Headlines

ಬಿರಿಯಾನಿ ಪ್ರಿಯರಿಗೆ ಬಂಪರ್ ಆಫರ್: ಈ ಹೋಟೆಲ್​ಗೆ ಒಂದು ಸಿಲಿಂಡರ್ ತಂದ್ರೆ ಸಾಕು, ತಿಂಗಳು ಪೂರ್ತಿ ಉಚಿತ ಬಿರಿಯಾನಿ ಹಬ್ಬ!

ಬಿರಿಯಾನಿ ಪ್ರಿಯರಿಗೆ ಬಂಪರ್ ಆಫರ್: ಈ ಹೋಟೆಲ್​ಗೆ ಒಂದು ಸಿಲಿಂಡರ್ ತಂದ್ರೆ ಸಾಕು, ತಿಂಗಳು ಪೂರ್ತಿ ಉಚಿತ ಬಿರಿಯಾನಿ ಹಬ್ಬ!


ಬಿರಿಯಾನಿ ಪ್ರಿಯರಿಗೆ ಬಂಪರ್ ಆಫರ್: ಈ ಹೋಟೆಲ್‌ಗೆ ಒಂದು ಸಿಲಿಂಡರ್ ತಂದ್ರೆ ಸಾಕು, ತಿಂಗಳು ಪೂರ್ತಿ ಉಚಿತ ಬಿರಿಯಾನಿ ಹಬ್ಬ!

ಬೆಂಗಳೂರು, ಮಾರ್ಚ್ 24: ವಾಣಿಜ್ಯ ಗ್ಯಾಸ್ ಸಿಲಿಂಡರ್ (ವಾಣಿಜ್ಯ LPG) ಕೊರತೆ ಹಿನ್ನೆಲೆ ಹೊಸೂರಿನಲ್ಲಿ ಒಂದು ಹೋಟೆಲ್ ವಿಭಿನ್ನ ಹಾಗೂ ಗಮನಸೆಳೆಯುವ ಆಫರ್ ನೀಡಲಾಗಿದೆ. ‘ಹೆಲ್ಪ್ ಅಸ್ ಕುಕ್, ವಿ’ಲ್ ಫೀಡ್ ಯು’ ಎಂಬ ಅಭಿಯಾನವನ್ನು ಆರಂಭಿಸಿರುವ ಈ ಹೋಟೆಲ್, ಗ್ರಾಹಕರ ಸಹಕಾರ ಪಡೆಯಲು ಹೊಸ ರೀತಿಯ ಪ್ರಯತ್ನಕ್ಕೆ ಮುಂದಾಗಿದೆ. ಹೊಸೂರು ರಸ್ತೆಯ ಗ್ರ್ಯಾಂಡ್ ಸಿನೆಮಾಸ್ ಸಮೀಪದಲ್ಲಿರುವ ಈರೋಡ್ ಅಮ್ಮಾಯಿ ಮೆಸ್ ಹೋಟೆಲ್‌ನಲ್ಲಿ ಈ ವಿಶೇಷ ಆಫರ್ ಬಂದಿದೆ. ಗ್ಯಾಸ್ ಕೊರತೆಯಿಂದ ಅಡುಗೆ ಕಾರ್ಯದಲ್ಲಿ ತೊಂದರೆ ಎದುರಿಸುತ್ತಿರುವ ಹೋಟೆಲ್, ಗ್ರಾಹಕರಿಂದಲೇ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ತರಿಸುವ ಮೂಲಕ ಸಮಸ್ಯೆ ಪರಿಹಾರಕ್ಕೆ ಮುಂದಾಗಿದೆ.

ಹೊಸೂರಿನ ಹೋಟೆಲ್ ಆಫರ್ ಏನು?

ಹೋಟೆಲ್ ನೀಡಿರುವ ಆಫರ್ ವಿವರ ಹೀಗಿದೆ;

  • 1 ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ತಂದರೆ – ಒಂದು ತಿಂಗಳು ಪ್ರತಿದಿನ 1 ಬಿರಿಯಾನಿ ಉಚಿತ
  • 2 ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ತಂದರೆ – ಒಂದು ತಿಂಗಳು ಪ್ರತಿದಿನ 2 ಬಿರಿಯಾನಿ ಉಚಿತ

ಈ ಕುರಿತು ಹೋಟೆಲ್ ಮುಂದೆ ಬೋರ್ಡ್ ಹಾಕಲಾಗಿದೆ, ಸಾಮಾಜಿಕ ಜಾಲತಾಣಗಳಲ್ಲಿ ಈ ಆಫರ್ ವೈರಲ್ ಆಗುತ್ತಿದೆ.

ಒಂದು ತಿಂಗಳು ಉಚಿತ ಬಿರಿಯಾನಿ! ಹೊಸೂರ್ ಹೋಟೆಲ್ ವಾಣಿಜ್ಯ LPG ಕೊರತೆಯ ನಡುವೆ ವಿಶಿಷ್ಟ ಡೀಲ್ ನೀಡುತ್ತದೆ; ವಿವರಗಳನ್ನು ಪರಿಶೀಲಿಸಿ

ಹೋಟೆಲ್ ಆಫರ್ ಪೋಸ್ಟರ್

ಗ್ಯಾಸ್ ಕೊರತೆಯಿಂದ ಹೋಟೆಲ್ ಉದ್ಯಮಕ್ಕೆ ಸಂಕಷ್ಟ

ಇಸ್ರೇಲ್, ಇರಾನ್, ಅಮೆರಿಕ ಯುದ್ಧದಿಂದಾಗಿ ಇತ್ತೀಚಿನ ದಿನಗಳಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಸರಬರಾಜಿನಲ್ಲಿ ಉಂಟಾದ ವ್ಯಾಪಾರದಿಂದ ಹಲವು ಹೋಟೆಲ್‌ಗಳು ಸಂಕಷ್ಟಕ್ಕೆ ಸಿಲುಕಿವೆ. ಅಡುಗೆ ಕಾರ್ಯವು ಗ್ಯಾಸ್ ಅಗತ್ಯವಿದ್ದು, ಸರಬರಾಜು ಸ್ಥಗಿತಗೊಂಡ ಹೋಟೆಲ್‌ಗಳು ಕಾರ್ಯಾಚರಣೆಯನ್ನು ಮುಂದುವರಿಸುವುದು ಕಷ್ಟ. ಬೆಂಗಳೂರಿನಲ್ಲಂತೂ ಅನೇಕ ಹೋಟೆಲ್‌ಗಳು ಬಂದ್ ಆಗಿವೆ. ಇನ್ನೂ ಅನೇಕ ಹೋಟೆಲ್‌ಗಳು ದುಬಾರಿ ದರದಲ್ಲಿ ಕಮರ್ಷಿಯಲ್ ಸಿಲಿಂಡರ್ ಖರೀದಿಸಿ ಗ್ರಾಹಕರಿಗೆ ಹೆಚ್ಚುವರಿ ದರಕ್ಕೆ ತಿಂಡಿ-ತಿನಿಸು ನೀಡುತ್ತಿವೆ. ಹಲವು ಹೋಟೆಲ್‌ಗಳಲ್ಲಿ ಬಿಲ್‌ನಲ್ಲಿ ‘ಗ್ಯಾಸ್ ಶುಲ್ಕ’ ಸೇರ್ಪಡೆಯಾಗಿದೆ.

ಇದನ್ನೂ ಓದಿ: ಗ್ಯಾಸ್ ಟ್ರಬಲ್: ಹೋಟೆಲ್ ಹೋಟೆಲ್ ವಿಲ ವಿಲ; ಸೌದೆ ಓಲೆ ದರ ದುಪ್ಪಟ್ಟು

ಒಟ್ಟಿನಲ್ಲಿ, ಗ್ಯಾಸ್ ಕೊರತೆಯಂತಹ ಸಮಸ್ಯೆ ಸೃಜನಾತ್ಮಕವಾಗಿ ಎದುರಿಸಲು ಹೊಸೂರು ಹೋಟೆಲ್ ಆರಂಭಿಸಿರುವ ಈ ಪ್ರಯತ್ನ ಇದೀಗ ಚರ್ಚೆಗೆ ಗ್ರಾಸವಾಗಿದೆ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *