Headlines

ತುಂಗಾಭದ್ರ ಜಲಾಶಯದ ನೀರಿನ ಮಟ್ಟದಲ್ಲಿ ಭಾರಿ ಇಳಿಕೆ: ಹಲವು ಹಳ್ಳಿಗಳಲ್ಲಿ ನೀರಿಗಾಗಿ ಹಾಹಾಕಾರ | Huge Drop In Water Level In Tungabhadra Reservoir Many Villages Feared Water Scarcity

ತುಂಗಾಭದ್ರ ಜಲಾಶಯದ ನೀರಿನ ಮಟ್ಟದಲ್ಲಿ ಭಾರಿ ಇಳಿಕೆ: ಹಲವು ಹಳ್ಳಿಗಳಲ್ಲಿ ನೀರಿಗಾಗಿ ಹಾಹಾಕಾರ | Huge Drop In Water Level In Tungabhadra Reservoir Many Villages Feared Water Scarcity



ತುಂಗಾಭದ್ರ ಜಲಾಶಯದ ನೀರಿನ ಮಟ್ಟದಲ್ಲಿ ಭಾರಿ ಇಳಿಕೆ: ಹಲವು ಹಳ್ಳಿಗಳಲ್ಲಿ ನೀರಿಗಾಗಿ ಹಾಹಾಕಾರ | Huge Drop In Water Level In Tungabhadra Reservoir Many Villages Feared Water Scarcity

ಬೇಸಿಗೆಯ ತಾಪಕ್ಕೆ ತುಂಗಭದ್ರಾ ಜಲಾಶಯದ ನೀರಿನ ಮಟ್ಟ ಕುಸಿದಿದ್ದು, ಕೇವಲ 20 ಟಿಎಂಸಿ ನೀರು ಮಾತ್ರ ಲಭ್ಯವಿದೆ. ಇದರಿಂದ ವಿಜಯನಗರ, ಬಳ್ಳಾರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಹಾಹಾಕಾರ ಶುರುವಾಗಿದ್ದು, ನೀರನ್ನು ಕುಡಿಯಲು ಮಾತ್ರ ಮೀಸಲಿಡಬೇಕೆಂಬ ಒತ್ತಾಯ ಹೆಚ್ಚಾಗಿದೆ.

ತುಂಗಾಭದ್ರ ಜಲಾಶಯಕ್ಕೂ ತಟ್ಟಿದ ಬಿಸಿ; ತಾಪ

ವಿಜಯನಗರ/ಬಳ್ಳಾರಿ: ಸೂರ್ಯನ ತಾಪ ದಿನದಿಂದ ದಿನಕ್ಕೆ ಬಿರುಸುಗೊಳ್ಳುತ್ತಿದ್ದು, ಸೆಖೆ ತಡೆದುಕೊಳ್ಳಲಾಗದೇ ಜನರು ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಇತ್ತ ಬಿರು ಬೇಸಿಗೆಯ ಬಿಸಿಲ ತಾಪ ತುಂಗಾಭದ್ರ ಜಲಾಶಯಕ್ಕೂ ತಟ್ಟಿದ್ದು, ಜಲಾಶಯದ ನೀರಿನ‌ ಮಟ್ಟ ಕೂಡ ಕಡಿಮೆಯಾಗ್ತಿದೆ.

ವಿಜಯನಗರ ಜಿಲ್ಲೆಯ ಕೆಲ ತಾಲೂಕುಗಳಲ್ಲಿ ಜೀವ ಜಲಕ್ಕಾಗಿ ಈಗಾಗಲೇ ಹಾಹಾಕಾರ ಶುರುವಾಗಿದೆ. 105. 788 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ತುಂಗಾಭದ್ರಾ ಜಲಾಶಯದಲ್ಲಿ ಕೇವಲ 20 ಟಿಎಂಸಿ ನೀರು ಮಾತ್ರ ಇದೆ. ಹೀಗಾಗಿ ವಿಜಯನಗರ, ಕೊಪ್ಪಳ, ಬಳ್ಳಾರಿ, ರಾಯಚೂರು ಜಿಲ್ಲೆಗಳ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದ ನೀರನ್ನು ಕೇವಲ ಜನರಿಗೆ ಕುಡಿಯುವ ನೀರಿಗಾಗಿ ಮೀಸಲಿಡುವಂತೆ ಒತ್ತಾಯ ಕೇಳಿ ಬಂದಿದೆ.

ಬೇಸಿಗೆಯ ದಿನಗಳನ್ನು ಎದುರಿಸಲು ಜಿಲ್ಲಾಡಳಿತ ಪೂರ್ವ ಸಿದ್ಧತೆ

ಇರುವ 20 ಟಿಎಂಸಿ ನೀರಿನಲ್ಲಿ ಸುತ್ತಮುತ್ತಲಿನ ಕಾರ್ಖಾನೆಗಳು ನಡೆಯಬೇಕಿದೆ. ಇದರ ಜೊತೆಗೆ ಸುತ್ತಮುತ್ತಲ ಕೃಷಿ ಚಟುವಟಿಕೆಗಳಿಗೂ ನೀರಿನ ಅಗತ್ಯವಿದೆ. ಇದರೊಂದಿಗೆ ಕುಡಿಯುವ ನೀರಿಗೂ ಜಲಾಶಯದ ನೀರು ಬಳಕೆ ಮಾಡಬೇಕಿದೆ. ಹೀಗಾಗಿ ಮುಂದಿರುವ ಬೇಸಿಗೆಯ ದಿನಗಳನ್ನು ಎದುರಿಸಲು ಜಿಲ್ಲಾಡಳಿತ ಪೂರ್ವ ಸಿದ್ಧತೆ ಮಾಡಿಕೊಳ್ಳುತ್ತಿದೆ. ಜಲಾಶಯದ ನೀರನ್ನು ಮಿತವಾಗಿ ಬಳಸೋದಕ್ಕೆ ಜಿಲ್ಲಾಡಳಿತ ಯೋಜನೆ ರೂಪಿಸುತ್ತಿದೆ.

ಇದನ್ನೂ ಓದಿ: ಮಕ್ಕಳಿಗೆ ದಾರಿ ತೋರಬೇಕಾದ ಶಿಕ್ಷಕಿಯೇ ದಾರಿ ತಪ್ಪಿದಳು: ಪ್ರಿಯಕರನೊಂದಿಗೆ ಸೇರಿ ಗಂಡನ ಮುಗಿಸಿದ ಸರ್ಕಾರಿ ಶಾಲೆ ಟೀಚರ್

ಈ ಹಿನ್ನೆಲೆ ನೀರಾವರಿ ಇಲಾಖೆ ಮತ್ತು ಕಾರ್ಖಾನೆಗಳ ಮಾಲಿಕರ ಜೊತೆ ಜಿಲ್ಲಾಡಳಿತ ಸಭೆ ನಡೆಸುವುದಕ್ಕೆ ತೀರ್ಮಾನ ಮಾಡಿದೆ. ಈಗಾಗಲೇ ವಿಜಯನಗರ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಕುಡಿವ ನೀರಿಗೆ ಹಾಹಾಕಾರ ಪ್ರಾರಂಭವಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ ನೂರಾರು ಹಳ್ಳಿಗಳಲ್ಲಿ ಕುಡಿವ ನೀರಿನ ಸಮಸ್ಯೆ ಇದೆ. ಹೀಗಾಗಿ ತುಂಗಭದ್ರಾ ಜಲಾಶಯದಲ್ಲಿನ ನೀರನ್ನು ಸಮರ್ಪಕವಾಗಿ ಕುಡಿಯುವ ನೀರಿಗೆ ಬಳಕೆ ಮಾಡಿ ಅಂತ ಸ್ಥಳೀಯರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ: ಯುವಕರ ಪಾಲಿಗೆ ಮೃತ್ಯಪಾಶವಾಯ್ತು ಕೇಬಲ್ ವೈರ್: ಇಬ್ಬರು ಬೈಕ್ ಸವಾರರು ಸಾವು



Source link

Leave a Reply

Your email address will not be published. Required fields are marked *