Headlines

ಬಂಗಾರಿ ನಿನ್ಗೆ ಪಾಪಣ್ಣ ಅಲ್ಲ ಪಾಪು ನಾನು, ಮಹಿಳಾ ರೌಡಿ ಶೀಟರ್ ಜೊತೆ ಇನ್ಸ್‌ಪೆಕ್ಟರ್ ಕಾಮಪುರಾಣ

ಬಂಗಾರಿ ನಿನ್ಗೆ ಪಾಪಣ್ಣ ಅಲ್ಲ ಪಾಪು ನಾನು, ಮಹಿಳಾ ರೌಡಿ ಶೀಟರ್ ಜೊತೆ ಇನ್ಸ್‌ಪೆಕ್ಟರ್ ಕಾಮಪುರಾಣ

ಬಂಗಾರಿ ನಿನ್ಗೆ ಪಾಪಣ್ಣ ಅಲ್ಲ ಪಾಪು ನಾನು, ಮಹಿಳಾ ರೌಡಿ ಶೀಟರ್ ಜೊತೆ ಇನ್ಸ್‌ಪೆಕ್ಟರ್ ಕಾಮಪುರಾಣ

ಬಂಗಾರಿ ನಿನ್ಗೆ ಪಾಪಣ್ಣ ಅಲ್ಲ ಪಾಪು ನಾನು, ಮಹಿಳಾ ರೌಡಿ ಶೀಟರ್ ಜೊತೆ ಇನ್ಸ್‌ಪೆಕ್ಟರ್ ಕಾಮಪುರಾಣ ಬಹಿರಂಗವಾಗಿದೆ. ಆಡಿಯೋ, ವ್ಯಾಟ್ಸಾಪ್ ಮೆಸೇಜ್‌ಗಳು ಇನ್ಸ್‌ಪೆಕ್ಟರ್ ಪಾಪಣ್ಣನ ಕತೆ ಹೇಳುತ್ತಿದೆ.

ಪೊಲೀಸ್ ಕಾಮಪುರಾಣ ಕತೆಗಳು ಒಂದೊಂದಾಗಿ ಹೊರಬರುತ್ತಿದೆ. ಮೂಡುಬಿದಿರಿ ಇನ್ಸ್‌ಪೆಕ್ಟರ್ ಆಡಿಯೋ ಪ್ರಕರಣ ಕೋಲಾಹಲ ಸೃಷ್ಟಿಸಿದ ಬೆನ್ನಲ್ಲೇ ಮಹಿಳಾ ಶಿಕ್ಷಕಿಯೊಬ್ಬರು ದೂರು ದಾಖಲಿಸಿ ಪ್ರಕರಣ ತೀವ್ರತೆ ಹೆಚ್ಚಾಗಿದೆ. ಇದೀಗ ಬೆಂಗಳೂರಿನ ಕೋಣನಕುಂಟೆ ಇನ್ಸ್‌ಪೆಕ್ಟರ್ ಪಾಪಣ್ಣನ ಪೋಲಿ ಕತೆಗಳು ಬಹಿರಂಗವಾಗಿದೆ.

ಇನ್ಸ್‌ಪೆಕ್ಟರ್ ಪಾಪಣ್ಣ ಅವರದ್ದು ಎನ್ನಲಾದ ಆಡಿಯೋ ವೈರಲ್ ಆಗಿದೆ. ಮಹಿಳಾ ರೌಡಿಶೀಟರ್ ಯಶಸ್ವಿನಿಯನ್ನು ಬಂಗಾರಿ ಚಿನ್ನ ಎಂದು ಕರೆಯುವ ಪಾಪಣ್ಣ, ನನ್ನನ್ನು ಸರ್ ಎಂದು ಕರೆಯಬೇಡ. ನಿನಗೆ ನಾನು ಪಾಪು ಎಂದಿರುವ ಆಡಿಯೋಗಳು ವೈರಲ್ ಆಗಿದೆ. ಯಾಕೆ ಬಂಗಾರಿ ನನ್ನ ಹತ್ರ ಮಾಡಲ್ಲ, ಮನೆಗೆ ಬರ್ಲಾ ಎಂದಿರುವ ಆಡಿಯೋಗಳು ಕೋಲಾಹಲ ಸೃಷ್ಟಿಸಿದೆ.

ಪೋಲಿ ಪಾಪಣ್ಣ ಮಾಡಿರುವ ಮೆಸೇಜ್ ನೋಡಿದರೆ ಯಾವ ರೋಡ್ ರೋಮಿಯೋಗಿಂತ ಕಡಿಮೆ ಇಲ್ಲ. ಲವ್ ಯು, ನಿನ್ನ ಜೊತೆ ಒಂದು ಸಲ **** ಹೀಗೆ ಒಂದಲ್ಲ ಎರಡಲ್ಲ ಹಲವು ಮಸೇಜ್‌ಗಳನ್ನು ಪಾಪಣ್ಣ, ಮಹಿಳಾ ರೌಡಿ ಶೀಟರ್ ಯಶಸ್ವಿನಿಗೆ ಕಳುಹಿಸಿದ್ದಾನೆ. ಎಲ್ಲಾ ಸ್ಕ್ರೀನ್‌ಶಾಟ್ ಬಹಿರಂಗವಾಗಿದೆ.

ಮನೆಯಲ್ಲಿ ಯಾರು ಇಲ್ಲ ಇಲ್ಲೇ ಬಂದು ಬಿಡು ಎಂದು ಹೇಳಿರುವ ಆಡಿಯೋ ಹಾಗೂ ಮೇಸೇಜ್ ಇದೀಗ ಸಾರ್ವಜನಿಕ ವಲಯದಲ್ಲೂ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಮಹಿಳಾ ರೌಡಿ ಶೀಟರ್ ಜೊತೆಗೆ ಈ ರೀತಿ ಮಾತನಾಡಿ ಕಿರುಕುಳ ನೀಡಿದರೆ ಠಾಣೆಗೆ ನ್ಯಾಯ ಕೇಳಿ ಬರುವ ಹೆಣ್ಣುಮಕ್ಕಳಿಗೆ ಅದ್ಯಾವ ಪರಿ ಕಾಡಿರುತ್ತಾನೆ ಎಂದು ಅನುಮಾನಗಳು ವ್ಯಕ್ತವಾಗಿದೆ.

ಇನ್ಸ್‌ಪೆಕ್ಟರ್ ಪಾಪಣ್ಣನ ಈ ರೀತಿಯ ಆಟಗಳು ಇದೇ ಮೊದಲಲ್ಲ. ಲಾಕ್‌ಅಪ್ ಡೆತ್ ಪ್ರಕರಣದ ಆರೋಪವೂ ಇದೇ ಪಾಪಣ್ಣನ ಮೇಲೆ ಕೇಳಿಬಂದಿದೆ. ಶಿಸ್ತು ಉಲ್ಲಂಘಿಸಿದ ಕಾರಣ ವರ್ಗಾವಣೆಗೊಂಡ ಉದಾಹರಣೆಗಳೂ ಇದೆ. ಇದೀಗ ಪೋಲಿ ಆಟದ ಮೂಲಕ ಪಾಪಣ್ಣ ಮತ್ತೆ ಕಣಕದಲ್ಲಿ ರಾರಾಜಿಸುತ್ತಿದ್ದಾರೆ.

ಪಾಪಣ್ಣನ ಕಿರುಕುಳಕ್ಕೆ ಬೇಸತ್ತ ಮಹಿಳಾ ರೌಡಿ ಶೀಟರ್ ದೂರು ನೀಡಿದ್ದಾರೆ. ತನ್ನ ವಿರುದ್ದ ಕೋಣನಕುಂಟೆ ಇನ್ಸ್‌ಪೆಕ್ಟರ್ ಪಾಪಣ್ಣ ನೆಡೆದುಕೊಂಡ ರೀತಿ ವಿರುದ್ದ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಇದೇ ವೇಳೆ ಆಡಿಯೋ, ಮೆಸೇಜ್ ಸ್ಕ್ರೀನ್‌ಶಾಟ್ ಸೇರಿದಂತೆ ಕೆಲ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.

Source link

Leave a Reply

Your email address will not be published. Required fields are marked *