
‘ಧುರಂಧರ 2’ ಸಿನಿಮಾ (ಧುರಂಧರ 2 ಚಿತ್ರ) ಅಬ್ಬರಕ್ಕೆ ಎಲ್ಲರೂ ನಡುಗಿ ಹೋಗಿದ್ದಾರೆ. ಇಡೀ ಬಾಕ್ಸ್ ಆಫೀಸ್ ಶೇಕ್ ಆಗುತ್ತಿದೆ. ಈ ನಾಗಾಲೋಟಕ್ಕೆ ಎಲ್ಲಾ ಸಿನಿಮಾಗಳು ಮಂಕಾಗುತ್ತಿವೆ. ಪವನ್ ಕಲ್ಯಾಣ್ ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಚಿತ್ರವಂತೂ ಮಕಾಡೆ ಮಲಗಿದೆ. ಈ ಚಿತ್ರ ಮಂಗಳವಾರ ಗಳಿಕೆ ಮಾಡಿದ್ದು ಕೆಲವ ಒಂದು ಕೋಟಿ ರೂಪಾಯಿ. ಆದರೆ, ತೆಲುಗು ಭಾಷೆಯಲ್ಲಿ ಡಬ್ ಆಗಿ ರಿಲೀಸ್ ಆದ ‘ಧುರಂಧರ್ 2’ಸಿನಿಮಾ, ಪವನ್ ಚಿತ್ರಕ್ಕಿಂತ ಹೆಚ್ಚು ಕಲೆಕ್ಷನ್ ಮಾಡಿದೆ.
‘ಧುರಂಧರ 2’ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇತ್ತು. ಆ ನಿರೀಕ್ಷೆಯನ್ನೂ ಮೀರಿ ‘ಧುರಂಧರ 2’ ಸಿನಿಮಾ ಗೆಲುವು ಕಂಡಿದೆ. ಈ ಚಿತ್ರದ ಗಳಿಕೆ ಮಂಗಳವಾರ 56 ಕೋಟಿ ರೂಪಾಯಿ ಆಗಿದೆ. ತೆಲುಗು ಭಾಷೆಯಲ್ಲೇ ಚಿತ್ರ ಮೂರು ಕೋಟಿ ರೂಪಾಯಿ ಗಳಿಸಿದೆ. ಆ ಮೂಲಕ ‘ಧುರಂಧರ 2’ ಚಿತ್ರವು ಅನಾಯಾಸವಾಗಿ ‘ಉಸ್ತಾದ್ ಭಗತ್ ಸಿಂಗ್’ ಚಿತ್ರವನ್ನು ಮನಗಂಡಿದೆ. ಪವನ್ ಚಿತ್ರ ಮಂಗಳವಾರ ಒಂದೂವರೆ ಕೋಟಿ ರೂಪಾಯಿ ಗಳಿಸಿದೆ ಎಂದು ವರದಿಯಾಗಿದೆ.
ಪವನ್ ಕಲ್ಯಾಣ್ ಅವರು ರಾಜಕೀಯದಲ್ಲಿ ಬ್ಯೂಸಿ ಇದ್ದಾರೆ. ಈ ಕಾರಣಕ್ಕೆ ಒಪ್ಪಿಕೊಂಡ ಚಿತ್ರಗಳನ್ನು ಮುಗಿಸಬೇಕಾದ ಅನಿವಾರ್ಯತೆಯ ಕಾರಣದಿಂದ ಆದಷ್ಟು ಪ್ರಯತ್ನಿಸಿ ಶೂಟ್ ಮುಗಿಸಿಕೊಟ್ಟರು. ‘ಓಜಿ’, ‘ಹರಿ ಹರ ವೀರ ಮಲ್ಲು’ ಸಿನಿಮಾಗಳು ರಿಲೀಸ್ ಆಗಿ ಸೋತವು. ಈ ಸಾಲಿಗೆ ‘ಉಸ್ತಾದ್ ಭಗತ್ ಸಿಂಗ್’ ಕೂಡ ಸೇರ್ಪಡೆ ಆಗುತ್ತಿದೆ.
ಪವನ್ ಕಲ್ಯಾಣ್ ಗೆ ಟಾಲಿವುಡ್ ನಲ್ಲಿ ಬಹುಬೇಡಿಕೆ ಇದೆ. ಅವರು ಅನೇಕ ಚಿತ್ರಗಳನ್ನು ಮಣಿಸಿದ್ದಾರೆ. ಆದರೆ, ಈಗ ಅವರು ‘ ಧುರಂಧರ 2’ ಚಿತ್ರದ ಎದುರು ಮಂದಿ ಇದ್ದಾರೆ. ಇದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಪವನ್ ಚಿತ್ರಕ್ಕೆ ಸಾಕಷ್ಟು ನೆಗೆಟಿವ್ ವಿಮರ್ಶೆ ಸಿಕ್ಕಿದೆ. ಹೀಗಾಗಿ, ಅವರ ಸಿನಿಮಾ ಮತ್ತೆ ಮೇಲಕ್ಕೆ ಏಳೋದು ಅನುಮಾನ ಎಂದೆನಿಸುತ್ತದೆ.
ಇದನ್ನೂ ಓದಿ: ಆರು ದಿನಕ್ಕೆ 900 ಕೋಟಿ ಗಳಿಸಿದ ‘ಧುರಂಧರ 2’; ಆದರೂ, ಒಂದು ವಿಷಯದಲ್ಲಿ ಚಿತ್ರಕ್ಕೆ ಸೋಲು
‘ಧುರಂಧರ 2’ ಸಿನಿಮಾದಲ್ಲಿ ರಣವೀರ್ ಸಿಂಗ್, ಸಾರಾ ಅರ್ಜುನ್ ಮೊದಲಾದವರು ನಟಿಸಿದ್ದಾರೆ. ಆದಿತ್ಯ ಧಾರ್ ಅವರು ಈ ಚಿತ್ರ ನಿರ್ದೇಶನ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.