ಆನ್‌ಲೈನ್ ಗೇಮ್‌ ಸುಳಿಗೆ ಸಿಲುಕಿ ಜೀವ ಬಿಟ್ಟ ಬೀದರ್ MBBS ವಿದ್ಯಾರ್ಥಿ, ಬಡತನದಲ್ಲಿ ಓದಿಸಿದ್ದೆ ಸರ್ ತಂದೆ ಕಣ್ಣೀರು | Mbbs Student Avishkar Chavan Death In Bidar After Losing Money In Online Game Father Emotional Statement Gdp

ಬೀದರ್‌ನ ಬ್ರಿಮ್ಸ್ ವೈದ್ಯಕೀಯ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿ, ಆನ್‌ಲೈನ್ ಗೇಮ್‌ನಲ್ಲಿ ಹಣ ಕಳೆದುಕೊಂಡ ಕಾರಣಕ್ಕೆ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಸುಮಾರು ₹80,000 ನಷ್ಟವಾಗಿರುವುದು ತಿಳಿದುಬಂದಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಆನ್‌ಲೈನ್ ಗೇಮ್‌ನಲ್ಲಿ ಹಣ ಕಳೆದುಕೊಂಡ ಹಿನ್ನೆಲೆಯಲ್ಲಿ ವೈದ್ಯಕೀಯ ವಿದ್ಯಾರ್ಥಿ ಆತ್ಮ*ಹ*ತ್ಯೆ ಮಾಡಿಕೊಂಡಿರುವುದು ಘಟನೆ ಬೀದರ್‌ನಲ್ಲಿ ನಡೆದಿದೆ. ಮೃತ ವಿದ್ಯಾರ್ಥಿ ಅನಿಷ್ಕಾರ್ ಚವ್ಹಾಣ್ (21) ಈತ ಬ್ರಿಮ್ಸ್ (BRIMS) ವೈದ್ಯಕೀಯ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದ. ಮಾಹಿತಿಯ ಪ್ರಕಾರ, ಅನಿಷ್ಕಾರ್ ಅವರು ವಸತಿ ನಿಲಯದ ತಮ್ಮ ಕೊಠಡಿಯಲ್ಲಿ ಫ್ಯಾನ್‌ ಗೆ ಹಗ್ಗ ಬಿಗಿದು ಆತ್ಮ*ಹ*ತ್ಯೆ ಮಾಡಿಕೊಂಡಿದ್ದಾನೆ.

ಮೃತ ವಿದ್ಯಾರ್ಥಿಯ ತಂದೆ ಹೇಳಿಕೆ

 ಘಟನೆ ಸಂಬಂಧ ಮೃತ ವಿದ್ಯಾರ್ಥಿಯ ತಂದೆ ಶಾಮರಾವ್ ಚವ್ಹಾಣ್ ಅವರು ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ್ದು, ಏನೇ ಮಾಡಿದ್ರು ನಮಗೆ ಹೇಳುತ್ತಿದ್ದ ಆದ್ರೆ ಆನ್‌ಲೈನ್ ಗೇಮ್ ಬಗ್ಗೆ ಹೇಳಿಲ್ಲ. ಪೊಲೀಸರು ಸದ್ಯ ಆಲ್‌ಲೈನ್ ಗೇಮಿನಲ್ಲಿ ಹಣ ಕಳೆದುಕೊಂಡು ಮನನೊಂದು ಮೃತಪ್ಟಿದ್ದಾನೆ ಎಂದು ಹೇಳ್ತಿದ್ದಾರೆ. ಬಹಳಷ್ಟು ಕಷ್ಟ ಪಟ್ಟು ಮಕ್ಕಳನ್ನು ಮೆಡಿಕಲ್ ಓದಿಸ್ತಿದೆ. ಬಡತನದಲ್ಲಿ ಮೂರು ಮಕ್ಕಳನ್ನು ಮೆಡಿಕಲ್ ಓದಿಸಿದ್ದೇನೆ. ಅದರೆ ನನ್ನ ಮಗ ಈ ರೀತಿ ಮಾಡಿಕೊಂಡಿದ್ದಾನೆ. ನನ್ನ ಮಗಳು ಪೋನ್ ಮಾಡಿದಾಗ ಮಗ ಆತ್ಮ*ಹತ್ಯೆ ಮಾಡಿಕೊಂಡಿದ್ದು ಗೊತ್ತಾಗಿದೆ. ಈ ರೀತಿ ಆನ್ ಲೈನ್ ಗೇಮ್ ಆಡಬಾರದು ಎಂದು ನನ್ನ ಮಗನೇ ಹೇಳತ್ತಿದ್ದ ಎಂದು ತಂದೆ ಕಣ್ಣೀರು ಹಾಕಿದ್ದು, ಸರಿಯಾಗಿ ತನಿಖೆ ಮಾಡಬೇಕು ಎಂದು ಅನಿಷ್ಕಾರ್ ತಂದೆ ಶಾಮರಾವ್ ಚವ್ಹಾಣ್ ಒತ್ತಾಯಿಸಿದ್ದಾರೆ.

ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರತಿಕ್ರಿಯೆ

ಘಟನೆಯ ಕುರಿತು ಪ್ರತಿಕ್ರಿಯಿಸಿದ ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಪ್ರದೀಪ್ ಗುಂಟಿ ಅವರು, ವಿದ್ಯಾರ್ಥಿಯ ಮೊಬೈಲ್ ಪರಿಶೀಲನೆ ವೇಳೆ ಆನ್‌ಲೈನ್ ಗೇಮ್ ಆಡುತ್ತಿದ್ದ ಮಾಹಿತಿ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ. ಆನ್‌ಲೈನ್ ಗೇಮ್‌ನಲ್ಲಿ ಅವರು ಸುಮಾರು ₹80,000 ಕಳೆದುಕೊಂಡಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಜೊತೆಗೆ, ವಾಟ್ಸಾಪ್ ಚಾಟ್‌ಗಳಲ್ಲಿ ಗೇಮ್‌ಗೆ ಸಂಬಂಧಿಸಿದ ಸಂಭಾಷಣೆಗಳೂ ದೊರೆತಿವೆ. ಈ ಹಿನ್ನೆಲೆ, ಹಣ ಕಳೆದುಕೊಂಡ ದುಃಖದಿಂದ ಮನನೊಂದು ಅವರು ಆತ್ಮ*ಹ*ತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಪೋಷಕರು ಈ ಕುರಿತು ದೂರು ನೀಡಲಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಿದ್ದಾರೆ. ಈ ಘಟನೆ ಯುವಕರಲ್ಲಿ ಹೆಚ್ಚುತ್ತಿರುವ ಆನ್‌ಲೈನ್ ಗೇಮ್ ಆಸಕ್ತಿಯ ಅಪಾಯಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.

Source link

Leave a Reply

Your email address will not be published. Required fields are marked *