
ಹಿರಿಯ ನಟ ಡಿಂಗ್ರಿ ನಾಗರಾಜ್ ಅವರ ಪುತ್ರ ರಾಜವರ್ಧನ್ ಇದುವರೆಗೂ 4 ಸಿನಿಮಾಗಳಲ್ಲಿ ಹೀರೋ ಆಗಿ ನಟಿಸಿದ್ದಾರೆ. ಸಿನಿಮಾದಲ್ಲಿ ಬೇರೆ ಬೇರೆ ರೀತಿಯ ಪ್ರಯತ್ನ ಮಾಡಲಾಗಿತ್ತು. ಈಗ ಪ್ಯಾನ್ ಏಷ್ಯಾದ ಪ್ರಯತ್ನಕ್ಕೆ ಕೈ ಹಾಕುತ್ತಿದೆ ಎಂದು ಹೇಳಲಾಗಿದೆ. ಅವರ ಹೊಸ ಸಿನಿಮಾಗೆ ಮುಹೂರ್ತ ನೇರವೇರಿದೆ. ಗಣಪತಿ ದೇವಸ್ಥಾನದಲ್ಲಿ ಸಿನಿಮಾದ ಮುಹೂರ್ತಕ್ಕೆ ಚಾಲನೆ ನೀಡುವ ಮೂಲಕ ಕೆಲಸಗಳನ್ನು ಪ್ರಾರಂಭಿಸಲಾಗಿದೆ. ಈ ಸಿನಿಮಾಗಾಗಿ ರಾಜವರ್ಧನ್ (ರಾಜವರ್ಧನ್) ಅವರು ಇತ್ತೀಚೆಗೆ ಕೆಲವು ವರ್ಷಗಳಿಂದ ತಯಾರಿ ಮಾಡಿಕೊಂಡಿದ್ದಾರೆ.
ಕೆಜಿಎಫ್, ಕಾಂತಾರ, ಟಾಕ್ಸಿಕ್ ರೀತಿ ದೊಡ್ಡ ಮಟ್ಟದಲ್ಲಿ ಸಿನಿಮಾ ಮಾಡಬೇಕು ಎಂಬುದು ರಾಜವರ್ಧನ್ ಕನಸು. ಅದಕ್ಕಾಗಿ ಒಂದು ತಂಡ ಕಟ್ಟಿಕೊಂಡು ಸುಮಾರು 5 ವರ್ಷಗಳಿಂದ ಸತತವಾಗಿ ಪೂರ್ವ ತಯಾರಿ ನಡೆಸುತ್ತಿದ್ದಾರಂತೆ. ಇದೀಗ ಎಲ್ಲ ತಯಾರಿ ಕೊನೆಯ ಹಂತಕ್ಕೆ ಬಂದಿದೆ. ಸದ್ಯದಲ್ಲೇ ಈ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಿದ್ದಾರೆ.
ಇತ್ತೀಚೆಗೆ ರಾಜವರ್ಧನ್ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಂಡಿರಲಿಲ್ಲ. ನಟನೆಯಿಂದ ಅವರು ದೂರ ಉಳಿದಿದ್ದು ಕೂಡ ಇದೆ ಹೊಸ ಪ್ರಾಜೆಕ್ಟ್ ಕಾರಣಕ್ಕೆ ಎಂದು ಹೇಳಲಾಗುತ್ತಿದೆ. ಇದನ್ನು ಅವರು ಪ್ಯಾನ್ ಏಷ್ಯಾ ಸಿನಿಮಾ ಎಂದು ಕರೆದಿರುವ ಕಾರಣ ಖಂಡಿತವಾಗಿಯೂ ಸಿನಿಪ್ರಿಯರಲ್ಲಿ ಕೌತುಕ ಮೂಡಿದೆ. ಆ ಬಗ್ಗೆ ಇನ್ನಷ್ಟೇ ಅಪ್ಡೇಟ್ ಆಗಬೇಕಿದೆ.
ಈ ಬಗ್ಗೆ ರಾಜವರ್ಧನ್ ಅವರು ಮಾತನಾಡಿದ್ದಾರೆ. ‘ಬಿಚ್ಚುಗತ್ತಿ ಚಿತ್ರದಿಂದ ಗಜರಾಮ ಸಿನಿಮಾದ ತನಕವೂ ಮಾಡಿದ ಎಲ್ಲಾ ಸಿನಿಮಾಗಳು ಒಂದೊಂದು ಬಗೆಯಲ್ಲಿ ಪಾಠ ಹೇಳಿಕೊಟ್ಟಿವೆ. ಕಳೆದ ವರ್ಷ ನಾನು ಕ್ರಿಯೇಟೀವ್ ಹೆಡ್ ಆಗಿ, ನಿರ್ಮಾಪಕನಾಗಿ ಕೆಲಸ ಮಾಡಿದ್ದ ‘ಕಮಲ್ ಶ್ರೀದೇವಿ’ ಸಿನಿಮಾದೊಳಗಿನ, ಹೊರಗಿನ
ಬೇಕು-ಬೇಡ ಮತ್ತು ವ್ಯವಹಾರಿಕ ಜ್ಞಾನವನ್ನು ಕಲಿಸಿದೆ’ ಎಂದು ಅವರು ಹೇಳಿದರು.
ಇದನ್ನೂ ಓದಿ: ದರ್ಶನ್ ಬಹಳ ಭಾವನಾತ್ಮಕ ಜೀವಿ, ಆಗಿಲ್ಲ: ರಾಜವರ್ಧನ್
‘ನಾನೂ ಮೂಲತಃ ಚಿತ್ರಕಲಾ ವಿದ್ಯಾರ್ಥಿ. ಸಿನಿಮಾದೊಳಗೆ ಕೊನೆಯವರೆಗೂ ನಾನು ವಿದ್ಯಾರ್ಥಿಯೇ. ಇಲ್ಲಿಯವರೆಗೂ ನಾನು ಮಾಡಿದ ಚಿತ್ರಗಳೆಲ್ಲವೂ ಸಿನಿಮಾ ಕೆಲಸಗಳೆಲ್ಲವೂ ಒಂದೊಂದು ಕಲಿಕೆ. ಈವರೆಗೂ ನಾನೇನು ಮಾಡಿದ್ದೆನೂ ಅದೆಲ್ಲವೂ ಅನುಭವ ಅಷ್ಟೇ. ನನ್ನ ಅಸಲಿ ಸಿನಿಮಾ ಪಯಣ ಇಲ್ಲಿಂದ ಆರಂಭ. ನನ್ನ ಸಿನಿಮಾ ಕನಸು, ದಾರಿ, ಗುರಿ ಈ ಪ್ರಾಜೆಕ್ಟ್ ಆಗಲಿದೆ ಎಂಬುದು ನನ್ನ ಭರವಸೆ’ ಎಂದು ರಾಜ್ ವರ್ಧನ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.