
ಮಹೇಶ್ ಬಾಬು ಹಾಗೂ ಎಸ್ ಎಸ್ ರಾಜಮೌಳಿ ಒಟ್ಟಾಗಿ ‘ವಾರಣಾಸಿ’ (ವಾರಣಾಸಿ) ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಚಿತ್ರದ ಬಗ್ಗೆ ಹೆಚ್ಚಿನ ನಿರ್ದೇಶಕರು ಬಿಟ್ಟುಕೊಟ್ಟಿಲ್ಲ. ಈಗ ಹೈದರಾಬಾದ್ ಅಲ್ಲಿ ಅವರು ವಾರಣಾಸಿ ನಗರವನ್ನೇ ಧರೆಗಿಳಿಸಿದ್ದಾರೆ. ಅಲ್ಲಿ ಸಿನಿಮಾದ ಶೂಟ್ ಮಾಡಲಾಗುತ್ತಿದೆ. ತುಂಬಾನೇ ಕಟ್ಟುನಿಟ್ಟಾಗಿ ಸಿನಿಮಾ ಮಾಡಲಾಗುತ್ತಿದೆ. ಕಠಿಣ ನಿಯಮಕ್ಕೆ ಈ ಹಿಂದೆ ರಾಜಮೌಳಿ ಮಾಡಿದ ತಪ್ಪೇ ಕಾರಣ ಎಂದು ಹೇಳಲಾಗುತ್ತಿದೆ.
ರಾಜಮೌಳಿ ಅವರು ಎಲ್ಲಾ ವಿಷಯಗಳನ್ನು ಗುಟ್ಟಾಗಿ ಇಡಲು ಇಷ್ಟಪಡುತ್ತಾರೆ. ಯಾವುದೇ ಘೋಷಣೆಯಲ್ಲಿದ್ದರೂ ಅದನ್ನು ಸರಿಯಾದ ಸಮಯಕ್ಕೆ, ಅದ್ದೂರಿಯಾಗಿ ಮಾಡಬೇಕು ಎಂಬುದು ಅವರ ಉದ್ದೇಶ. ‘ವಾರಣಾಸಿ’ ವಿಷಯದಲ್ಲೂ ಸಹ ಮಾಡಬೇಕು ಎಂದುಕೊಂಡಿದ್ದರು. ಆದರೆ, ಇಲ್ಲ. ಮೊದಲ ಚಿತ್ರೀಕರಣದ ವೇಳೆ ಮಹೇಶ್ ಬಾಬು, ಪೃಥ್ವಿರಾಜ್ ಸುಕುಮಾರ್ ವಿಡಿಯೋಗಳು ಲೀಕ್ ಆದವು. ಆ ಬಳಿಕ ಎಚ್ಚೆತ್ತುಕೊಂಡಿರೋ ಅವರು, ತುಂಬಾನೇ ಸ್ಟ್ರಿಕ್ಟ್ ಆಗಿ ನಡೆದುಕೊಳ್ಳುತ್ತಿದ್ದಾರೆ. ಆದರೂ ಫೋಟೋ ಲೀಕ್ ಆಗಿದೆ.
ಟೀಸರ್ ಲಾಂಚ್ ವೇಳೆ ಅನೇಕ ಅಂತಾರಾಷ್ಟ್ರೀಯ ಪತ್ರಕರ್ತರನ್ನು ಕರೆಸಲಾಯಿತು. ಅವರೆಲ್ಲರಿಗೂ ಸಿನಿಮಾ ಸೆಟ್ ಗೆ ಭೇಟಿ ಕೊಡಿಸಲಾಯಿತು. ಆದರೆ, ಅಲ್ಲಿ ಲೀಕ್ ಆಗದಂತೆ ಕಠಿಣ ಕ್ರಮ ಕೈಗೊಳ್ಳಲಾಗಿತ್ತು. ಈ ಅವಧಿಯಲ್ಲಿ ಯಾವುದೇ ಟೀಸರ್ ಆಗಲೀ, ವಿಡಿಯೋ ಆಗಲಿ ಲೀಕ್ ಆಗಿರಲಿಲ್ಲ. ಈಗ ಸೋಶಿಯಲ್ ಮೀಡಿಯಾದಲ್ಲಿ ‘ವಾರಣಾಸಿ’ ಸೆಟ್ ಫೋಟೋ ಎಂದು ಕೆಲವು ಫೋಟೋಗಳು ಲೀಕ್ ಆಗಿವೆ.
ಇದನ್ನೂ ಓದಿ: ‘ವಾರಣಾಸಿ’ ಸೆಟ್ ಸೇರಲು ರೆಡಿ ಆದ ಸುದೀಪ್; ಯಾವಾಗ, ಎಷ್ಟು ದಿನ?
ಸದ್ಯ ವಾರಣಾಸಿಯ ದೇವಸ್ಥಾನ, ಸೆಟ್ ನ ಮ್ಯಾಪ್ ಎಲ್ಲವೂ ಲೀಕ್ ಆಗಿವೆ. ವಾರಣಾಸಿಯಲ್ಲೇ ಹೋಗಿ ಶೂಟ್ ಮಾಡಬೇಕು ಎಂದರೆ ಅದು ಅಸಾಧ್ಯವಾದ ಮಾತು. ಈ ಕಾರಣದಿಂದ ವಾರಣಾಸಿ ನಗರವನ್ನು ರೀಕ್ರಿಯೇಟ್ ಮಾಡಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.