Headlines

ಯುಗಾದಿ ದಿನವೂ, ಶಿವರಾತ್ರಿ ದಿನವೂ ಮಾಂಸ ತಿಂತೀನಿ, ನನ್ನಿಷ್ಟ! ಸಿಎಂ ಸಿದ್ದರಾಮಯ್ಯ ಹೀಗೆಂದಿದ್ದೇಕೆ ನೋಡಿ

ಯುಗಾದಿ ದಿನವೂ, ಶಿವರಾತ್ರಿ ದಿನವೂ ಮಾಂಸ ತಿಂತೀನಿ, ನನ್ನಿಷ್ಟ! ಸಿಎಂ ಸಿದ್ದರಾಮಯ್ಯ ಹೀಗೆಂದಿದ್ದೇಕೆ ನೋಡಿ


ಯುಗಾದಿ ದಿನವೂ, ಶಿವರಾತ್ರಿ ದಿನವೂ ಮಾಂಸ ತಿಂತೀನಿ, ನನ್ನಿಷ್ಟ! ಸಿಎಂ ಸಿದ್ದರಾಮಯ್ಯ ಹೀಗೆಂದಿದ್ದಾರೆ ನೋಡಿ

ಬೆಂಗಳೂರು, ಮಾರ್ಚ್ 25: ಕರ್ನಾಟಕ ಬಜೆಟ್ 2026 ಮಂಡನೆಗೂ ಮುನ್ನ ಸಿಎಂ ಸಿದ್ದರಾಮಯ್ಯ ರಾಹುಕಾಲ ನೋಡಿಕೊಂಡು ಸಮಯ ನಿಗದಿ ಮಾಡಿದ್ದರು ಎಂಬ ಪ್ರತಿಪಕ್ಷ ನಾಯಕರ ಟೀಕೆ ಬುಧವಾರ ವಿಧಾನಸಭೆಯಲ್ಲಿ ಸ್ವಾರಸ್ಯಕರ ಚರ್ಚೆಗೆ ನಾಂದಿಹಾಡಿತು. ಈ ವಿಚಾರವಾಗಿ, ಬಜೆಟ್ ಮೇಲಿನ ಚರ್ಚೆಗೆ ಉತ್ತರಿಸುವ ವೇಳೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಪ್ರಸ್ತಾಪಿಸಿದರು. ಅದಕ್ಕುತ್ತರಿಸಿದ ಸಿದ್ದರಾಮಯ್ಯ, ಅಧಿಕಾರಿಗಳು ಹಾಗೂ ಮನೆಯವರ ಮಾತು ಕೇಳಿ ರಾಹುಕಾಲ ನೋಡಿದ್ದು ನಿಜ. ಆದರೆ, ವೈಯಕ್ತಿಕವಾಗಿ ರಾಹುಕಾಲ, ಗುಳಿಕಕಾಲ ಅಥವಾ ಯಾವುದೇ ರೀತಿಯ ಗ್ರಹಣ ಕಾಲಗಳಲ್ಲಿ ನಂಬಿಕೆಯಿಲ್ಲ ಎಂದು ಹೇಳಿದರು.

ಈ ಬಾರಿ ರಾಹುಕಾಲದಲ್ಲೇ ಬಜೆಟ್ ಮಂಡಿಸಿದ್ದ ಉದಾಹರಣೆಗಳನ್ನೂ ಸಿದ್ದರಾಮಯ್ಯ ಅವರು ಹಿಂದೆ ನೀಡಿದ್ದಾರೆ. ಜೊತೆಗೆ, ‘ಯುಗಾದಿ ದಿನ ಹಾಗೂ ಶಿವರಾತ್ರಿ ದಿನ ಯಾರಾದರೂ ಮಾಂಸ ಸೇವನೆ ಮಾಡುತ್ತಾರಾ? ನಾನು ತಿನ್ನುತ್ತೇನೆ, ನನ್ನಿಷ್ಟ’ ಎಂದರು.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *