ತುಮಕೂರು: ನಗರಕ್ಕೆ ಹೊಂದಿಕೊAಡAತೆ ಇರುವ ಶೆಟ್ಟಿಹಳ್ಳಿ ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಹೆಸರಿನಲ್ಲಿರುವ ಸ.ನಂ. 185ರಲ್ಲಿ 2ಎಕರೆ ಜಮೀನನ್ನು ಆಂಜನೇಯ ಸ್ವಾಮಿ ದೇವಸ್ಥಾನದ ಹೆಸರಿನಲ್ಲಿ ಇರುವ ಜಮೀನು ಸರ್ಕಾರದ ಜಮೀನಾಗಿರುತ್ತದೆ. ನ್ಯಾಯಾಲಯದಲ್ಲಿ ಕೊಟ್ಟಿರುವ ತಾತ್ಕಾಲಿಕ ತಡೆಯನ್ನು ತೆರವುಗೊಳಿಸಿ ಆಂಜನೇಯ ಸ್ವಾಮಿ ದೇವಸ್ಥಾನದ ಸುಬರ್ಧಿಗೆ ಕೊಡಿಸಬೇಕಾಗಿ ಶೆಟ್ಟಿಹಳ್ಳಿ ಗ್ರಾಮಸ್ಥರುಗಳು ಶುಕ್ರವಾರ ಜಿಲ್ಲಾಧಿಕಾಗಳು ಮತ್ತು ಗೃಹ ಸಚಿವರ ವಿಶೇಷ ಕರ್ತವ್ಯ ಅಧಿಕಾರಿಯಾದ ಡಾ.ಕೆ.ನಾಗಣ್ಣ ಅವರಿಗೆ ಮನವಿ ಸಲ್ಲಿಸಿದ್ದರು.

ಶೆಟ್ಟಿಹಳ್ಳಿ ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನವು ಸರ್ಕಾರದ ಮುಜರಾಯಿ ದೇವಸ್ಥಾನವಾಗಿರುತ್ತದೆ. ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಹೆಸರಿಗೆ ದಿನಾಂಕ : 24-01-1945ರಲ್ಲಿ ಭಜಂತ್ರಿ ನರಸಿಂಹಯ್ಯನವರ ಮಗ ಮುನಿಸ್ವಾಮಯ್ಯ, ದೊಡ್ಡಬಳ್ಳಾಪುರ ತಾಲ್ಲೂಕು, ದೊಡ್ಡಬೆಳವಲ ಗ್ರಾಮದ ವಾಸಿಯಾದ ಇವರು ಕ್ರಯ ಪತ್ರ ಮಾಡಿಕೊಟ್ಟಿರುತ್ತಾರೆ.ಅದರೆ ಇತ್ತಿಚಿಗೆ ನಾಗರಾಜು ಬಿನ್ ಲೇಟ್. ಸಂಜೀವಯ್ಯ, ಶೆಟ್ಟಿಹಳ್ಳಿ. ಅವರು ಅನಧಿಕೃತವಾಗಿ ನ್ಯಾಯಾಲಯದಿಂದ ತಡೆಯಾಜ್ಞೆ ಪಡೆದು ಸುಬರ್ಧಿನಲ್ಲಿರುವ ದೇವಸ್ಥಾನದ ಅಸ್ತಿಯನ್ನು ತಮ್ಮದು ಎಂದು ನ್ಯಾಯಾಲಯದಿಂದ ತಡೆಯಾಜ್ಞೆತಂದು ದೇವಸ್ಥಾನ ಅಸ್ತಿಯನ್ನು ಕಬಳಿಸುವ ಉನ್ನವರ ನಡೆಸಿದ್ದಾರೆ
ಇತಿಹಾಸ ಪ್ರಸಿದ್ಧ ಪುರಾತನ ಕಾಲದ ದೇವಸ್ಥಾನ ಆಗಿದ್ದು ದೇವಸ್ಥಾನ ಇರುವ ಜಾಗವನ್ನು ಸರಕಾರಿ ಗೋಮಾಳ ಎಂದು ಪಹಣಿ ಬರುತ್ತಿರುವುದರಿಂದ ಕೆಲವು ಪಟ್ಟ ಭದ್ರ ಹಿತಾಸಕ್ತಿಗಳು ಈ ಜಾಗ ನಮ್ಮದು ಎಂದು ತಕರಾರು ತೆಗೆದು ದೇವಸ್ಥಾನ ಅಭಿವೃದ್ಧಿ ಪಡಿಸಲು ಅಡ್ಡಿ ಆಗಿರುವದರಿಂದ ಭಕ್ತಾದಿಗಳಿಗೆ ನೋವುಂಟು ಮಾಡಿದೆ ಮತ್ತು ದೇವಸ್ಥಾನ ಮುಜರಾಯಿ ಇಲಾಖೆಗೆ ಒಳಪಟ್ಟರು ಕೂಡ ಅಧಿಕಾರಿಗಳು ಗಮನಹರಿಸಿ ದೇವಸ್ಥಾನದ ಜಾಗವನ್ನು ಭದ್ರಪಡಿಸಿಕೊಳ್ಳದೆ ಬಿಟ್ಟಿರುವುದನ್ನು ಯಾರು ಸಹಿಸಿಕೊಳ್ಳಲು ಆಗುತ್ತಿಲ್ಲ ಅದಕ್ಕಾಗಿ ನಮ್ಮಲ್ಲರ ಮನವಿಯನ್ನು ಪರಿಗಣಿಸಿ ಈ ದೇವಸ್ಥಾನದ ಜಾಗವನ್ನು ತಕ್ಷಣವೇ ಸರ್ವೆ ಮಾಡಿಸಿ ನಕ್ಷೆ ಮಾಡಿಸಿ ದೇವಸ್ಥಾನದ ಹೆಸರಿಗೆ ಖಾತೆ ಮಾಡಿಸಿಕೊಡಬೇಕೆಂದು ಶೆಟ್ಟಿಹಳ್ಳಿ ಗ್ರಾಮದ ಕಾಂಗ್ರೇಸ್ ಮಹಿಳಾ ಮುಖಂಡರಾದ ಭಾಗ್ಯಮ್ಮ.ಬಿ ಆರೋಪಿಸಿದರು.

ಎಸ್.ನಾಗರಾಜು ಬಿನ್ ಲೇಟ್. ಸಂಜೀವಯ್ಯ ಶೆಟ್ಟಿಹಳ್ಳಿ, ರವರು ದೇವಸ್ಥಾನದ ಪರವಾಗಿ ಶ್ರೀ ಮಹದೇವಯ್ಯ, ಶೆಟ್ಟಿಹಳ್ಳಿ ಇವರ ವಿರುದ್ಧ ನ್ಯಾಯಾಲಯದಲ್ಲಿ ತಾತ್ಕಾಲಿಕ ತಡೆಯಾಜ್ಞೆಯನ್ನು ಪಡೆದು ಜಮೀನನ್ನು ವಶಕ್ಕೆ ಪಡೆದಿರುತ್ತಾರೆ. ಜಮೀನನ್ನು ನೋಡಿಕೊಳ್ಳುತ್ತಿರುವ ಕಿರಣ್ ಬಿನ್ ಸದರಿ ಜಮೀನು ಸರ್ಕಾರದ ಆಸ್ತಿಯಾಗಿದ್ದು, ಖಾಸಗಿಯವರ ಪಾಲಾಗದಂತೆ ತಡೆದು ದೇವಸ್ಥಾನದ ಸುಬರ್ಧಿಗೆ ನೀಡಬೇಕಾಗಿದೆ ಎಂದು ಶೆಟ್ಟಿಹಳ್ಳಿ ಗ್ರಾಮಸ್ತಾರಾದ ಮಹಾಲಿಂಗಯ್ಯ, ಶಶಿಧರ್, ಗುರುಸಿದ್ದಪ್ಪ, ಹನುಮಂತರಾಯಪ್ಪ ಅವರುಗಳು ಒತ್ತಾಯಿಸಿದ್ದಾರೆ.