
‘ಧುರಂಧರ 2’ ಸಿನಿಮಾ (ಧುರಂಧರ 2 ಚಿತ್ರ) ಬಾಕ್ಸ್ ಆಫೀಸ್ ನಲ್ಲಿ ಊಹೆಗೂ ಮೀರಿ ಕಲೆಕ್ಷನ್ ಮಾಡುತ್ತಿದೆ. ಸಿನಿಮಾದ ಒಟ್ಟಾರೆ ಕಲೆಕ್ಷನ್ ವಿಶ್ವಮಟ್ಟದಲ್ಲಿ ಬರೋಬ್ಬರಿ 900 ಕೋಟಿ ರೂಪಾಯಿ ಆಗಿದೆ. ಅದು ಕೂಡ ಕೇವಲ ಆರು ದಿನಗಳಲ್ಲಿ. ಈ ಸಿನಿಮಾ ಅರಬ್ ರಾಷ್ಟ್ರಗಳಲ್ಲಿ ಬ್ಯಾನ್ ಆಗಿದೆ. ಆದಾಗ್ಯೂ ಸಿನಿಮಾದ ಗಳಿಕೆಗೆ ಯಾವುದೇ ತೊಂದರೆ ಆಗಿಲ್ಲ. ಆದರೆ, ಒಂದು ವಿಷಯದಲ್ಲಿ ‘ಧುರಂಧರ 2’ ಸೋತು ಹೋಗಿದೆ ಎಂಬ ಅಭಿಪ್ರಾಯವಿದೆ. ಹಾಗಾದರೆ ಅದು ಯಾವ ವಿಷಯದಲ್ಲಿ? ಆ ಬಗ್ಗೆ ಇಲ್ಲಿದೆ ವಿವರ.
‘ಧುರಂಧರ 2’ ಸಿನಿಮಾನ ಆದಿತ್ಯಧರ್ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾಗೆ ರಣವೀರ್ ಸಿಂಗ್ ಹೀರೋ. ಸಾರಾ ಅರ್ಜುನ್ ಚಿತ್ರದ ನಾಯಕಿ. ‘ಧುರಂಧ’ ಸಿನಿಮಾ ರಿಲೀಸ್ಗೂ ಮೊದಲೇ ಸಾಕಷ್ಟು ನೆಗೆದಿತ್ತು. ಆದರೆ, ಸಿನಿಮಾ ಗೆಲ್ಲುವಲ್ಲಿ ಯಶಸ್ವಿಯಾಯಿತು. ಮೊದಲ ಭಾಗದ ಕಲೆಕ್ಷನ್ 1300 ಕೋಟಿ ರೂಪಾಯಿ. ಈಗ ಸೀಕ್ವೆಲ್ ಆರೇ ದಿನಕ್ಕೆ 900 ಕೋಟಿ ರೂಪಾಯಿ ತಲುಪಿದೆ. ಇನ್ನು ಕೆಲವೇ ದಿನಗಳಲ್ಲಿ ಮೊದಲ ಭಾಗದ ಕಲೆಕ್ಷನ್ ಹಿಂದಿಕ್ಕಲಿದೆ.
‘ಧುರಂಧರ 2’ ಸಿನಿಮಾದ ಭಾರತದ ಗ್ರಾಸ್ ಕಲೆಕ್ಷನ್ 600 ಕೋಟಿ ರೂಪಾಯಿ ದಾಟಿದೆ. ಹಿಂದಿ ಚಿತ್ರವೊಂದು ಈ ಮಟ್ಟದಲ್ಲಿ ಗಳಿಕೆ ಮಾಡುತ್ತಿರುವುದು ಇದೇ ಮೊದಲು. ಇದು ಚಿತ್ರತಂಡದ ಖುಷಿ ಹೆಚ್ಚಿಸಿದೆ. ಸತತ ಸೋಲುಗಳಿಂದ ಕಂಗಾಲಾಗಿದ್ದ ಬಾಲಿವುಡ್ಗೆ ಈ ಸಿನಿಮಾ ಮೂಲಕ ಒಂದು ದೊಡ್ಡ ಯಶಸ್ಸು ಸಿಕ್ಕಿದೆ.
ಇದನ್ನೂ ಓದಿ: ‘ಧುರಂಧರ 2’ ಚಿತ್ರಕ್ಕೆ ಸಂಕಷ್ಟ: ಆ ಒಂದು ದೃಶ್ಯದಿಂದ ಸಿಖ್ ಧರ್ಮದ ಭಾವನೆಗೆ ಧಕ್ಕೆ
ಆದರೆ, ‘ಧುರಂಧರ 2’ ಸಿನಿಮಾ ಒಂದು ವಿಷಯದಲ್ಲಿ ಸೋತಿದೆ. ಅದು ಯಾವ ವಿಷಯ ಅನ್ನುತ್ತೀರಾ? ಸ್ಥಳೀಯ ಭಾಷೆಗಳಲ್ಲಿ ಈ ಸಿನಿಮಾ ಪ್ರದರ್ಶನ ಕಾಣುತ್ತಿಲ್ಲ. ಹೌದು, ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಗೆ ಡಬ್ ಆದ ವರ್ಷಗಳು ಪ್ರಭಾವ ಬೀರಲು ವಿಫಲವಾಗಿದೆ. ಕನ್ನಡ ವರ್ಷನ್ ರಿಲೀಸ್ ನಾನಾಕಾರಣದಿಂದ ಮುಂದಕ್ಕೆ ಹೋಗಿತ್ತು. ಇತ್ತೀಚೆಗಷ್ಟೇ ಸಿನಿಮಾ ರಿಲೀಸ್ ಆಗಿದೆ. ಇದು ಕೂಡ ಹೆಚ್ಚು ಜನರನ್ನು ತಲುಪದೆ ಇರಲು ಕಾರಣ ಆಗಿರಬಹುದು ಎಂದು ಹೇಳಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.