ಐಪಿಎಲ್ ಅಭಿಮಾನಿಗಳೇ ಗಮನಿಸಿ! ಪಂದ್ಯದ ದಿನ ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ಈ ರಸ್ತೆಗಳು ಬಂದ್!

ಐಪಿಎಲ್ ಅಭಿಮಾನಿಗಳೇ ಗಮನಿಸಿ! ಪಂದ್ಯದ ದಿನ ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ಈ ರಸ್ತೆಗಳು ಬಂದ್!


ಐಪಿಎಲ್ ಅಭಿಮಾನಿಗಳೇ ಗಮನಿಸಿ! ಪಂದ್ಯದ ದಿನ ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ಈ ರಸ್ತೆಗಳು ಬಂದ್!

ಬೆಂಗಳೂರು, ಮಾ.24: ಐಪಿಎಲ್ 2026ರ (ಐಪಿಎಲ್ 2026) ಉದ್ಘಾಟನಾ ಪಂದ್ಯ ಮಾರ್ಚ್ 28 ರಂದು ಬೆಂಗಳೂರಿನಲ್ಲಿ. ಆರ್‌ಸಿಬಿ ಮತ್ತು ಆರ್‌ಎಚ್ ನಡುವಿನ ಪಂದ್ಯ. ಈ ಬಾರಿ ಪಂದ್ಯಕ್ಕೆ ಭಾರೀ ಜನ ಸೇರುವ ಸಾಧ್ಯತೆಗಳಿವೆ. ಅದರಲ್ಲಿ ನೆಚ್ಚಿನ ಟೀಮ್ ಆರ್ ಸಿಬಿ ಬೆಂಗಳೂರಿನಲ್ಲಿ ಆಡುತ್ತಿದ್ದರೆ ಖಂಡಿತ ಜನ ಬರುವುದು ಖಂಡಿತ. ಅದಕ್ಕಾಗಿ ಜನರನ್ನು ಮತ್ತು ವಾಹನಗಳನ್ನು ನಿಭಾಯಿಸಲು ಹಲವು ಕ್ರಮಗಳನ್ನು ಸಂಚಾರಿ ಪೊಲೀಸರು ಹಾಗೂ ಚಿನ್ನಸ್ವಾಮಿ ಸ್ಟೇಡಿಯಂ ಆಡಳಿಯ ಮಂಡಳಿಯು ಪ್ರಮುಖ ಕ್ರಮಗಳನ್ನು ತೆಗೆದುಕೊಂಡಿದೆ. ವಾಹನ ಸಂಚಾರ ಹಾಗೂ ಪಾರ್ಕಿಂಗ್, ಜನರ ಓಡಾಟ ಎಲ್ಲದಕ್ಕೂ ಹೊಸ ರೂಲ್ಸ್ ತರಲಾಗಿದೆ. ಪಂದ್ಯಗಳ ದಿನದಂದು ಕ್ರೀಡಾಂಗಣದ ಸುತ್ತಮುತ್ತಲಿನ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಮತ್ತು ನಿಲುಗಡೆಯನ್ನು ನಿರ್ಬಂಧಿಸಲಾಗಿದೆ.

ಮಾರ್ಚ್ 28 ಮತ್ತು ಏಪ್ರಿಲ್ 5 ರವರೆಗೆ ಕ್ವೀನ್ಸ್ ರಸ್ತೆ, ಬಾಳೆಕುಂದ್ರಿ ರಸ್ತೆ ಮತ್ತು ಸಿಟಿ ಓ ಜಂಕ್ಷನ್ ಸಂಪೂರ್ಣ ಬಂದ್ ಮಾಡಲಾಗುವುದು. ಎಂ.ಜಿ. ರಸ್ತೆಯ ಅನಿಲ್ ಕುಂಬಳೆ ವೃತ್ತದಿಂದ ಅನಿಲ್ ಕುಂಬಳೆ ಜಂಕ್ಷನ್ ವರೆಗೆ ನಿಷೇಧಿಸಲಾಗಿದೆ. ಈ ಪ್ರದೇಶದಲ್ಲಿ ವಾಹನ ಸಂಚಾರಕ್ಕೆ ಅವಕಾಶವಿಲ್ಲ. ಎಂ.ಜಿ. ರಸ್ತೆಯಿಂದ ಕಬ್ಬನ್ ರಸ್ತೆವರೆಗೆ ಬಂದ್ ಮಾಡಲಾಗುವುದು ಎಂದು ಹೇಳಿದ್ದಾರೆ.

ಇದರೊಂದಿಗೆ ರಾಜಭವನ ರಸ್ತೆ, ಟಿ. ಚೌಡಯ್ಯ ರಸ್ತೆ, ರೇಸ್ ಕೋರ್ಸ್ ರಸ್ತೆ ಮತ್ತು ಸೆಂಟ್ರಲ್ ಸ್ಟ್ರೀಟ್ ರಸ್ತೆಯ ಎರಡು ಬದಿಗಳಲ್ಲಿ ಸಂಚಾರ ನಿಷೇಧಿಸಲಾಗಿದೆ. ಕ್ವೀನ್ಸ್ ವೃತ್ತದಿಂದ ಹಡ್ಸನ್ ವೃತ್ತದವರೆಗೆ ನಿರ್ಬಂಧವನ್ನು ಮಾಡಲಾಗಿದೆ. ಕ್ಯಾಶ್ ಫಾರ್ಮಸಿ ಜಂಕ್ಷನ್ ಅನಿಲ್ ಕುಂಬಳೆ ವೃತ್ತದವರೆಗೆ ಹಾಗೂ ಕಿಂಗ್ ರಸ್ತೆ, ಪ್ರೆಸ್ ಕ್ಲಬ್ ಮುಂಭಾಗ ಮತ್ತು ಬಾಲಭವನ ಮುಂಭಾಗದ ಫೌಂಟೇನ್ ರಸ್ತೆಯಲ್ಲಿ ಪಾರ್ಕಿಂಗ್ ಅನ್ನು ನಿಷೇಧಿಸಲಾಗಿದೆ.

ಇನ್ನು ಪಂದ್ಯ ನೋಡಲು ಬರುವ ಕ್ರಿಕೆಟ್ ಪ್ರೇಮಿಗಳಿಗೆ ವಾಹನಗಳನ್ನು ನಿಲ್ಲಿಸಲು ಕೂಡ ವ್ಯವಸ್ಥೆಗಳನ್ನು ಕೂಡ ಮಾಡಲಾಗಿದೆ. ಬೆಳಿಗ್ಗೆ 11 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಸಂಚಾರಿ ಪೊಲೀಸರು ಹಾಗೂ ಚಿನ್ನಸ್ವಾಮಿ ಸ್ಟೇಡಿಯಂ ಆಡಳಿಯ ಮಂಡಳಿ ಸೂಚಿಸಿರುವ ಕಡೆಗಳಲ್ಲಿ ವಾಹನ ನಿಲುಗಡೆ ಮಾಡಬಹುದು. ಸೆಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮೈದಾನ, ಸೇಂಟ್ ಜೋಸೆಫ್ ಸ್ಕೂಲ್ ಮೈದಾನ (ವಿಠ್ಠಲ್ ಮಲ್ಯ ರಸ್ತೆ), ಫ್ರೀಡಂ ಪಾರ್ಕ್ (MLCP ಮಲ್ಟಿ ಲೆವೆಲ್ ಪಾರ್ಕಿಂಗ್), ಗರುಡ ಮಾಲ್ ಪಾರ್ಕಿಂಗ್ ಸ್ಥಳ, ಶಿವಾಜಿನಗರ ಬಸ್ ನಿಲ್ದಾಣದ ಮೊದಲ ಮಹಡಿ, ಯುಬಿ ಸಿಟಿ (UB ಸಿಟಿ) ಪಾರ್ಕಿಂಗ್ ಸ್ಥಳ ಪಾರ್ಕಿಂಗ್ ಮಾಡಬಹುದು.

ಇದನ್ನೂ ಓದಿ: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ RCB vs SRH ಹೈವೋಲ್ಟೇಜ್ ಪಂದ್ಯ! ನಿಮಗೂ ಟಿಕೆಟ್ ಬೇಕಾ? ಬೆಲೆ ಎಷ್ಟು? ಎಲ್ಲಿ ಬುಕ್ ಮಾಡಬೇಕು?

ಇನ್ನು ಸ್ಟೇಡಿಯಂ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಕೂಡ ಸೂಚಿಸಲಾಗಿದೆ. ಪ್ರವೇಶ ಗೇಟ್ ನಂಬರ್ E1 ರಿಂದ E3, E18, E19, E22 ಮತ್ತು E11 ರಿಂದ E17 ರ ಮೂಲಕ ಪ್ರವೇಶಿಸಬಹುದು. ಪಂದ್ಯ ಮುಗಿದ ನಂತರ E5, E8, E09, E9A ಗೇಟ್‌ಗಳ ಮೂಲಕ ಮಾತ್ರ ಹೊರಗೆ ಹೋಗಲು ಅವಕಾಶವಿದೆ. ಗೇಟ್ ನಂಬರ್ E10 ಕೇವಲ ಆಟಗಾರರು, ವಿಐಪಿಗಳು ಮತ್ತು ಪ್ರಮುಖ ಅತಿಥಿಗಳಿಗೆ ಮೀಸಲಿಡಲಾಗಿದೆ. ಕ್ಯಾಬ್/ಆಟೋ ಪಿಕ್-ಆಪ್ ಮತ್ತು ಡ್ರಾಪ್ ಪಾಯಿಂಟ್ಸ್ ಬಗ್ಗೆಯೂ ಇಲ್ಲಿ. ಬಿಆರ್‌ವಿ (BRV) ಮೈದಾನ ಗೇಟ್ ನಂಬರ್ 6. ಮಾಣಿಕ್ ಷಾ ಪರೇಡ್ ಮೈದಾನ ಗೇಟ್ ನಂಬರ್ 3 ಕೂಡ ಗುರುತು ಮಾಡಲಾಗಿದೆ.

ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 



Source link

Leave a Reply

Your email address will not be published. Required fields are marked *