Headlines

Lecture to Fish seller ಟೀಚಿಂಗ್ ಬಿಟ್ಟು ಮೀನು ಮಾರಟಕ್ಕಿಳಿದ ಪುತ್ತೂರಿನ ಎಕನಾಮಿಕ್ಸ್ ಪ್ರೊಫೆಸರ್,ದುಪ್ಪಟ್ಟು ಆದಾಯ | Teaching To Trading Economics Lecturer Turns Successful Fish Seller In Puttur Karnataka

Lecture to Fish seller ಟೀಚಿಂಗ್ ಬಿಟ್ಟು ಮೀನು ಮಾರಟಕ್ಕಿಳಿದ ಪುತ್ತೂರಿನ ಎಕನಾಮಿಕ್ಸ್ ಪ್ರೊಫೆಸರ್,ದುಪ್ಪಟ್ಟು ಆದಾಯ | Teaching To Trading Economics Lecturer Turns Successful Fish Seller In Puttur Karnataka



Lecture to Fish seller ಟೀಚಿಂಗ್ ಬಿಟ್ಟು ಮೀನು ಮಾರಟಕ್ಕಿಳಿದ ಪುತ್ತೂರಿನ ಎಕನಾಮಿಕ್ಸ್ ಪ್ರೊಫೆಸರ್,ದುಪ್ಪಟ್ಟು ಆದಾಯ | Teaching To Trading Economics Lecturer Turns Successful Fish Seller In Puttur Karnataka

ಟೀಚಿಂಗ್ ಬಿಟ್ಟು ಮೀನು ಮಾರಟಕ್ಕಿಳಿದ ಪುತ್ತೂರಿನ ಎಕನಾಮಿಕ್ಸ್ ಪ್ರೊಫೆಸರ್, ದುಪ್ಪಟ್ಟು ಆದಾಯ, ಟೀಚಿಂಗ್ ಪರೀಕ್ಷೆಗಳಲ್ಲಿ ಪಾಸ್ ಆಗಿ ಉಪನ್ಯಾಸಕಿಯಾಗಿ ವೃತ್ತಿ ಆರಂಭಿಸಿದ ಪ್ರೇಮಾ ಇದೀಗ ಯಶಸ್ವಿ ಮೀನು ಉದ್ಯಮಿಯಾಗಿ ಬೆಳೆದಿದ್ದಾರೆ.

ಪುತ್ತೂರು (ಮಾ.25) ಸಿಇಟಿ, ಟಿಇಟಿ ಸೇರಿ ಉಪನ್ಯಾಸ ಮಾಡಲು ಇರಬೇಕಾದ ಎಲ್ಲಾ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆದು ಪಾಸ್ ಆದ ದಕ್ಷಿಣ ಕನ್ನಡದ ಪುತ್ತೂರಿನ ಪ್ರೇಮಾ ಕುಂದರ್ ಅರ್ಥಶಾಸ್ತ್ರ ಉಪನ್ಯಾಸಕಿಯಾಗಿ ವೃತ್ತಿ ಆರಂಭಿಸಿದ್ದರು. ವಿದ್ಯಾರ್ಥಿಗಳಿಗೆ ಪಾಠ ಮಾಡಿ ಬದುಕು ಕಟ್ಟಿಕೊಳ್ಳುವ ಮಹತ್ತರ ಕನಸಿನೊಂದಿಗೆ ಹೆಜ್ಜೆ ಇಟ್ಟಿದ್ದರು. ಆದರೆ ತನ್ನ ವೃತ್ತಿ ತೃಪ್ತಿ ನೀಡಿದ್ದರೂ ಆದಾಯ ತೃಪ್ತಿಯಾಗರಿಲ್ಲ. ಅವಶ್ಯಕತೆ, ಜವಾಬ್ದಾರಿಗಳ ನಿರ್ವಹಣೆಗೆ ಸ್ಯಾಲರಿ ಸಾಲದಾಯಿತು. ಹೀಗಾಗಿ ಅನಿವಾರ್ಯವಾಗಿ ಉಪನ್ಯಾಸಕ ವೃತ್ತಿಯಿಂದ ಹೊರಬಂದ ಪ್ರೇಮಾ ಕುಂದರ್, ಆಯ್ಕೆ ಮಾಡಿಕೊಂಡಿದ್ದು ಮೀನು ಮಾರಾಟ ಬ್ಯೂಸಿನೆಸ್. ಶಿಸ್ತು, ಶ್ರದ್ಧೆ,ಸತತ ಪ್ರಯತ್ನಗಳ ಮೂಲಕ ಇದೀಗ ಪ್ರೇಮಾ ಕುಂದರ್ ಉದ್ಯಮಿಯಾಗಿ ಬೆಳೆದಿದ್ದಾರೆ. ಉಪನ್ಯಾಸಕ ವೃತ್ತಿಯಲ್ಲಿ ಪಡೆಯುತ್ತಿದ್ದ ಸ್ಯಾಲರಿಗಿಂತ ದುಪ್ಪಟ್ಟು ಆದಾಯವನ್ನು ಪ್ರೇಮಾ ಕುಂದರ್ ಪಡೆಯುತ್ತಿದ್ದಾರೆ. ಪ್ರೇಮಾ ಕುಂದರ್ ಬದುಕಿನ ಪಣಯ ಹಲವರಿಗೆ ಸ್ಪೂರ್ತಿಯಾಗಿದೆ.

ಗಟ್ಟಿ ನಿರ್ಧರ ಮಾಡಿದ್ದ ಪ್ರೇಮಾ ಕುಂದರ್

ಮಾಸ್ಟರ್ ಡಿಗ್ರಿ ಬಳಿ ಉಪನ್ಯಾಸ ವೃತ್ತಿಗೆ ಬೇಕಾದ ಪರೀಕ್ಷೆ ಪಾಸ್ ಮಾಡಿದ ಪ್ರೇಮಾ ಕುಂದರ್ ಕೆಲವೇ ಕೆಲವು ಅಂಕದಲ್ಲಿ ಸರ್ಕಾರಿ ಉಪನ್ಯಾಸಕ ಉದ್ಯೋಗ ಕೈಗೆಟುಕದಾಯಿತು. ಹೀಗಾಗಿ ಅತಿಥಿ ಉಪನ್ಯಾಸಕಿಯಾಗಿ ವೃತ್ತಿ ಆರಂಭಿಸಿದ್ದರು. ಒಂದೆಡೆ ಸರ್ಕಾರಿ ಉದ್ಯೋಗ ಸಿಗಲಿಲ್ಲ ಅನ್ನೋ ಕೊರಗಾದರೆ, ಮತ್ತೊಂದೆಡೆ ಸಿಗುವ ಸಂಬಳ ಯಾವುದಕ್ಕೂ ಸಾಲುತ್ತಿಲ್ಲ ಅನ್ನೋ ಚಿಂತೆ.ಕೊನೆಗೆ ಗಟ್ಟಿ ನಿರ್ಧಾರ ಮಾಡಿ ಉಪನ್ಯಾಸ ವೃತ್ತಿಯನ್ನು ತೊರೆಯಲು ನಿರ್ಧರಿಸಿದ್ದಾರೆ.

ಪತಿಯ ಬೆಂಬಲ

ಉಪನ್ಯಾಸಕ ವೃತ್ತಿ ತೊರೆದ ಪ್ರೇಮಾ ಕುಂದರ್ ಫಿಶ್ ಸ್ಟಾಲ್ ತೆರೆಯಲು ಯೋಜನೆ ರೂಪಿಸಿದ್ದಾಳೆ. ಇದಕ್ಕಾಗಿ ಪತಿಯ ಬಳಿ ಸಹಾಯ ಕೇಳಿದ್ದಾಳೆ. ಪತಿ ಕೂಡ ಪ್ರೇಮಾ ಕುಂದರ್‌ಗೆ ನೆರವು ನೀಡಿದ್ದಾನೆ. ಹೀಗೆ ಸಣ್ಣದಾಗಿ ಮೀನು ಮಾರಾಟ ಆರಂಭಿಸಿದ ಪ್ರೇಮಾ ಕುಂದರ್‌ಗೆ ಮನೆ, ಉದ್ಯಮ ನಿರ್ವಹಣೆ ಭಾರಿ ಸವಾಲಾಗಿ ಪರಿಣಮಿಸಿತ್ತು. ಆದರೆ ಸತತ ಪ್ರಯತ್ನ, ಶಿಸ್ತಿನಿಂದ ಮೀನು ಮಾರಾಟದಲ್ಲಿ ಪ್ರೇಮಾ ಕುಂದರ್ ಯಶಸ್ಸು ಸಾಧಿಸಿದ್ದಾರೆ. ಕರಾವಳಿ ಭಾಗವಾಗಿರುವ ಕಾರಣ ಮೀನು ಲಭ್ಯತೆ ಹಾಗೂ ಬಳಕೆ ಹೆಚ್ಚು. ತಾಜಾ ಮೀನುಗಳನ್ನು ತರಿಸಿ ಮಾರಾಟ ಮಾಡುವ ಮೂಲಕ ಅತೀ ಬೇಗನೆ ಫಿಶ್ ಮಾರಾಟದಲ್ಲಿ ಯಶಸ್ಸು ಸಾಧಿಸಿದ್ದಾರೆ.

ದುಪ್ಪಟ್ಟ ಆದಾಯ ಎಂದ ಪ್ರೇಮಾ ಕುಂದರ್

ಅತಿಥಿ ಉಪನ್ಯಾಸಕಿಯಾಗಿ ತಿಂಗಳ ಸಂಬಳಕ್ಕಿಂತ ಇದೀಗ ಉತ್ತಮ ಆದಾಯ ಸಿಗುತ್ತಿದೆ. ಪ್ರತಿ ದಿನ 1,500 ರೂಪಾಯಿಯಿಂದ 2000 ರೂಪಾಯಿ ಸರಾಸರಿ ಆದಾಯ ಸಿಗುತ್ತಿದೆ. ತಿಂಗಳಲ್ಲಿ ಖರ್ಚು ವೆಚ್ಚಗಳು ಕಳೆದರೂ ಉಳಿತಾಯ ಮಾಡಲು ಸಾಧ್ಯವಾಗುತ್ತಿದೆ ಎಂದಿದ್ದಾರೆ.



Source link

Leave a Reply

Your email address will not be published. Required fields are marked *