Headlines

BJP leader son arrest 30 ಬಾಲಕಿಯರ ಕಾಮತೃಷೆಗೆ ಬಳಸಿದ ವಿಡಿಯೋ ಲೀಕ್ ಬೆನ್ನಲ್ಲೇ ಬಿಜೆಪಿ ನಾಯಕನ ಪುತ್ರ ಅರೆಸ್ಟ್ | Goa Bjp Councillor Son Arrested For Physically Exploiting 30 Minor Girls

BJP leader son arrest 30 ಬಾಲಕಿಯರ ಕಾಮತೃಷೆಗೆ ಬಳಸಿದ ವಿಡಿಯೋ ಲೀಕ್ ಬೆನ್ನಲ್ಲೇ ಬಿಜೆಪಿ ನಾಯಕನ ಪುತ್ರ ಅರೆಸ್ಟ್ | Goa Bjp Councillor Son Arrested For Physically Exploiting 30 Minor Girls



BJP leader son arrest 30 ಬಾಲಕಿಯರ ಕಾಮತೃಷೆಗೆ ಬಳಸಿದ ವಿಡಿಯೋ ಲೀಕ್ ಬೆನ್ನಲ್ಲೇ ಬಿಜೆಪಿ ನಾಯಕನ ಪುತ್ರ ಅರೆಸ್ಟ್ | Goa Bjp Councillor Son Arrested For Physically Exploiting 30 Minor Girls

30 ಬಾಲಕಿಯರ ಕಾಮತೃಷೆಗೆ ಬಳಸಿದ ವಿಡಿಯೋ ಲೀಕ್ ಬೆನ್ನಲ್ಲೇ ಬಿಜೆಪಿ ನಾಯಕನ ಪುತ್ರ ಅರೆಸ್ಟ್ ಆಗಿದ್ದಾನೆ. ಬೆದರಿಸಿ ಅಪ್ರಾಪ್ತರ ಮೇಲೆ ಅತ್ಯಾ**ರ ಎಸಗುತ್ತಿದ್ದ ಈತ ವಿಡಿಯೋ ಮಾಡಿ ಸೊಲ್ಲೆತ್ತದ್ದಂತೆ ಮಾಡಿದ್ದ. ಇದೀಗ ವಿಡಿಯೋ ಲೀಕ್ ಆಗಿ ಕೋಲಾಹಲ ನಡೆದಿದೆ. 

ಗೋವಾ (ಮಾ.25) ಕರ್ನಾಟಕದಲ್ಲಿ ಪ್ರಜ್ವಲ್ ರೇವಣ್ಣ ಪ್ರಕರಣ ಭಾರಿ ಕೋಲಾಹಲ ಸೃಷ್ಟಿಸಿತ್ತು. ಹಲವು ಮಹಿಳೆಯರ ಮೇಲೆ ಅತ್ಯಾ**ರ ಎಸಗಿ ವಿಡಿಯೋ ರೆಕಾರ್ಡ್ ಮಾಡಿದ್ದ ಪ್ರಕರಣ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ಇದೇ ರೀತಿ ಬಿಜೆಪಿ ಮುಖಂಡನೊಬ್ಬನ ಪುತ್ರನ ಪ್ರಕರಣ ಬಯಲಾಗಿದೆ. 30 ಅಪ್ರಾಪ್ತ ಬಾಲಕಿಯರನ್ನು ಬಲವಂತವಾಗಿ ಕಾಮತೃಷೆಗೆ ಬಳಸಿಕೊಂಡಿದ್ದಾನೆ. ಈ ಕೃತ್ಯವನ್ನೇ ಈತನೇ ವಿಡಿಯೋ ಮಾಡಿ ಬಳಿಕ ಬ್ಲಾಕ್‌ಮೇಲ್ ಮಾಡುವ, ಬೆದರಿಸುವ ತಂತ್ರ ಪ್ರಯೋಗಿಸಿ ಕಳೆದ ಮೂರು ವರ್ಷದಿಂದ ರಾಜಾರೋಷವಾಗಿ ತಿರುಗಾಡುತ್ತಿದ್ದ ಕಾಮುಕ ಆರೋಪಿಯನ್ನು ಅರೆಸ್ಟ್ ಮಾಡಿದ ಘಟನೆ ಗೋವಾದಲ್ಲಿ ನಡೆದಿದೆ.

ಬಿಜೆಪಿ ಮುನ್ಸಿಪಲ್ ಕೌನ್ಸಿಲರ್ ಪುತ್ರ ಅರೆಸ್ಟ್

ದಕ್ಷಿಣ ಗೋವಾದ ಬಿಜೆಪಿ ಕೌನ್ಸಿಲರ್ ಸುಶಾಂತ್ ನಾಯಕ್ ಪುತ್ರ 20 ವರ್ಷದ ಸೋಹಮ್ ನಾಯಕ್ ಅರೆಸ್ಟ್ ಆಗಿದ್ದಾನೆ. ಕೆಲ ವಿಡಿಯೋಗಳು ಹೊರಬಂದ ಬೆನ್ನಲ್ಲೇ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಇತ್ತ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಸೋಹಮ್ ನಾಯಕ್‌ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಶೆಯಲ್ಲಿ ಗೆಳೆಯರಿಗೆ ವಿಡಿಯೋ ಫಾರ್ವಡ್ ಮಾಡಿದ್ದ ಕಾಮುಕ

ಗೆಳೆಯರೊಂದಿಗೆ ಪಾರ್ಟಿ, ಸುತ್ತಾಟ , ಅಪ್ರಾಪ್ತ ಬಾಲಕಿಯನ್ನು ಬೆದರಿಸಿ ತನ್ನ ಕಾಮತೃಷೆಗೆ ಬಳಸಿಕೊಳ್ಳುತ್ತಿರುವುದೇ ಈತನ ಹವ್ಯಾಸವಾಗಿತ್ತು. ಕಳೆದ ಮೂರು ವರ್ಷದಿಂದ ಈತ ಇದನ್ನೇ ವೃತ್ತಿಯಾಗಿ ಸ್ವೀಕರಿಸಿದ್ದ. ಕಳೆದ ವಾರ ಮದ್ಯದ ನಶೆಯಲ್ಲಿ ಗೆಳೆಯರಿಗೆ ತನ್ನ ಕೆಲ ವಿಡಿಯೋಗಳನ್ನು ಫಾರ್ವಡ್ ಮಾಡಿದ್ದ. ಹೀಗೆ ಫಾರ್ವಡ್ ಮಾಡಿದ ಬೆನ್ನಲ್ಲೇ ವಿಡಿಯೋಗಳು ವ್ಯಾಟ್ಸಾಪ್ ಮೂಲಕ ಹರಿದಾಡಲು ಆರಂಭಗೊಂಡಿತ್ತು. ಇದು ಸಾರ್ವಜನಿಕ ವಲಯದಲ್ಲಿ ಆತಂಕ ತಂದಿತ್ತು. ಹಲವು ಅಪ್ರಾಪ್ತ ಬಾಲಕಿಯರು ಈತನ ಕಾಮಕ್ಕೆ ಬಲಿಯಾಗಿದ್ದರು. ಸಾರ್ವಜನಿಕ ಆಕ್ರೋಶ ತೀವ್ರಗೊಂಡಿತ್ತು. ಪ್ರತಿಭಟನೆಗಳು ತೀವ್ರಗೊಂಡಿತ್ತು. ಪ್ರಕರಣ ದಾಖಲಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಅನ್ನೋ ಆರೋಪಗಳು ಕೇಳಿಬಂದಿತ್ತು. ಇದೀಗ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

Scroll to load tweet…

25 ರಿಂದ 30 ಬಾಲಕಿಯರ ಮೇಲೆ ಅತ್ಯಾ**ರ

ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಈತನ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ. ಪ್ರಾಥಮಿಕ ತನಿಖೆಯೆಲ್ಲಿ ಸ್ಫೋಟಕ ಮಾಹಿತಿಗಳು ಹೊರಬಂದಿದೆ. 25 ರಿಂದ 30 ಅಪ್ರಾಪ್ತ ಬಾಲಕಿಯರನ್ನು ಬಳಸಿಕೊಂಡಿರುವುದು ಬಹಿರಂಗವಾಗಿದೆ. ಇದೀಗ ಆರೋಪಿ ವಿರುದ್ದ ಪೋಕ್ಸ್ ಕೇಸ್ ದಾಖಲಾಗಿದೆ. ಇತ್ತ ಕಾಂಗ್ರೆಸ್ ಕಠಿಣ ಶಿಕ್ಷೆಗೆ ಆಗ್ರಹಿಸಿದೆ. ಇಷ್ಟೇ ಅಲ್ಲ ಪಾರದರ್ಶಕ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದೆ. 



Source link

Leave a Reply

Your email address will not be published. Required fields are marked *