
ಬೆಂಗಳೂರು, ಮಾರ್ಚ್ 24: ಐಪಿಎಲ್ (ಐಪಿಎಲ್)ಅಂದರೆ ಕ್ರಿಕೆಟ್ ಪ್ರೇಮಿಗಳಿಗೆ ಎಲ್ಲಿಲ್ಲದ ಸಂಭ್ರಮ. ಐಪಿಎಲ್ ಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ರೈಸರ್ಸ್ ಹೈದರಾಬಾದ್ ನಡುವೆ ಮೊದಲ ಪಂದ್ಯ ನಡೆಯಿತು. ಆರ್ಸಿಬಿ ಪಂದ್ಯ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಇದೇ ಸಂದರ್ಭದಲ್ಲಿ ಹೆಮ್ಮೆಯ ಕನ್ನಡಿಗರ ಬ್ರಾಂಡ್ ಕೆಎಂಎಫ್ (ಕೆಎಂಎಫ್)2026ರ ಆವೃತ್ತಿಯಲ್ಲಿ ಆರ್ಸಿಬಿಗೆ ಪ್ರಾಯೋಜಕತ್ವ ನೀಡಿದೆ. ಈ ಮೂಲಕ ನಂದಿನಿ ಉತ್ಪನ್ನಗಳು ದೇಶಕ್ಕೆ ಪರಿಚಯ.
2026ರ ಆವೃತ್ತಿಯಲ್ಲಿ ಕನ್ನಡಿಗರ ಹೆಮ್ಮೆಯ ಬ್ರಾಂಡ್ ಕೆಎಂಎಫ್ ಪ್ರಾಯೋಜಕತ್ವ ನೀಡುವ ಮೂಲಕ ಆರ್ಸಿಬಿಗೆ ಸಾಥ್ ನೀಡಿದೆ. ಆರ್ಸಿಬಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡ. ಇಂತಹ ಪ್ರಾಯೋಜಕತ್ವ ನೀಡುವ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಂದಿನಿ ಉತ್ಪನ್ನ ಪರಿಚಯಕ್ಕೆ ಮುಂದಾಗಿದೆ.
ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ ಹೇಳಿದ್ದಾರೆ
ಈ ಬಗ್ಗೆ ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಎಂಎಫ್ ನಿರ್ದೇಶಕ ಶಿವಸ್ವಾಮಿ, 2026ರ ಆವೃತ್ತಿಯಲ್ಲಿ ಆರ್ಸಿಬಿಗೆ ಕೆಎಂಎಫ್ ಪ್ರಾಯೋಜಕತ್ವ ನೀಡಿದೆ. ಈ ಮೂಲಕ ನಂದಿನಿ ಉತ್ಪನ್ನಗಳು ದೇಶಕ್ಕೆ ಪರಿಚಯ. ಆರ್ಸಿಬಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡ, ಇಂದಿನ ಮಟ್ಟದಲ್ಲಿ ನಂದಿನಿ ಉತ್ಪನ್ನ ಪರಿಚಯ. ವಿಚಾಟ್ ಕೊಹ್ಲಿ, ರಜತ್ ಪಾಟಿದಾರ್, ದೇವದತ್ತ ಪಡಿಕಲ್ ನಿಂದ KMF ಉತ್ಪನ್ನ ಪ್ರಚಾರಕ್ಕೆ ಮುಂದಾಗಿದ್ದೇವೆ. 4 ಕೋಟಿ ರೂ ವೆಚ್ಚದಲ್ಲಿ KMF ಒಂದು ವರ್ಷದ ಟೆಂಡರ್ ಪಡೆದಿದೆ ಎಂದು ಮಾಹಿತಿ ನೀಡಿದೆ.
ಯುದ್ಧದಿಂದಾಗಿ ನಂದಿನಿ ಉತ್ಪನ್ನಗಳಿಗೆ ದೊಡ್ಡ ಎಫೆಕ್ಟ್ ಆಗಿಲ್ಲ
ಇನ್ನು ಇರಾನ್ ಮತ್ತು ಅಮೆರಿಕ, ಇಸ್ರೇಲ್ ನಡುವಿನ ಯುದ್ಧದಿಂದ ನಂದಿನಿ ಉತ್ಪನ್ನಗಳಿಗೆ ಎಫೆಕ್ಟ್ ವಿಚಾರವಾಗಿ ಅವರು ಮಾತನಾಡಿದ್ದಾರೆ, ಯುದ್ಧದಿಂದ ಹಾಲಿನ ಮಾರಾಟದಲ್ಲಿ ವ್ಯತ್ಯಯವಾಗಿಲ್ಲ. 4-5 ಸಾವಿರ ಲೀಟರ್ ಹಾಲು ಮಾರಾಟ ಮಾತ್ರ ಕಡಿಮೆಯಾಗಿದೆ. ಯುದ್ಧದಿಂದಾಗಿ ನಂದಿನಿ ಉತ್ಪನ್ನಗಳಿಗೆ ದೊಡ್ಡ ಎಫೆಕ್ಟ್ ಆಗಿಲ್ಲ ಎಂದು ಸ್ಪಷ್ಟವಾಗಿದೆ.
ಇದನ್ನೂ ಓದಿ: ಇನ್ನೆರಡು ದಿನ ಕಳೆದ್ರೆ ನಂದಿನಿ ಉತ್ಪನ್ನಗಳೂ ಸಿಗೋದು ಡೌಟ್! ಕೆಎಂಎಫ್‌ಗೂ ಎದುರಾಯ್ತು ಸಂಕಷ್ಟ
ಟಿಟಿಡಿ ತುಪ್ಪದ ಟೆಂಡರ್ ನಲ್ಲಿ ಮಾತುಕಥೆ ನಡೆದಿದೆ. ಟೆಂಡರ್ ಹಾಕಿದ್ದೇವೆ ಇನ್ನು ಅಂತಿಮ ಆಗಿಲ್ಲ. ನಮ್ಮಲ್ಲಿ ಉತ್ಪಾದನೆ ಸಾಕಷ್ಟಿದೆ. ಟಿಟಿಡಿಗೆ ಬೇಕಾದಷ್ಟು ತುಪ್ಪ ಪೂರೈಕೆ ಮಾಡಲು ಶಕ್ತವಾಗಿದ್ದೇವೆ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.