Bhoot Bangla: ‘ಧುರಂಧರ್’ ನೋಡಿದೋರಿಗೂ ‘ಭೂತ್ ಬಂಗ್ಲಾ’ ಇಷ್ಟ ಆಗುತ್ತೆ: ನಟ ಅಕ್ಷಯ್ ಕುಮಾರ್ ಭರವಸೆ | Akshay Kumar Confident Bhoot Bangla Will Appeal To Dhurandhar Fans Gvd

Bhoot Bangla: ‘ಧುರಂಧರ್’ ನೋಡಿದೋರಿಗೂ ‘ಭೂತ್ ಬಂಗ್ಲಾ’ ಇಷ್ಟ ಆಗುತ್ತೆ: ನಟ ಅಕ್ಷಯ್ ಕುಮಾರ್ ಭರವಸೆ | Akshay Kumar Confident Bhoot Bangla Will Appeal To Dhurandhar Fans Gvd



Bhoot Bangla: ‘ಧುರಂಧರ್’ ನೋಡಿದೋರಿಗೂ ‘ಭೂತ್ ಬಂಗ್ಲಾ’ ಇಷ್ಟ ಆಗುತ್ತೆ: ನಟ ಅಕ್ಷಯ್ ಕುಮಾರ್ ಭರವಸೆ | Akshay Kumar Confident Bhoot Bangla Will Appeal To Dhurandhar Fans Gvd

ಬಾಲಿವುಡ್ ನಟ ಅಕ್ಷಯ್ ಕುಮಾರ್ ತಮ್ಮ ಹೊಸ ಸಿನಿಮಾ ‘ಭೂತ್ ಬಂಗ್ಲಾ’ ಬಗ್ಗೆ ಮಾತನಾಡಿದ್ದಾರೆ. ‘ಧುರಂಧರ್’ ತರಹದ ಸಿನಿಮಾಗಳನ್ನು ಇಷ್ಟಪಡುವ ಪ್ರೇಕ್ಷಕರಿಗೂ ‘ಭೂತ್ ಬಂಗ್ಲಾ’ ಸಿನಿಮಾ ಇಷ್ಟವಾಗಲಿದೆ ಎಂದಿದ್ದಾರೆ.

ನನ್ನ ಹೊಸ ಸಿನಿಮಾ ‘ಭೂತ್ ಬಂಗ್ಲಾ’ ಮಕ್ಕಳು ಮತ್ತು ಕುಟುಂಬಕ್ಕಾಗಿ ಮಾಡಿರುವ ಪಕ್ಕಾ ಎಂಟರ್‌ಟೈನರ್. ‘ಧುರಂಧರ್’ ತರಹದ ಸಿನಿಮಾಗಳು ದೊಡ್ಡವರಿಗಾಗಿಯೇ ಇರಬಹುದು, ಆದರೆ ಬೇರೆ ಬೇರೆ ತರಹದ ಸಿನಿಮಾ ಇಷ್ಟಪಡೋ ಎಲ್ಲರಿಗೂ ‘ಭೂತ್ ಬಂಗ್ಲಾ’ ಕೂಡಾ ಖುಷಿ ಕೊಡುತ್ತೆ ಅಂತ ಅಕ್ಷಯ್ ಕುಮಾರ್ ಹೇಳಿದ್ದಾರೆ.

ಬಾಲಿವುಡ್ ನಟ ಅಕ್ಷಯ್ ಕುಮಾರ್ ತಮ್ಮ ಹೊಸ ಸಿನಿಮಾ ‘ಭೂತ್ ಬಂಗ್ಲಾ’ ಬಗ್ಗೆ ಮಾತನಾಡಿದ್ದಾರೆ. ‘ಧುರಂಧರ್’ ತರಹದ ಸಿನಿಮಾಗಳನ್ನು ಇಷ್ಟಪಡುವ ಪ್ರೇಕ್ಷಕರಿಗೂ ‘ಭೂತ್ ಬಂಗ್ಲಾ’ ಸಿನಿಮಾ ಇಷ್ಟವಾಗಲಿದೆ, ಇದೊಂದು ಪಕ್ಕಾ ಎಂಟರ್‌ಟೈನ್‌ಮೆಂಟ್ ಚಿತ್ರ ಅಂತ ಅವರು ಹೇಳಿದ್ದಾರೆ. ಸಿನಿಮಾದ ಪ್ರೊಮೋಷನ್ ಕಾರ್ಯಕ್ರಮವೊಂದರಲ್ಲಿ ಅಕ್ಷಯ್ ಕುಮಾರ್ ಈ ಬಗ್ಗೆ ಮಾತನಾಡಿದರು.

“‘ಧುರಂಧರ್’ ಒಂದು ಅದ್ಭುತ ಸಿನಿಮಾ, ನಾನೂ ನೋಡಿದ್ದೇನೆ. ಆದರೆ ‘ಭೂತ್ ಬಂಗ್ಲಾ’ ಅದಕ್ಕಿಂತ ವಿಭಿನ್ನ. ‘ಧುರಂಧರ್’ ದೊಡ್ಡವರಿಗಾಗಿ ಮಾಡಿರುವ ಸಿನಿಮಾ. ಆದರೆ ‘ಭೂತ್ ಬಂಗ್ಲಾ’ ಮಕ್ಕಳು ಮತ್ತು ಫ್ಯಾಮಿಲಿ ಆಡಿಯನ್ಸ್‌ಗಾಗಿ ಮಾಡಿದ್ದು. ಈ ಸಿನಿಮಾ ಮಾಡುವಾಗ, ಈಗಿನ ಟ್ರೆಂಡ್ ಏನು ಅಂತ ನಾವು ನೋಡಲಿಲ್ಲ. ಬದಲಿಗೆ, ಕಥೆ ಚೆನ್ನಾಗಿದೆಯಾ ಇಲ್ವಾ ಅಂತಷ್ಟೇ ಗಮನ ಕೊಟ್ಟೆವು. ಅದರ ಪ್ರಕಾರವೇ ಈ ಚಿತ್ರವನ್ನು ನಿರ್ಮಿಸಿದ್ದೇವೆ. ನಾವು ಟ್ರೆಂಡ್ ಬಗ್ಗೆ ತಲೆಕೆಡಿಸಿಕೊಳ್ಳಲೇ ಇಲ್ಲ,” ಅಂತ ಅಕ್ಷಯ್ ಕುಮಾರ್ ವಿವರಿಸಿದ್ದಾರೆ.

“ಧುರಂಧರ್’, ‘ಬಾರ್ಡರ್ 2’ ನಂತಹ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಸಖತ್ ಸದ್ದು ಮಾಡುತ್ತಿವೆ. ‘ಧುರಂಧರ್’ ನೋಡುವ ಪ್ರೇಕ್ಷಕರು ‘ಭೂತ್ ಬಂಗ್ಲಾ’ ಚಿತ್ರವನ್ನೂ ಎಂಜಾಯ್ ಮಾಡಬಹುದು. ನನ್ನ ಪ್ರಕಾರ, ನಮ್ಮ ಸಿನಿಮಾದ ಮಾರ್ಕೆಟಿಂಗ್ ಸಾಧ್ಯತೆ ದೊಡ್ಡದಿದೆ. ಜನರಿಗೆ ಯಾವಾಗಲೂ ಹೊಸತನ ಬೇಕು, ಬೇರೆ ಬೇರೆ ತರಹದ ಕಥೆಗಳನ್ನು ನೋಡಲು ಇಷ್ಟಪಡುತ್ತಾರೆ. ‘ಭೂತ್ ಬಂಗ್ಲಾ’ ವಿಷಯದಲ್ಲಿ ನಮಗಿರುವ ಅತಿದೊಡ್ಡ ಪ್ಲಸ್ ಪಾಯಿಂಟ್ ಇದೇ.

ನೋಡೋಕೆ ಮಜಾ ಕೊಡುತ್ತೆ

ಅಷ್ಟೇ ಅಲ್ಲ, ಇದೊಂದು ಪಕ್ಕಾ ಮನರಂಜನೆಯ ಸಿನಿಮಾ, ನೋಡೋಕೆ ಮಜಾ ಕೊಡುತ್ತೆ. ಜನರು ಎಲ್ಲಾ ರೀತಿಯ ಸಿನಿಮಾಗಳನ್ನು ಆನಂದಿಸುತ್ತಾರೆ,” ಅಂತಾನೂ ಅಕ್ಷಯ್ ಕುಮಾರ್ ಹೇಳಿದ್ದಾರೆ. ಇನ್ನು, ರಣವೀರ್ ಸಿಂಗ್ ನಾಯಕರಾಗಿ ನಟಿಸಿರುವ ‘ಧುರಂಧರ್ 2’ ಚಿತ್ರವನ್ನು ಆದಿತ್ಯ ಧರ್ ನಿರ್ದೇಶಿಸಿದ್ದಾರೆ. ಈ ಚಿತ್ರದ ಮೊದಲ ಭಾಗ ಭರ್ಜರಿ ಯಶಸ್ಸು ಕಂಡಿತ್ತು. ಈಗ ಎರಡನೇ ಭಾಗ ಕೂಡ ಬಾಕ್ಸ್ ಆಫೀಸ್‌ನಲ್ಲಿ ಅದೇ ಯಶಸ್ಸನ್ನು ಮುಂದುವರಿಸಿದೆ.



Source link

Leave a Reply

Your email address will not be published. Required fields are marked *