
ಮಂಗಳೂರು, ಮಾರ್ಚ್ 24: ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ (ಬಂಟ್ವಾಳ) ತಾಲೂಕಿನ ಸಜಿಪನಡು ಪ್ರದೇಶದಲ್ಲಿ ಮಸೀದಿ ವಿಚಾರವಾಗಿ ಉಭಯ ತಂಡಗಳ ನಡುವೆ ಗಲಾಟೆ ನಡೆದಿದ್ದು ತಳವಾರ, ದೊಣ್ಣೆ ಮತ್ತು ಕಬ್ಬಿಣದ ರಾಡ್‌ಗಳಿಂದ ಹಲ್ಲೆ ಮಾಡಿದ ಭಾರೀ ಘಟನೆ ಆತಂಕಕ್ಕೆ ಕಾರಣವಾಗಿದೆ. ತಲೆಮೊಗರು ಮಸೀದಿ (ತಲೆಮೊಗರು ಮಸೀದಿ) ಸಮೀಪದಲ್ಲಿ ಗಲಾಟೆ ಸಂಭವಿಸಿದ್ದು, ರೋಗಿಗಳನ್ನು ಬಂಟ್ವಾಳ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮಸೀದಿ ವಿಚಾರದಲ್ಲಿ ತಕರಾರು
ಅಬ್ದುಲ್ ನವಾಝ್ (42) ಅವರು ತಮ್ಮ ಸಂಬಂಧಿ ದಾವೂದ್ ಜೊತೆಗೆ ಮಸೀದಿಗೆ ತೆರಳಿ ವಾಪಾಸಾಗುವ ವೇಳೆ, ಶೌಕತ್, ಇಸಾಕ್, ಸಫಿಕ್, ಯಾಕೂಬ್, ಮಹಮ್ಮದ್ ಮುಸ್ತಫಾ, ನಾಸಿರ್ ಮತ್ತು ನಿಝಾಲ್ ಸೇರಿ ಗುಂಪಾಗಿ ನಿಂತಿದ್ದವರು ತಕರಾರು ತೆಗೆದು ಅವಾಚ್ಯವಾಗಿ ನಿಂದಿಸಿದ್ದಾರೆ. ಬಳಿಕ ಕತ್ತಿ ಮತ್ತು ದೊಣ್ಣೆಗಳಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ ಆರೋಪ ಕೇಳಿಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ವ್ಯಕ್ತಿ ಅಬ್ದುಲ್ ಗಫೂರ್ (48) ಎಂಬವರು ದಾಖಲಿಸಿದ್ದು, ಯಾಕೂಬ್, ಶಫೀಕ್, ಇಸಾಕ್, ಸಫ್ವಾನ್ ಮತ್ತು ಅಶ್ರಫ್ ಸಾಹೇಬ್ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಇದೇ ವೇಳೆ, ಶೌಕತ್ ಅಲಿ (40) ಎಂಬವರು ನೀಡಿದ ಮತ್ತೊಂದು ದೂರಿನ ಪ್ರಕಾರ, ದಾವೂದ್, ಜುಬೈರ್, ಸೈದುದ್ದೀನ್, ನವಾಜ್, ಗಫೂರ್, ಶರೀಪ್ ಮತ್ತು ಆಶಿಕ್ ಮಸೀದಿ ವಿಚಾರದಲ್ಲಿ ಗಲಾಟೆ ನಡೆಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಗಲಾಟೆ ತಡೆಹಿಡಿಯಲು ಬಂದ ಸಫಾನಾ, ನಿಜಾಲ್, ಇಸಾಕ್ ಮತ್ತು ಆಶ್ರಫ್ ಅವರ ಮೇಲೂ ದಾಳಿ ಯತ್ನ ನಡೆದಿದೆ.
ಸಜಿಪನಡು ಹೊಡೆದಾಟದ ವಿಡಿಯೋ ಇಲ್ಲಿದೆ ನೋಡಿ
ಒಟ್ಟಾರೆಯಾಗಿ ಘಟನೆ ನಡೆದ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ಮತ್ತು ಪ್ರತಿದೂರು ಸೇರಿ ಒಟ್ಟು ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಪೊಲೀಸರು ಬಿಎನ್ ಎಸ್ ಹಾಗೂ ಶಸ್ತ್ರಾಸ್ತ್ರಗಳ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ: ಬಿದ್ರೆ ಇನ್ಸ್ ಪೆಕ್ಟರ್ ಕಾಮಕಾಂಡ ಕೇಸ್ ಸಂಸ್ಥೆ ಮೂಡಿಗೆ ಹಸ್ತಾಂತರ: ‘ಪೊಲೀಸಪ್ಪಗೆ ಮತ್ತೆ ಸಂಕಷ್ಟ
ಒಟ್ಟಿನಲ್ಲಿ, ಮಸೀದಿ ವಿಚಾರದಲ್ಲಿ ಆರಂಭವಾದ ಈ ಗಲಾಟೆ ಹಿಂಸಾತ್ಮಕ ರೂಪುಗೊಂಡಿದ್ದು, ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದ್ದಾರೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ