
‘ಕರ್ಣ’ ಧಾರಾವಾಹಿ ಜೀ ಕನ್ನಡದಲ್ಲಿ ಪ್ರಸಾರ ಕಂಡು ಗಮನ ಸೆಳೆದಿದೆ. ಈಗ ಈ ಧಾರಾವಾಹಿ ತೆಲುಗಿಗೆ ಡಬ್ ಆಗಿದೆ. ಜೀ ತೆಲುಗಿನಲ್ಲಿ ಸೀರಿಯಲ್ ಪ್ರಸಾರ ಕೂಡ ಶುರುವಾಗಿದೆ. ಇದು ಅಭಿಮಾನಿಗಳಿಗೆ ಖುಷಿ ನೀಡಿದೆ. ಕಿರಣ್ ರಾಜ್, ನಮ್ರತಾ ಗೌಡ ಹಾಗೂ ಭವ್ಯಾ ಗೌಡ ಇನ್ನು ತೆಲುಗು ವೀಕ್ಷಕರಿಗೂ ಪರಿಚಯವಾಗಲಿದ್ದಾರೆ. ಕನ್ನಡದಲ್ಲಿ ಧಾರಾವಾಹಿ ನಂಬರ್ 1 ಸ್ಥಾನದಲ್ಲಿದೆ. ಇನ್ನು ಪರಭಾಷೆಯ ಜನರು ಇದನ್ನು ಹೇಗೆ ಸ್ವಾಗತಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.