ಬಿಗ್ ಬಾಸ್ ಖ್ಯಾತಿಯ ರಕ್ಷಿತಾ ಶೆಟ್ಟಿ ಮತ್ತು ಮ್ಯೂಟಂಟ್ ರಘು ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ಜಿಮ್‌ನಲ್ಲಿ ರಘು ಫಿಟ್ನೆಸ್ ಟಿಪ್ಸ್ ಕೇಳಿದಾಗ, ‘ಇರುವುದೊಂದೇ ಜೀವನ, ಚೆನ್ನಾಗಿ ತಿನ್ನಿ, ಆಮೇಲೆ ವರ್ಕೌಟ್ ಮಾಡಿ’ ಎಂದು ರಕ್ಷಿತಾ ನೀಡಿದ ಸಲಹೆ ರಘುಗೆ ಅಚ್ಚರಿ ಮೂಡಿಸಿದೆ.
ಬಿಗ್ಬಾಸ್ ರಕ್ಷಿತಾ ಶೆಟ್ಟಿ (Bigg Boss Rakshita Shetty) ಕನ್ನಡ ಮಾತನಾಡಿ ಕನ್ನಡಿಗರ ಮನಸ್ಸನ್ನು ಗೆಲ್ಲುವುದು ಮಾತ್ರವಲ್ಲದೇ ತಮಾಷೆ ಮಾಡುವುದರಲ್ಲಿಯೂ ನಂಬರ್ 1.

ಇದಾಗಲೇ ಬಿಗ್ಬಾಸ್ನ ಮ್ಯೂಟಂಟ್ ರಘು ಅವರ ಜೊತೆಗೂಡಿ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ರಘು ಅವರು ಅತ್ಯಂತ ಅಲ್ಪ ಅವಧಿಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಲಕ್ಷ ಲಕ್ಷ ಫಾಲೋವರ್ಸ್ ಅನ್ನು ಗಳಿಸುವಲ್ಲಿ ರಕ್ಷಿತಾ ಅವರ ಪಾಲೂ ಬಹು ದೊಡ್ಡದು ಇದೆ.

ಎಲ್ಲರಿಗೂ ತಿಳಿದಿರುವಂತೆ ರಘು ಅವರು ಫಿಟ್ನೆಸ್ ಮಾಸ್ಟರ್. ಆದರೆ ಅವರ ಜಿಮ್‌ನಲ್ಲಿ ಅವರನ್ನೇ ಮೀರಿಸುವ ಫಿಟ್ನೆಸ್ ಟಿಪ್ಸ್ ನೀಡಿದ್ದಾರೆ. ರಘು ಅವರು (Bigg Boss Mutant Raghu) ಅಭಿಮಾನಿಗಳಿಗೆ ಫಿಟ್ನೆಸ್ ಟಿಪ್ಸ್ ಕೊಡಿ ಎಂದಾಗ ಜಿಮ್‌ನಲ್ಲಿ ವೇಟ್ ಲಿಫ್ಟಿಂಗ್ ಮಾಡ್ತಿದ್ದ ರಕ್ಷಿತಾ ಕೊಟ್ಟ ಟಿಪ್ಸ್ ಕೇಳಿ ರಘು ಅವರೇ ಸುಸ್ತಾಗಿ ಹೋಗಿದ್ದಾರೆ.

ಅಷ್ಟಕ್ಕೂ ರಕ್ಷಿತಾ ಶೆಟ್ಟಿ ಹೇಳಿದ್ದು ಏನೆಂದರೆ, ಇರೋದು ಒಂದೇ ಜೀವನ. ಎಷ್ಟು ಬೇಕೋ ಅಷ್ಟು ತಿನ್ನಿ. ಏನು ಬೇಕೋ ಎಲ್ಲಾ ತಿನ್ನಿ. ಆಮೇಲೆ ಚೆನ್ನಾಗಿ ಎಕ್ಸಸೈಸ್ ಮಾಡಿ ಎಂದಿದ್ದಾರೆ.

ಟಿಪ್ಸ್ ಕೊಡು ಅಂದ್ರೆ ತಿನ್ನು ಅಂತಿದ್ಯಲ್ಲಾ ಎಂದು ರಘು ಕೇಳಿದಾಗ, ಹೌದು ಮತ್ತೆ, ಇರೋ ಒಂದು ಲೈಫ್ನಲ್ಲಿ ತಿನ್ನದೇ ಇರೋಕೇ ಆಗತ್ತಾ? ಏನು ಬೇಕಾದ್ರೂ ತಿನ್ನಬೇಕು ಆದರೆ ಅದಕ್ಕೆ ತಕ್ಕಂತೆ ವರ್ಕ್ಔಟ್ ಮಾಡಬೇಕು ಎಂದು ಹೇಳಿದ್ನಲ್ಲಾ ಎಂದಿದ್ದಾರೆ.

ಅದಕ್ಕೆ ರಕ್ಷಿತಾ ಫ್ಯಾನ್ಸ್, ಅರ್ಧ ಮಾತ್ರ ಇವತ್ತಿನಿಂದಲೇ ಶುರು ಮಾಡ್ತೇವೆ (ಅರ್ಥಾತ್ ತಿನ್ನೋದು), ಇನ್ನರ್ಧ ಇನ್ನೊಮ್ಮೆ ನೋಡೋಣ ಎಂದು ರಕ್ಷಿತಾಳ ಕಾಲೆಳೆಯುತ್ತಿದ್ದಾರೆ.

Source link
Bigg Boss ರಕ್ಷಿತಾ ಶೆಟ್ಟಿ ಫಿಟ್ನೆಸ್ ಟಿಪ್ಸ್ಗೆ ರಘು ಸುಸ್ತೋ ಸುಸ್ತು: ಇವತ್ತಿನಿಂದಲೇ ರೆಡಿ ಎಂದ ಫ್ಯಾನ್ಸ್