ಐಪಿಎಲ್ 2026ರಲ್ಲಿ ನಿವೃತ್ತಿ ಘೋಷಿಸಲಿದ್ದಾರೆ ಈ ಐದು ಆಟಗಾರರು?

ಐಪಿಎಲ್ 2026ರಲ್ಲಿ ನಿವೃತ್ತಿ ಘೋಷಿಸಲಿದ್ದಾರೆ ಈ ಐದು ಆಟಗಾರರು?


ಐಪಿಎಲ್ 2026ರಲ್ಲಿ ನಿವೃತ್ತಿ ಘೋಷಿಸಲಿದ್ದಾರೆ ಈ ಐದು ಆಟಗಾರರು?

2026ರ ಐಪಿಎಲ್ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಬಾರಿ ಬೆಂಗಳೂರಿನಲ್ಲಿ ಮೊದಲ ಪಂದ್ಯ ನಡೆಯುತ್ತಿರುವುದು ವಿಶೇಷ. ಹಾಲಿ ಚಾಂಪಿಯನ್ಸ್ ಆರ್ಸಿಬಿ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಈ ಬಾರಿ ಎಲ್ಲಾ ತಂಡಗಳಲ್ಲಿ ಕೆಲವು ಬದಲಾವಣೆಗಳನ್ನು ಕೂಡ ಮಾಡಲಾಗಿದೆ. ಪ್ರಮುಖ ಆಟಗಾರರು ಬೇರೆ ಬೇರೆ ತಂಡ ಸೇರಿದ್ದಾರೆ. ಈ ಮಧ್ಯೆ ಈ ಬಾರಿಯ ಐಪಿಎಲ್ ಬಳಿಕ ಐದು ಆಟಗಾರರು ಐಪಿಎಲ್ ನಿಂದ ಹೊರ ಹೋಗಲಿದ್ದಾರೆ ಎಂಬ ಮಾತಿದೆ.

ಎಂಎಸ್ ಧೋನಿ

ಐಪಿಎಲ್ ಇತಿಹಾಸದಲ್ಲಿ ಹಲವು ದಾಖಲೆ ಬರೆದ ಎಂಎಸ್ ಧೋನಿ ಈಗ 45ನೇ ವಯಸ್ಸಿಗೆ ಕಾಲಿಡುತ್ತಿದ್ದಾರೆ. ಅವರು ಈಗ ಆಡುತ್ತಿದ್ದಾರೆ 19ನೇ ಸೀಸನ್. ಇಲ್ಲಿಯವರೆಗೆ ಪ್ರದರ್ಶನದಲ್ಲಿ ಅತಿ ಹೆಚ್ಚು ಪಂದ್ಯಗಳನ್ನು (28) ಆಡಿರುವುದು ಧೋನಿ ಹೆಚ್ಚುಗಾರಿಕೆ. ಅವರ ನಿವೃತ್ತಿ ಬಗ್ಗೆ ಆಗಾಗ ಸುದ್ದಿ ಹರಿದಾಡಿಯೇ ಇತ್ತು. ಆದರೆ, ಅದು ನಿಜವಾಗಿಲ್ಲ. ಇದು ಅವರ ಕೊನೆಯ ಸೀಸನ್ ಆಗಬಹುದು. ತಮ್ಮ ಎನರ್ಜಿ ಕಡಿಮೆ ಆಗುತ್ತಿರುವುದಾಗಿ ಧೋನಿ ಹೇಳಿಕೆ. ರುತುರಾಜ್ ಗಾಯಕ್ವಾಡ್ ನಾಯಕನಾಗಿದ್ದರೆ, ಸಂಜು ಸ್ಯಾಮ್ಸನ್ ಕೂಡ ಸಿಎಸ್‌ಕೆ ಆಗಮಿಸಿದ್ದಾರೆ.

ಮಿಚೆಲ್ ಸ್ಟಾರ್ಕ್

ಆಸ್ಟ್ರೇಲಿಯಾದ ಲೆಜೆಂಡರಿ ಬೌಲರ್ ಎನಿಸಿಕೊಂಡಿರೋ ಮಿಚೆಲ್ ಸ್ಟಾರ್ಕ್ ಎಷ್ಟೋ ಪಂದ್ಯಗಳ ದಿಕ್ಕನ್ನೇ ಬದಲಿಸಿದ್ದಾರೆ. ಅಂತರರಾಷ್ಟ್ರೀಯ ಟಿ20 ಪಂದ್ಯಗಳಿಂದ ನಿವೃತ್ತರಾಗಿದ್ದಾರೆ. ಅವರು ಈ ವರ್ಷದ ಬಳಿಕ ಐಪಿಎಲ್ ನಿಂದ ಹೊರಹೋಗಬಹುದು. ಅವರು ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿದ್ದಾರೆ. ಅವರ ಆಗಮನಕ್ಕೆ ಇನ್ನೂ ಗ್ರೀನ್ ಸಿಗ್ನಲ್ ಸಿಗದ ಕಾರಣ ಆರಂಭದ ಕೆಲ ಪಂದ್ಯಗಳನ್ನು ಅವರು ಮಿಸ್ ಮಾಡಿಕೊಳ್ಳಬಹುದು.

ಇಶಾಂತ್ ಶರ್ಮಾ

ಭಾರತದ ಅನುಭವಿ ವೇಗಿ ಇಶಾಂತ್ ಶರ್ಮಾ ಅವರದ್ದು ಕೂಡ ಇದು ಕೊನೆಯ ಸೀಸನ್ ಎನ್ನಲಾಗುತ್ತಿದೆ. 37 ವರ್ಷದ ಇಶಾಂತ್ ಶರ್ಮಾ ಮೊದಲ ಸೀಸನ್‌ನಿಂದ ಐಪಿಎಲ್ ಆಡುತ್ತಿದ್ದಾರೆ. ಅವರು ಗುಜರಾತ್ ಟೈಟನ್ಸ್‌ನಲ್ಲಿ ಇದ್ದಾರೆ, ಅವರು ಐಪಿಎಲ್‌ಗೆ ನಿವೃತ್ತಿ ಘೋಷಿಸುವ ಸಾಧ್ಯತೆಯಿದೆ.

ಇದನ್ನೂ ಓದಿ: 60 ವರ್ಷದವರೆಗೆ ಐಪಿಎಲ್ ಆಡಬೇಕು ಎಂದಿದ್ದಕ್ಕೆ ಧೋನಿ ಏನಂದ್ರು?

ಮನೀಶ್ ಪಾಂಡೆ

ಐಪಿಎಲ್‌ನಲ್ಲಿ ಶತಕ ಗಳಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಮನೀಶ್ ಪಾಂಡೆ. ಕಳೆದ ನಾಲ್ಕೈದು ವರ್ಷಗಳಲ್ಲಿ ಅವರು ಸಾಕಷ್ಟು ಏರಿಳಿತ ಕಂಡಿದ್ದಾರೆ. ಕಳೆದ ಐದು ಸೀಸನ್‌ಗಳಿಂದ ಅವರು ಕಣಕ್ಕೆ ಇಳಿದಿದ್ದು ಕೇವಲ 28 ಪಂದ್ಯಗಳಲ್ಲಿ ಮಾತ್ರ. ಐದು ಸೀಸನ್‌ಗಳಲ್ಲಿ ನಾಲ್ಕು ವಿಭಿನ್ನ ತಂಡಗಳನ್ನು ಪ್ರತಿನಿಧಿಸಿದ್ದಾರೆ. 36 ವರ್ಷದ ಮನೀಶ್ ಪಾಂಡೆ ಕೆಕೆಆರ್‌ನಲ್ಲಿದ್ದಾರೆ. ಅವರು ನಿವೃತ್ತಿ ಘೋಷಿಸುವ ಸಾಧ್ಯತೆಯಿದೆ.

ಸುನಿಲ್ ನರೈನ್

ಮನೀಶ್ ಪಾಂಡೆ ಜೊತೆಗೆ, ಕೆಕೆಆರ್‌ನ ಅನುಭವಿ ಆಲ್‌ರೌಂಡರ್ ಸುನಿಲ್ ನರೈನ್‌ಗೆ ಇದು ಕೊನೆಯ ಸೀಸನ್ ಆಗಬಹುದು. ಅವರು ಈ ಬಾರಿ ಐಪಿಲ್ ನಿಂದ ನಿವೃತ್ತಿ ಘೋಷಿಸುತ್ತಾರಾ ಎಂಬ ಕುತೂಹಲ ಮೂಡಿದೆ. ಈ ಸೀಸನ್‌ನಲ್ಲಿ ಅವರ ಬ್ಯಾಟಿಂಗ್ ಮತ್ತು ಬಾಲ್ ಎರಡರಲ್ಲೂ ಪ್ರದರ್ಶನ ನೀಡದಿದ್ದರೆ, ಇದು ಅವರ ಕೊನೆಯ ಸೀಸನ್ ಆಗಬಹುದು.

ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

 



Source link

Leave a Reply

Your email address will not be published. Required fields are marked *