Headlines

ಗಾಂಧಿ ಪ್ರತಿಮೆ ಏರಿ ಅಸಭ್ಯ ವರ್ತನೆ- ವಿಡಿಯೋ ರೆಕಾರ್ಡ್​: ರಾಜಕೀಯ ತಿರುವು ಪಡೆದ ಘಟನೆ | Incident In Up Where Young Men Behaved Disrespectfully Near Gandhi Statue Suc

ಗಾಂಧಿ ಪ್ರತಿಮೆ ಏರಿ ಅಸಭ್ಯ ವರ್ತನೆ- ವಿಡಿಯೋ ರೆಕಾರ್ಡ್​: ರಾಜಕೀಯ ತಿರುವು ಪಡೆದ ಘಟನೆ | Incident In Up Where Young Men Behaved Disrespectfully Near Gandhi Statue Suc



ಗಾಂಧಿ ಪ್ರತಿಮೆ ಏರಿ ಅಸಭ್ಯ ವರ್ತನೆ- ವಿಡಿಯೋ ರೆಕಾರ್ಡ್​: ರಾಜಕೀಯ ತಿರುವು ಪಡೆದ ಘಟನೆ | Incident In Up Where Young Men Behaved Disrespectfully Near Gandhi Statue Suc

ಉತ್ತರ ಪ್ರದೇಶದ ಬರೇಲಿಯಲ್ಲಿ ಕೆಲವು ಯುವಕರು ಮಹಾತ್ಮ ಗಾಂಧಿಯವರ ಪ್ರತಿಮೆಗೆ ಅಗೌರವ ತೋರಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದು ರಾಜಕೀಯ ತಿರುವು ಪಡೆದುಕೊಂಡು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಗಾಂಧೀಜಿಯನ್ನು ಈ ದೇಶದಲ್ಲಿ ಮಹಾತ್ಮಾ ಎಂದೇ ಸಂಬೋಧಿಸಿ ಗೌರವಿಸಲಾಗುತ್ತದೆ. ಯಾವುದೇ ದೇಶಗಳಿಂದ ಗಣ್ಯರು ಆಗಮಿಸಿದರೂ, ಅವರು ಪ್ರೊಟೋಕಾಲ್​ ಪ್ರಕಾರ ಮೊದಲಿಗೆ ದೆಹಲಿಯ ರಾಜ್​ಘಾಟ್​ಗೆ ತೆರಳಿ ಗಾಂಧಿ ಸಮಾಧಿಗೆ ಪುಷ್ಪನಮನ ಸಲ್ಲಿಸಿಯೇ ಮುಂದಿನ ಕಾರ್ಯಕ್ರಮದಲ್ಲಿ ಭಾಗಿಯಾಗುವುದು ಇದೆ. ಆದರೆ ಈ ರೀತಿ ಪೂಜ್ಯಭಾವನೆಯಿಂದ ಗೌರವಿಸುವ, ಪೂಜಿಸುವ ಗಾಂಧೀಜಿ ಪ್ರತಿಮೆಯನ್ನು ಕೆಲವು ಯುವಕರ ಗುಂಪು ಅಸಭ್ಯವಾಗಿ ನಡೆದುಕೊಂಡಿದ್ದು, ಇದೀಗ ಇದು ರಾಜಕೀಯ ತಿರುವನ್ನೂ ಪಡೆದುಕೊಂಡಿದೆ.

ಉತ್ತರ ಪ್ರದೇಶದಲ್ಲಿ ಘಟನೆ

ಉತ್ತರಪ್ರದೇಶದ ಬರೇಲಿಯಲ್ಲಿ ರಾಂಪುರ ಗಾರ್ಡನ್ ಪ್ರದೇಶದ ಮಹಾತ್ಮ ಗಾಂಧಿಯವರ ಪ್ರತಿಮೆಯ ಬಳಿ ಕೆಲವು ಯುವಕರು ಅಗೌರವದಿಂದ ವರ್ತಿಸಿದ ಆಘಾತಕಾರಿ ಘಟನೆ ಇದಾಗಿದೆ. ಗಾಂಧಿ ಪ್ರತಿಮೆಯನ್ನು ಏರಿರುವ ಈ ಬಾಲಕರು, ಪ್ರತಿಮೆಯ ಕಿವಿ ತುಟಿ ಹೀಗೆ ಅಂಗಾಂಗ ಮುಟ್ಟಿ ವಿಚಿತ್ರವಾಗಿ ವರ್ತಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೇಗವಾಗಿ ಹರಡುತ್ತಿದ್ದು, ಜನರು ಆಕ್ರೋಶಗೊಂಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ನಾಗರಿಕರು ಒತ್ತಾಯಿಸುತ್ತಿದ್ದಾರೆ ಮತ್ತು ಸ್ಥಳೀಯ ಅಧಿಕಾರಿಗಳು ತ್ವರಿತವಾಗಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ.

ರಾಜಕೀಯ ತಿರುವು

ವಿದೇಶಗಳಲ್ಲಿ ಇರುವ ಗಾಂಧಿ ಪ್ರತಿಮೆಯನ್ನು ಕೆಲವರು ಧ್ವಂಸಗೊಳಿಸಿರುವ ಪ್ರಕರಣಗಳು ಹಲವಾರು ಬಾರಿ ನಡೆದಿವೆ. ಆದರೆ ಇದೀಗ ಇಲ್ಲಿಯೇ ಈ ರೀತಿಯ ಅಸಭ್ಯ ರೀತಿಯಲ್ಲಿ ವರ್ತಿಸಿ ಅದರ ವಿಡಿಯೋ ಮಾಡಿಕೊಂಡು ಕೆಟ್ಟದ್ದಾಗಿ ನಗುಬೀರುತ್ತಿರುವ ಯುವಕರ ಗುಂಪು ಇದಾಗಿದೆ. ಇದು ರಾಜಕೀಯ ತಿರುವು ಪಡೆದುಕೊಳ್ಳಲು ಕಾರಣವೂ ಇದೆ. ಅದೇನೆಂದರೆ, ಇಲ್ಲಿರುವ ವಿಡಿಯೋ ನೋಡಿದರೆ ಇದು ಮುಸ್ಲಿಮ್​ ಯುವಕರು ಎನ್ನುವುದು ಸ್ಪಷ್ಟವಾಗಿ ಕಾಣಿಸುತ್ತದೆ.

ಕಾಂಗ್ರೆಸ್​ ನಾಯಕರನ್ನು ಪ್ರಶ್ನಿಸ್ತಿರೋ ನೆಟ್ಟಿಗರು

ತಮ್ಮ ಸಮುದಾಯವನ್ನು ಅತ್ಯಂತ ಗೌರವದಿಂದ ನಡೆಸಿಕೊಂಡು ಬಂದು, ಅವರಿಗಾಗಿ ಸಾಕಷ್ಟು ಪರಿಶ್ರಮ ಪಟ್ಟಿರುವ ಗಾಂಧೀಜಿಯವರಿಗೇ ಅಪಮಾನ ಮಾಡಿರುವುದು ಸರಿಯಲ್ಲ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಈ ಬಗ್ಗೆ ಕಾಂಗ್ರೆಸ್​​ ನಾಯಕರು ಯಾವ ರೀತಿಯ ಕ್ರಮ ತೆಗೆದುಕೊಳ್ಳುತ್ತೀರಿ ಎಂದು ಪ್ರಶ್ನಿಸುತ್ತಿದ್ದಾರೆ. ಮತ್ತೆ ಕೆಲವು ಕಮೆಂಟಿಗರು ತೀರಾ ನೆಗೆಟಿವ್ ಕಮೆಂಟ್ಸ್​ ಕೂಡ ಹಾಕುತ್ತಿದ್ದಾರೆ. ಕಾಂಗ್ರೆಸ್ಸಿಗರ ವೋಟ್​ಬ್ಯಾಂಕ್​ಗಳೇ ಹೀಗೆ ಮಾಡುತ್ತಿವೆ. ಬೇರೆ ಯಾರಾದರೂ ಮಾಡಿದ್ದರೆ ಇಷ್ಟರವರೆಗೆ ಇಡೀ ದೇಶದಲ್ಲಿ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗುತ್ತಿತ್ತು. ಆದರೆ ಈ ವಿಡಿಯೋ ಇಷ್ಟು ವೈರಲ್​ ಆಗಿದ್ದರೂ ಕಣ್ಮುಚ್ಚಿ ಕುಳಿತುಕೊಂಡದ್ದು ಏಕೆ ಎಂದು ಪ್ರಶ್ನಿಸುತ್ತಿದ್ದಾರೆ.



Source link

Leave a Reply

Your email address will not be published. Required fields are marked *