Headlines

33ನೇ ವಯಸ್ಸಲ್ಲೂ 20ರ ಯುವತಿಯರಂತೆ ಹೊಳೆಯುವ ಆಲಿಯಾ ಭಟ್… ಸ್ಕಿನ್ ಕೇರ್ ಸೀಕ್ರೆಟ್ ಇಲ್ಲಿದೆ

33ನೇ ವಯಸ್ಸಲ್ಲೂ 20ರ ಯುವತಿಯರಂತೆ ಹೊಳೆಯುವ ಆಲಿಯಾ ಭಟ್… ಸ್ಕಿನ್ ಕೇರ್ ಸೀಕ್ರೆಟ್ ಇಲ್ಲಿದೆ

33ನೇ ವಯಸ್ಸಲ್ಲೂ 20ರ ಯುವತಿಯರಂತೆ ಹೊಳೆಯುವ ಆಲಿಯಾ ಭಟ್… ಸ್ಕಿನ್ ಕೇರ್ ಸೀಕ್ರೆಟ್ ಇಲ್ಲಿದೆ

Alia Bhatt Beauty Secret: ಆಲಿಯಾ ಭಟ್ ತಾಯಿಯಾದರೂ, ಅವರ ಮುಖವು ಇನ್ನೂ 20 ವರ್ಷದ ಯುವತಿಯರಂತೆ ಹೊಳೆಯುತ್ತಿರುತ್ತದೆ. ಅಭಿಮಾನಿಗಳು ಆಗಾಗ್ಗೆ ಅವರ ಹೊಳೆಯುವ ಮೈಬಣ್ಣದ ಹಿಂದಿನ ರಹಸ್ಯದ ಬಗ್ಗೆ ಕೇಳುತ್ತಾರೆ, ಇಲ್ಲಿದೆ ಆಲಿಯಾ ಭಟ್ ಗ್ಲೋಯಿಂಗ್ ಸ್ಕಿನ್ ಸೀಕ್ರೆಟ್.

ಬಾಲಿವುಡ್ ನಟಿಯರ ಸೌಂದರ್ಯದ ಬಗ್ಗೆ ಮಾತನಾಡಿದರೆ, ಆಲಿಯಾ ಭಟ್ ಮೊದಲನೇ ಸ್ಥಾನದಲ್ಲಿರುತ್ತಾರೆ. ಅವರು ತಮ್ಮ 33 ನೇ ವಯಸ್ಸಿನಲ್ಲಿಯೂ ಸಹ, ಟೀನೇಜ್ ಹುಡುಗಿಯಂತೆ ಕಾಣುತ್ತಾರೆ. ಅವರ ಮುಖದಲ್ಲಿ ಎವರ್ ಗ್ರೀನ್ ಹೊಳಪನ್ನು ನೀವು ಯಾವಾಗಲೂ ಕಾಣಬಹುದು.

ತಾಯಿಯಾಗಿದ್ದರೂ, ಆಲಿಯಾ ಭಟ್ ಅವರ ಮುಖದಲ್ಲಿನ ಹೊಳಪು ಕಡಿಮೆಯಾಗಿಲ್ಲ. ಪ್ರತಿಯೊಬ್ಬರೂ ಅವರ ಹೊಳೆಯುವ ಚರ್ಮದ ಹಿಂದಿನ ರಹಸ್ಯವನ್ನು ತಿಳಿಯಲು ಉತ್ಸುಕರಾಗಿದ್ದಾರೆ. ಅಂತಹ ಕಾಂತಿಯುತ ಚರ್ಮವನ್ನು ಪಡೆಯಲು ನಟಿ ದುಬಾರಿ ಕ್ರೀಮ್‌ಗಳು ಅಥವಾ ಚಿಕಿತ್ಸೆಗಳನ್ನು ಪಡೆದಿಲ್ಲ. ಸಿಂಪಲ್ ರುಟಿನ್ ಫಾಲೋ ಮಾಡ್ತಿದ್ದಾರೆ ಅಷ್ಟೇ.

ನಟಿ ಸ್ವತಃ ಹಲವಾರು ಸಂದರ್ಭಗಳಲ್ಲಿ – ಸಂದರ್ಶನಗಳು, ಇನ್‌ಸ್ಟಾಗ್ರಾಮ್ ರೀಲ್‌ಗಳು ಮತ್ತು ಯೂಟ್ಯೂಬ್ ವೀಡಿಯೊಗಳಲ್ಲಿ ತಮ್ಮ ಚರ್ಮದ ಆರೈಕೆ ತುಂಬಾ ಸರಳವಾಗಿದೆ ಎಂದು ಹೇಳಿಕೊಂಡಿದ್ದಾರೆ. ಇವರು ಹೆವಿ ಮೇಕಪ್ ಅಥವಾ ಸ್ಕಿನ್ ಕೇರ್ ಬದಲು ಸಿಂಪಲ್ ಆಗಿರುವ ಕ್ಲೆನ್ಸಿಂಗ್, ಮಸಾಜ್, ಹೈಡ್ರೇಶನ್, ಸನ್ ಸ್ಕ್ರೀನ್ ಕಡೆಗೆ ಗಮನ ಹರಿಸುತ್ತಾರೆ.

ಆಲಿಯಾ ತನ್ನ ದಿನಚರಿ ತುಂಬಾನೆ ಸರಳವಾಗಿದೆ ಎನ್ನುತ್ತಾರೆ. ಆದರೂ ಇದು ಋತುಮಾನವನ್ನು ಅವಲಂಬಿಸಿ ಸ್ವಲ್ಪ ಬದಲಾಗುತ್ತದೆ .ಮೊದಲನೇಯದಾಗಿ ಅವರು ಸೌಮ್ಯವಾದ ಕ್ಲೆನ್ಸಿಂಗ್ ಮಾಡುತ್ತಾರೆ. ಹೌದು, ಬೆಳಗ್ಗೆ ಎದ್ದ ತಕ್ಷಣ ಸೌಮ್ಯವಾದ ಫೇಸ್ ವಾಶ್ ಅಥವಾ ಕ್ಲೆನ್ಸರ್ ಬಳಸಿ ಕ್ಲೆನ್ಸಿಂಗ್ ಮಾಡುತ್ತಾರೆ.

ತನ್ನ ಕ್ಲೆನ್ಸಿಂಗ್ ರುಟೀನ್ ಮುಗಿಸಿದ ನಂತರ, ನಟಿ ಸ್ಕಿನ್ ಮಸಾಜರ್ ಅಥವಾ ಜೇಡ್ ರೋಲರ್ ಬಳಸಿ ತನ್ನ ಮುಖಕ್ಕೆ ಮಸಾಜ್ ಮಾಡಿಕೊಳ್ಳುತ್ತಾರೆ. ಇದು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ, ಊತವನ್ನು ಕಡಿಮೆ ಮಾಡುತ್ತದೆ ಮತ್ತು ಚರ್ಮವನ್ನು ಟೋನ್ ಮಾಡುತ್ತದೆ. ಕೆಲವೊಮ್ಮೆ ಐಸ್ ವಾಟರ್ ಡಿಪ್ ಕೂಡ ಮಾಡುತ್ತಾರೆ.

ಟೋನರ್ ಬಳಸಿದ ನಂತರ, ಆಲಿಯಾ ಸೀರಮ್ ಹಚ್ಚುತ್ತಾರೆ. ಆರೋಗ್ಯಕರ ಮತ್ತು ಹೊಳೆಯುವ ಚರ್ಮವನ್ನು ಪಡೆಯಲು ಇದು ಮುಖ್ಯ. ಇದು ಚರ್ಮವನ್ನು ಪೋಷಿಸುತ್ತದೆ ಮತ್ತು ಅದೇ ಸಮಯದಲ್ಲಿ ಮೈಬಣ್ಣವನ್ನು ಹೊಳೆಯುವಂತೆ ಮಾಡುತ್ತದೆ, ಸೂಕ್ಷ್ಮ ರೇಖೆಗಳನ್ನು ಕಡಿಮೆ ಮಾಡಿ, ಹೈಡ್ರೇಟ್ ಆಗಿರುವಂತೆ ನೋಡಿಕೊಳ್ಳುತ್ತದೆ.

ಈ ಎಲ್ಲಾ ಹಂತಗಳ ನಂತರ, ಆಲಿಯಾ ಲೈಟ್ ಮಾಯಿಶ್ಚರೈಸರ್ ಹಚ್ಚುತ್ತಾರೆ. ಇದು ಚರ್ಮವನ್ನು ಎಣ್ಣೆಯಿಂದ ಮುಕ್ತಗೊಳಿಸಿ, ಮಂಜಿನಂತೆ ಕ್ಲಿಯರ್ ಆಗಿರುವಂತೆ ಮಾಡುತ್ತದೆ. ನಂತರ, ಆಲಿಯಾ ಸನ್‌ಸ್ಕ್ರೀನ್ ಹಚ್ಚುತ್ತಾರೆ. ಇದನ್ನು ಅವರು ಯಾವತ್ತೂ ಮಿಸ್ ಮಾಡೋದಿಲ್ಲ. ಕೊನೆಗೆ ತುಟಿಗೆ ಉತ್ತಮವಾದ ಹೈಡ್ರೇಶನ್ ಉಳ್ಳ ಲಿಪ್ ಬಾಮ್ ಹಚ್ಚುತ್ತಾರೆ.

Source link

Leave a Reply

Your email address will not be published. Required fields are marked *