Headlines

ಸರ್ಕಾರದ ಅವಧಿ ಮುಗಿಯೋ ಮುನ್ನವೇ ವಿಧಾನಸೌಧದಲ್ಲಿ ಫೋಟೋ ಶೂಟ್! ಸಿಎಂ ಬದಲಾವಣೆ? ಸ್ಪೀಕರ್ ಬದಲಾವಣೆ? ಸಂಪುಟ ಪುನರಚನೆ? | Vidhana Soudha Photo Shoot Sparks Speculation Is Karnataka Heading For Political Change Gdp

ಸರ್ಕಾರದ ಅವಧಿ ಮುಗಿಯೋ ಮುನ್ನವೇ ವಿಧಾನಸೌಧದಲ್ಲಿ ಫೋಟೋ ಶೂಟ್! ಸಿಎಂ ಬದಲಾವಣೆ? ಸ್ಪೀಕರ್ ಬದಲಾವಣೆ? ಸಂಪುಟ ಪುನರಚನೆ? | Vidhana Soudha Photo Shoot Sparks Speculation Is Karnataka Heading For Political Change Gdp



ಸರ್ಕಾರದ ಅವಧಿ ಮುಗಿಯೋ ಮುನ್ನವೇ ವಿಧಾನಸೌಧದಲ್ಲಿ ಫೋಟೋ ಶೂಟ್! ಸಿಎಂ ಬದಲಾವಣೆ? ಸ್ಪೀಕರ್ ಬದಲಾವಣೆ? ಸಂಪುಟ ಪುನರಚನೆ? | Vidhana Soudha Photo Shoot Sparks Speculation Is Karnataka Heading For Political Change Gdp

ಸರ್ಕಾರದ ಅವಧಿ ಇನ್ನೂ ಎರಡು ವರ್ಷ ಬಾಕಿ ಇರುವಾಗಲೇ ವಿಧಾನಸೌಧದಲ್ಲಿ ಶಾಸಕರ ಫೋಟೋ ಶೂಟ್ ನಡೆದಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಈ ಅನಿರೀಕ್ಷಿತ ಬೆಳವಣಿಗೆಯು ಸಿಎಂ ಬದಲಾವಣೆ, ಸ್ಪೀಕರ್ ಬದಲಾವಣೆ ಅಥವಾ ಸಂಪುಟ ಪುನರ್‌ರಚನೆಯ ಮುನ್ಸೂಚನೆಯೇ ಎಂಬ ಗೊಂದಲ ಮತ್ತು ಅನುಮಾನಗಳನ್ನು ಶಾಸಕರಲ್ಲಿ ಹುಟ್ಟುಹಾಕಿದೆ.

ವಿಧಾನಸೌಧದಲ್ಲಿ ನಡೆದ ಶಾಸಕರ ಫೋಟೋ ಶೂಟ್ ರಾಜಕೀಯ ವಲಯದಲ್ಲಿ ಕುತೂಹಲ ಮತ್ತು ಗೊಂದಲಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ ಸರ್ಕಾರದ ಅವಧಿ ಮುಕ್ತಾಯದ ಹಂತದಲ್ಲಿ ಅಥವಾ ಕೊನೆಯ ಅಧಿವೇಶನದ ವೇಳೆ ನೆನಪಿಗಾಗಿ ‘ಸೆಂಡ್ ಆಫ್’ ಫೋಟೋ ಶೂಟ್ ನಡೆಸುವ ಸಂಪ್ರದಾಯವಿದೆ. ಆದರೆ ಈ ಬಾರಿ ಸರ್ಕಾರದ ಅವಧಿ ಇನ್ನೂ ಎರಡು ವರ್ಷ ಬಾಕಿ ಇರುವಾಗಲೇ ಫೋಟೋ ಶೂಟ್ ಆಯೋಜನೆ ಮಾಡಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಈ ಅನಿರೀಕ್ಷಿತ ಬೆಳವಣಿಗೆಯಿಂದಾಗಿ ಶಾಸಕರಲ್ಲಿಯೂ ಗೊಂದಲ ಉಂಟಾಗಿದೆ. ವಿಧಾನಸೌಧದ ಪಡಸಾಲೆಗಳಲ್ಲಿ ಕೂಡ ಇದೇ ವಿಚಾರ ಚರ್ಚೆಗೆ ಗ್ರಾಸವಾಗಿದ್ದು, ಪರಸ್ಪರ ಶಾಸಕರು ಕಾರಣಗಳನ್ನು ಊಹಿಸುತ್ತಿದ್ದಾರೆ. ಫೋಟೋ ಶೂಟ್ ಹಿಂದೆ ಏನಾದರೂ ರಾಜಕೀಯ ಸಂದೇಶವಿದೆಯೇ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ.

ಸಿಎಂ ಬದಲಾವಣೆಯ ಮುನ್ಸೂಚನೆಯೇ?

ಕೆಲವರು ಈ ಬೆಳವಣಿಗೆಯನ್ನು ಮುಖ್ಯಮಂತ್ರಿ ಬದಲಾವಣೆಯ ಮುನ್ಸೂಚನೆ ಎಂದು ವ್ಯಾಖ್ಯಾನಿಸುತ್ತಿದ್ದಾರೆ. ಸಿಎಂ ಬದಲಾವಣೆ ಸಂಭವಿಸಿದರೆ, ಸಂಪುಟದಲ್ಲಿ ಹಾಗೂ ವಿವಿಧ ಹುದ್ದೆಗಳಲ್ಲಿ ಮಹತ್ತರ ಬದಲಾವಣೆಗಳು ಸಂಭವಿಸಬಹುದು. ಇದೇ ಕಾರಣಕ್ಕಾಗಿ ಮುಂಚಿತವಾಗಿ ನೆನಪಿಗಾಗಿ ಫೋಟೋ ಶೂಟ್ ನಡೆಸಲಾಗಿದೆಯೇ ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ.

ಸ್ಪೀಕರ್ ಅಥವಾ ಸಂಪುಟ ಪುನರ್‌ರಚನೆ?

ಇನ್ನೂ ಕೆಲವರು ಇದು ಸ್ಪೀಕರ್ ಬದಲಾವಣೆ ಅಥವಾ ಸಂಪುಟ ಪುನರ್‌ರಚನೆಗೆ ಮುನ್ನ ನಡೆಯುವ ಸಿದ್ಧತೆಯಾಗಿರಬಹುದೇ ಎಂಬ ಸಂಶಯ ವ್ಯಕ್ತಪಡಿಸುತ್ತಿದ್ದಾರೆ. ಕೆಲ ಶಾಸಕರು, ಈ ಬಗ್ಗೆ ಸ್ಪೀಕರ್‌ಗೆ ಯಾವುದೇ ಸೂಚನೆ ಸಿಕ್ಕಿದೆಯೇ ಎಂಬುದನ್ನೂ ಪ್ರಶ್ನಿಸುತ್ತಿದ್ದಾರೆ.

ವಿಧಾನಸೌಧದ ಪಡಸಾಲೆಯಲ್ಲಿ ಬಿಸಿಬಿಸಿ ಚರ್ಚೆ

ವಿಧಾನಸೌಧದ ಒಳಗಡೆ, ವಿಶೇಷವಾಗಿ ಪಡಸಾಲೆಗಳಲ್ಲಿ, ಈ ವಿಷಯವೇ ಪ್ರಮುಖ ಚರ್ಚೆಯಾಗಿದ್ದು, ಶಾಸಕರು ಪರಸ್ಪರ ತಮ್ಮದೇ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅಧಿಕೃತವಾಗಿ ಯಾವುದೇ ಸ್ಪಷ್ಟನೆ ಸಿಗದಿರುವುದರಿಂದ ಈ ಎಲ್ಲಾ ಪ್ರಶ್ನೆ ಗೊಂದಲ ಅನುಮಾನಗಳು ಹೆಚ್ಚುತ್ತಿದೆ

ಒಟ್ಟಾರೆ, ಸರ್ಕಾರದ ಅವಧಿ ಇನ್ನೂ ಎರಡು ವರ್ಷ ಇರುವ ಮುನ್ನವೇ ನಡೆದ ಫೋಟೋ ಶೂಟ್ ಹಲವು ರಾಜಕೀಯ ಪ್ರಶ್ನೆಗಳಿಗೆ ಕಾರಣವಾಗಿದೆ. ಸಿಎಂ ಬದಲಾವಣೆ, ಸ್ಪೀಕರ್ ಬದಲಾವಣೆ ಅಥವಾ ಸಂಪುಟ ಪುನರ್‌ರಚನೆ ಯಾವುದೇ ನಿರ್ಧಾರ ಮುಂದೆಯೇ ಇದೆಯೇ ಎಂಬುದು ಸ್ಪಷ್ಟವಾಗಬೇಕಿದೆ. ಆದರೆ ಸದ್ಯಕ್ಕೆ ವಿಧಾನಸೌಧದಲ್ಲಿ ಈ ವಿಚಾರವೇ ಚರ್ಚೆಯ ಕೇಂದ್ರಬಿಂದುವಾಗಿದೆ.



Source link

Leave a Reply

Your email address will not be published. Required fields are marked *