Headlines

tiger in coffee plantation kodagu :ಮಡಿಕೇರಿಯ ಕಾಫಿತೋಟದಲ್ಲಿ ಹುಲಿ ಓಡಾಟ: ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ | Cctv Footage Shows Tiger Roaming In Coffee Plantation Kodagu

tiger in coffee plantation kodagu :ಮಡಿಕೇರಿಯ ಕಾಫಿತೋಟದಲ್ಲಿ ಹುಲಿ ಓಡಾಟ: ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ | Cctv Footage Shows Tiger Roaming In Coffee Plantation Kodagu



tiger in coffee plantation kodagu :ಮಡಿಕೇರಿಯ ಕಾಫಿತೋಟದಲ್ಲಿ ಹುಲಿ ಓಡಾಟ: ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ | Cctv Footage Shows Tiger Roaming In Coffee Plantation Kodagu

tiger in coffee plantation kodagu: ಮಡಿಕೇರಿ ಸಮೀಪದ ಇಬ್ಬನಿವಳವಾಡಿ ಗ್ರಾಮದ ಕಾಫಿತೋಟವೊಂದರಲ್ಲಿ ಹುಲಿಯೊಂದು ಕಾಣಿಸಿಕೊಂಡಿದ್ದು, ಸಿಸಿ ಕ್ಯಾಮರಾದಲ್ಲಿ ಇದರ ದೃಶ್ಯ ಸೆರೆಯಾಗಿದೆ. ಈ ಘಟನೆಯಿಂದಾಗಿ ಸ್ಥಳೀಯ ಗ್ರಾಮಸ್ಥರು ಮತ್ತು ಕಾರ್ಮಿಕರಲ್ಲಿ ತೀವ್ರ ಆತಂಕ ಮನೆಮಾಡಿದೆ.

ಕಾಫಿತೋಟದಲ್ಲಿ ಹುಲಿ ಓಡಾಟ: 

ಕೊಡಗು: ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಿಂದ ಕೆಲವೇ ಕಿಲೋ ಮೀಟರ್ ದೂರದಲ್ಲಿರುವ ಕಾಫಿತೋಟದಲ್ಲಿ ಹುಲಿಯೊಂದು ಓಡಾಡುತ್ತಿರುವ ದೃಶ್ಯ ಕಂಡು ಬಂದಿದ್ದು, ಇದು ಆ ಪ್ರದೇಶದ ಜನರಲ್ಲಿ ಹಾಗೂ ಕಾಫಿತೋಟಕ್ಕೆ ಕೆಲಸಕ್ಕೆ ಹೋಗುವ ಕೂಲಿ ಕಾರ್ಮಿಕರಲ್ಲಿ ಭೀತಿಗೆ ಕಾರಣವಾಗಿದೆ. ಮಡಿಕೇರಿ‌ ನಗರದಿಂದ‌ ಕೇವಲ‌ ಎರಡು ಕಿ ಮೀ ದೂರದಲ್ಲಿರುವ ಇಬ್ಬನಿವಳವಾಡಿ ಗ್ರಾಮದಲ್ಲಿ ಹುಲಿಯೊಂದು ಕಾಣಿಸಿಕೊಂಡಿದೆ. ಗ್ರಾಮದ ಪೊನ್ನಚೆಟ್ಟಿರ ಸಂದೀಪ್‌ ಎಂಬುವರ ತೋಟದಲ್ಲಿ ಹುಲಿ ಕಾಣಿಸಿಕೊಂಡಿದ್ದು, ಹುಲಿ ಓಡಾಡುತ್ತಿರುವ ದೃಶ್ಯ ಕಾಫಿತೋಟದಲ್ಲಿ ಅಳವಡಿಸಲಾದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆಯಿಂದಾಗಿ ಈಗ ಇಬ್ಬನಿವಳವಾಡಿ ಗ್ರಾಮಸ್ಥರಲ್ಲಿ ತೀವ್ರ ಆತಂಕ ಮೂಡಿದೆ.

ಸಿಸಿಟಿವಿಯಲ್ಲಿ ದೃಶ್ಯ ಸೆರೆ:

ಹುಲಿಯೊಂದು ಕಾಫಿತೋಟದಲ್ಲಿ ಓಡಾಡ್ತಿದೆ ಎಂಬ ವಿಚಾರ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಭಾಗದ ಏಳೆಂಟು ಕಿ.ಮಿ ವ್ಯಾಪ್ತಿಯಲ್ಲಿ ಹುಲಿ ಹೋಲುವ ಪ್ರಾಣಿ ಓಡಾಟದ ಮಾಹಿತಿ ಇತ್ತು. ಹುಲಿಯೋ, ಪೆರ್ಪಣವೋ ಎಂಬ ಗೊಂದಲ ಇತ್ತು. (ಪೆರ್ಪಣವೆಂದರೆ ಚಿರತೆಯನ್ನೇ ಹೋಲುವ ಅಪರೂಪದ ವನ್ಯಜೀವಿಯಾಗಿದೆ ಲಿಪರ್ಡ್ ಕ್ಯಾಟ್ ಎಂದೂ ಕೂಡ ಇದನ್ನು ಕರೆಯಲಾಗುತ್ತದೆ.) ಆದರೆ ಈಗ ಅದು ಹುಲಿ ಎಂಬುದು ಖಚಿತವಾಗಿದೆ ಎಂದ ಡಿಎಫ್ಓ ಹೇಳಿದ್ದಾರೆ. 

ಇದನ್ನೂ ಓದಿ: ಇಡಿ ದಾಳಿಗೆ ಅಡ್ಡಿಯಾದ ಮಮತಾ ಬ್ಯಾನರ್ಜಿಗೆ ಸುಪ್ರೀಂಕೋರ್ಟ್ ತರಾಟೆ

ಹುಲಿ ಸೆರೆಗೆ ಸರ್ಕಾರಕ್ಕೆ‌ ಮನವಿ ಮಾಡಲಾಗಿದೆ ಎಂದು ಮಡಿಕೇರಿ ಡಿಸಿಎಫ್‌ ಅಭಿಷೇಕ್ ಮಾಹಿತಿ ನೀಡಿದ್ದು, ಗ್ರಾಮಸ್ಥರು ಎಚ್ಚರಿಕೆಯಿಂದ‌ ಇರುವಂತೆ ಮನವಿ ಮಾಡಿದ್ದಾರೆ. ಹುಲಿ ಕಾಫಿತೋಟದಲ್ಲಿ ಓಡಾಡ್ತಿದೆ ಎಂಬ ವಿಚಾರ ತಿಳಿದ ಶಾಸಕ ಮಂತರ್ ಗೌಡ್ ಕೂಡಲೇ ಕಾರ್ಯಾಚರಣೆ ನಡೆಸುವಂತೆ ಅರಣ್ಯ ಇಲಾಖೆಗೆ ಸೂಚಿಸಿದ್ದಾರೆ.

ಇದನ್ನೂ ಓದಿ: ಇರಾನ್ ತನಗೆ ದುಬಾರಿ ಮೊತ್ತದ ಹರ್ಮುಜ್ ಉಡುಗೊರೆ ನೀಡಿದೆ ಎಂದ ಟ್ರಂಪ್



Source link

Leave a Reply

Your email address will not be published. Required fields are marked *