RCB ಪಂದ್ಯಗಳ ಟಿಕೆಟ್ ಸಿಗಲೇಬೇಕು ಅಂದ್ರೆ ಬುಕ್ ಮಾಡುವಾಗ ಈ ಕ್ರಮ ಅನುಸರಿಸಿ

RCB ಪಂದ್ಯಗಳ ಟಿಕೆಟ್ ಸಿಗಲೇಬೇಕು ಅಂದ್ರೆ ಬುಕ್ ಮಾಡುವಾಗ ಈ ಕ್ರಮ ಅನುಸರಿಸಿ


RCB ಪಂದ್ಯಗಳ ಟಿಕೆಟ್ ಸಿಗಲೇಬೇಕು ಅಂದ್ರೆ ಬುಕ್ ಮಾಡುವಾಗ ಈ ಕ್ರಮ ಅನುಸರಿಸಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಹೋಂಗ್ರೌಂಡ್ ಅಲ್ಲಿ ಐದು ಪಂದ್ಯಗಳನ್ನು ಆಡುತ್ತಿದೆ ಅನ್ನೋದು ವಿಶೇಷ. ಉಳಿದು ಎರಡು ಪಂದ್ಯಗಳನ್ನು ಬೇರೆಡೆ ಆಡುತ್ತಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದೆ. CB ಹಾಗೂ ಹೈದರಾಬಾದ್ ಆರ್ಕಾ ಪಂದ್ಯ ಬೆಂಗಳೂರಿನಲ್ಲೇ ಅನ್ನೋದು ವಿಶೇಷ. ಈ ಪಂದ್ಯವನ್ನು ನೋಡಲೇಬೇಕು ಎಂದು ಕಾದು ಕುಳಿತವರಿಗೆ ಟಿಕೆಟ್ ಸಿಗುತ್ತದೆಯೋ ಅಥವಾ ಇಲ್ಲವೋ ಎಂಬ ಆತಂಕ. ಟಿಕೆಟ್ ಬುಕ್ ಮಾಡಬೇಕಾದರೆ ಈ ಕ್ರಮ ಅನುಸರಿಸಿದರೆ ನಿಮಗೆ ಟಿಕೆಟ್ ಸಿಗೋ ಸಾಧ್ಯತೆ ಹೆಚ್ಚು.

ಆರ್ಸಿಬಿ ಹೋಂಗ್ರೌಂಡ್‌ನಲ್ಲಿ ನಡೆಯುವ ಐದು ಪಂದ್ಯಗಳ ಮ್ಯಾಚ್ ಟಿಕೆಟ್ ಆರ್ಸಿಬಿಯ ಅಧಿಕೃತ ಆಯಪ್ ಮತ್ತು ಅಧಿಕೃತ ವೆಬ್ ಸೈಟ್ ಅಲ್ಲಿ ಲಭ್ಯವಿರುತ್ತದೆ. ಎಲ್ಲಾ ಸ್ಟ್ಯಾಂಡ್‌ಗಳ ಟಿಕೆಟ್‌ಗಳು ಮಾರಾಟಕ್ಕೆ ಇರಲಿ. 2,300 ರೂಪಾಯಿ ಇಂದ ಆರಂಭವಾಗಿ, 42 ಸಾವಿರ ರೂಪಾಯಿವರೆಗೂ ಟಿಕೆಟ್‌ಗಳು ಲಭ್ಯವಿವೆ. ವಿವಿಧ ಸ್ಟ್ಯಾಂಡ್‌ಗಳ ಆಧಾರದ ಮೇಲೆ ಟಿಕೆಟ್ ಬೆಲೆ ನಿಗದಿಪಡಿಸಲಾಗಿದೆ.

ಆರ್ಸಿಬಿ ಮ್ಯಾಚ್ ಟಿಕೆಟ್ ಬುಕ್ ಮಾಡಲು ಆಯಪ್ ಇನ್ ಸ್ಟಾಲ್ ಮಾಡಿಕೊಳ್ಳಬೇಕು. ವೆಬ್ ಸೈಟ್ ಅಲ್ಲಿ ಲಾಗಿನ್ ಆಗಿ ಕೂಡ ಟಿಕೆಟ್ ಖರೀದಿಸಬಹುದು. ಮೊದಲು ಆಯಪ್ ಗೆ ಲಾಗಿನ್ ಆಗಬೇಕು. ಅಂದಾಗ ಮಾತ್ರ ಟಿಕೆಟ್ ಖರೀದಿಸಲು ಸಾಧ್ಯ. ಹೀಗಾಗಿ, ಲಾಗಿನ್ ಆಗಿ ಎಲ್ಲಾ ಮಾಹಿತಿಯನ್ನು ಮೊದಲೇ ತುಂಬಿಡಬೇಕು. ಆಗ ಟಿಕೆಟ್ ಬುಕ್ ಮಾಡಲು ಸುಲಭ ಆಗಲಿದೆ.

ಇದನ್ನೂ ಓದಿ: ಐಪಿಎಲ್ 2026ರಲ್ಲಿ ನಿವೃತ್ತಿ ಘೋಷಿಸಲಿದ್ದಾರೆ ಈ ಐದು ಆಟಗಾರರು?

ಇನ್ನು, ನೀವು ಟಿಕೆಟ್ ಬುಕ್ ಮಾಡುವಾಗ ತುಂಬಾನೇ ವೇಗದಲ್ಲಿ ಟಿಕೆಟ್ ಬುಕ್ ಮಾಡಬೇಕು. ಅಂದಾಗ ಮಾತ್ರ ನಿಮಗೆ ಟಿಕೆಟ್ ಸಿಗುತ್ತದೆ. ಎಲ್ಲರೂ ಟಿಕೆಟ್ ಗಾಗಿ ಕಾದು ಕುಳಿತಿರುವ ಸ್ಪರ್ಧೆ ಜೋರಾಗಿರುತ್ತದೆ. ಹೀಗಾಗಿ, ಟಿಕೆಟ್ ಬುಕ್ ಮಾಡುವಾಗ ಈ ಕ್ರಮ ಅನುಸರಿದರೆ ಟಿಕೆಟ್ ಸಿಗೋ ಸಾಧ್ಯತೆ ಹೆಚ್ಚು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *