 ಕೋಟಿ ರೂಪಾಯಿ ಇದೆ. ಈವರೆಗೆ ಸಿನಿಮಾ 1,15,553 ಪ್ರದರ್ಶನ ಕಂಡಿದೆ. ಈ ಚಿತ್ರ ‘ಪುಷ್ಪ 2’ ದಾಖಲೆಯನ್ನು ಮುರಿಯುವ ಸಾಧ್ಯತೆಯಿದೆ.
ಇದನ್ನೂ ಓದಿ: ಭಾನುವಾರ ಭರ್ಜರಿ ಗಳಿಗೆ ಮಾಡಿದ ‘ಲವ್ ಮಾಕ್ಟೇಲ್ 3’ ಸಿನಿಮಾ; ಒಟ್ಟಾರೆ ಕಲೆಕ್ಷನ್ ಎಷ್ಟು?
‘ಲವ್ ಮಾಕ್ಟೇಲ್ 3’ ಚಿತ್ರದ ಗಳಿಕೆ ಸೋಮವಾರ ಕೋಟಿ ರೂಪಾಯಿ ಸಮೀಪಿಸಿದೆ. ಈ ಚಿತ್ರ ಸೋಮವಾರ 75 ಲಕ್ಷ ರೂಪಾಯಿಗಳಿಗೆ ಬಂದಿದೆ ಎಂದು sacnilk ಹೇಳಿದೆ. ಈ ಚಿತ್ರಕ್ಕೆ ‘ಧುರಂಧರ 2’ ಸಿನಿಮಾದ ಎಫೆಕ್ಟ್ ಕೊಂಚ ತಟ್ಟಿರಬಹುದು ಎಂದು ಹೇಳಲಾಗಿದೆ. ಈ ಸಿನಿಮಾದ ಒಟ್ಟಾರೆ ಗ್ರಾಸ್ ಕಲೆಕ್ಷನ್ 6.65 ಕೋಟಿ ರೂಪಾಯಿ ಎಂಬುದು ವಿಶೇಷ. ಈ ಸಿನಿಮಾ ಮೇಲೆ ಕೃತಿ ಚೌರ್ಯದ ಆರೋಪ ಕೇಳಿ ಬಂದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.