Headlines

ಮತ್ತೊಂದು ಸಿನಿಮಾ ಮಾಡ್ತಾರಾ ಪವನ್ ಕಲ್ಯಾಣ್? ಸತ್ಯಾಂಶವೇನು?

ಮತ್ತೊಂದು ಸಿನಿಮಾ ಮಾಡ್ತಾರಾ ಪವನ್ ಕಲ್ಯಾಣ್? ಸತ್ಯಾಂಶವೇನು?


ಮತ್ತೊಂದು ಸಿನಿಮಾ ಮಾಡ್ತಾರಾ ಪವನ್ ಕಲ್ಯಾಣ್? ಸತ್ಯಾಂಶವೇನು?

ಜನಸೇನಾ ಪಕ್ಷದ ಮುಖ್ಯಸ್ಥ ಮತ್ತು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ (ಪವನ್ ಕಲ್ಯಾಣ್) ಸದ್ಯ ರಾಜಕೀಯದಲ್ಲಿ ಬ್ಯೂಸಿಯಾಗಿದ್ದಾರೆ. ಆದರೆ ರಾಜಕೀಯದ ನಡುವೆಯೂ ಮೂರು ಸಿನಿಮಾಗಳನ್ನು ಅವರು ಮುಗಿಸಿದ್ದಾರೆ. ಪವನ್ ಅವರು ಡಿಸಿಎಂ ಆದ ಬಳಿಕ ‘ಹರಿ ಹರ ವೀರ ಮಲ್ಲು’, ‘ಓಜಿ’ ಮತ್ತು ಇತ್ತೀಚೆಗಷ್ಟೇ ಅವರ ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾಗಳು ಬಿಡುಗಡೆ ಆಗಿವೆ. ಅಸಲಿಗೆ ಈ ಮೂರೂ ಸಿನಿಮಾಗಳನ್ನು ಅವರು ಚುನಾವಣೆಗೆ ಧುಮುಕುವ ಮೊದಲೇ ಒಪ್ಪಿಕೊಂಡಿದ್ದರು. ಇದೀಗ ಪವನ್ ಕಲ್ಯಾಣ್ ಅವರು ಹೊಸದೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ.

ಪವನ್ ಕಲ್ಯಾಣ್ ಅವರು ಡಿಸಿಎಂ ಆಗುವ ಮುಂಚೆ ಒಪ್ಪಿಕೊಂಡಿದ್ದ ಸಿನಿಮಾಗಳನ್ನು ಮುಗಿಸಿ ಆ ನಂತರ ಯಾವುದೂ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದಿದ್ದರು. ಆದರೆ ಈಗ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿಗಳು ಹರಿದಾಡಲು ಆರಂಭಿಸಿವೆ. ಇದು ಅಭಿಮಾನಿಗಳಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಇದೀಗ ಪವನ್ ಕಲ್ಯಾಣ್ ತಂಡದವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಪವನ್ ಕಲ್ಯಾಣ್ ಅವರು ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ. ಪವನ್ ಕಲ್ಯಾಣ್ ಅವರು ಹೊಸ ನಿರ್ದೇಶಕರೊಂದಿಗೆ ಸಿನಿಮಾ ಮಾಡಲಿದ್ದಾರೆ ಮತ್ತು ಕೆಲವು ದೊಡ್ಡ ಬ್ಯಾನರ್‌ಗಳ ಅಡಿಯಲ್ಲಿ ಚಿತ್ರಗಳಿಗೆ ಒಪ್ಪಿಗೆ ಎಂಬ ಸುದ್ದಿಗಳು ಹರಡಿವೆ. ಆದರೆ, ಸದ್ಯಕ್ಕೆ ಅವರು ಯಾವುದೇ ಹೊಸ ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ ಎಂದು ಅವರ ತಂಡ ಸ್ಪಷ್ಟಪಡಿಸಿದೆ.

ಇದನ್ನೂ ಓದಿ:ಶ್ರೀಲೀಲಾ ಜೊತೆ ಕಾಣಿಸಿಕೊಳ್ಳುವುದು ಇಷ್ಟವಿಲ್ಲ ಎಂದ ಪವನ್ ಕಲ್ಯಾಣ್: ಕಾರಣ?

ಪವನ್ ಕಲ್ಯಾಣ್ ಅವರು ಈ ಮೊದಲೇ ಒಪ್ಪಿಕೊಂಡ ಕಾರಣಕ್ಕಾಗಿ ಮಾತ್ರವೇ ‘ಹರಿ ಹರ ವೀರ ಮಲ್ಲು’ ‘OG’ ಮತ್ತು ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾಗಳನ್ನು ತಮ್ಮ ರಾಜಕೀಯ ಜವಾಬ್ದಾರಿಗಳ ನಡುವೆಯೂ ಮುಗಿಸಿಕೊಟ್ಟಿದ್ದಾರೆ. ಆದರೆ ಇನ್ನು ಮುಂದೆ ಪವನ್ ಕಲ್ಯಾಣ್ ಅವರು ಸಂಪೂರ್ಣವಾಗಿ ಆಡಳಿತದಲ್ಲಿಯೇ ತೊಡಗಿಕೊಳ್ಳಲಿದ್ದಾರೆ ಎಂದು ಅವರ ಆಪ್ತವಲಯ ಸ್ಪಷ್ಟಪಡಿಸಿದೆ.

ಉಪಮುಖ್ಯಮಂತ್ರಿಯಾಗಿ ರಾಜ್ಯದ ಜವಾಬ್ದಾರಿಗಳನ್ನು ನಿಭಾಯಿಸುತ್ತಿರುವುದರಿಂದ, ಸಿನಿಮಾಗಳಿಗೆ ಮೀಸಲಿಡುವುದು ಅವರಿಗೆ ಸವಾಲಾಗಿದೆ. ಯಾವುದೇ ಅಧಿಕೃತ ಘೋಷಣೆ ಹೊರಬರುವವರೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ವದಂತಿಗಳನ್ನು ನಂಬಬೇಡಿ ಎಂದು ಪವನ್ ಅವರ ತಂಡ ಅಭಿಮಾನಿಗಳಿಗೆ ವಿನಂತಿಸಿದೆ. ಪವನ್ ನಟಿಸಿದ್ದ ‘ಓಜಿ’ ಸಿನಿಮಾದ ಸೀಕ್ವೆಲ್‌ನಲ್ಲಿ ನಟಿಸುವ ಆಸೆ ಇದೆ, ಒಂದೊಮ್ಮೆ ಪವನ್ ಕಲ್ಯಾಣ್ ಮುಂದಿನ ದಿನಗಳಲ್ಲಿ ನಟಿಸಿದರೆ ‘ಓಜಿ’ ಸಿನಿಮಾದ ಸೀಕ್ವೆಲ್ ಮಾತ್ರ ಆಗಲಿದೆ ಎನ್ನಲಾಗುತ್ತಿದೆ. ಆದರೆ ಪ್ರಸ್ತುತ ಅವರು ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *