
ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿರುವ ‘ಧುರಂಧರ 2’ (ಧುರಂಧರ 2) ಸಿನಿಮಾ ಬಗ್ಗೆ ಅನೇಕ ಸೆಲೆಬ್ರಿಟಿಗಳು ಮಾತನಾಡಿದ್ದಾರೆ. ರಜನಿಕಾಂತ್, ರಿಷಬ್ ಶೆಟ್ಟಿ ಮುಂತಾದವರು ಹೊಗಳಿದ್ದಾರೆ. ಈಗ ‘ಹ್ಯಾಟ್ರಿಕ್ ಹೀರೋ’ ಶಿವರಾಜ್‌ಕುಮಾರ್ (ಶಿವರಾಜಕುಮಾರ್) ಕೂಡ ಈ ಸಿನಿಮಾ ನೋಡಿ ಫಿದಾ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ವಿಮರ್ಶೆ ಹಂಚಿಕೊಂಡಿದ್ದಾರೆ. ಶಿವಣ್ಣ ಅವರು ಈ ಸಿನಿಮಾವನ್ನು ಬ್ರಿಲಿಯಂಟ್ ಎಂದು ಬಣ್ಣಿಸಿದ್ದಾರೆ. ರಣವೀರ್ ಸಿಂಗ್ (ರಣವೀರ್ ಸಿಂಗ್) ಅವರ ಅಭಿನಯಕ್ಕೆ ಶಿವರಾಜ್‌ಕುಮಾರ್ ಫುಲ್ ಮಾರ್ಕ್ಸ್ ನೀಡಿದ್ದಾರೆ.
‘ಧುರಂಧರ: ದಿ ರಿವೇಂಜ್’ ಸಿನಿಮಾ ಬಹಳ ಚೆನ್ನಾಗಿದೆ. ಈ ಸಿನಿಮಾದಲ್ಲಿನ ಎಲ್ಲಾ ಅಂಶ ಕೂಡ ಇಷ್ಟ ಆಯಿತು. ರಣವೀರ್ ಸಿಂಗ್ ಬ್ರಿಲಿಯಂಟ್. ಹಳೇ ಸಾಂಗ್ ಬಳಸಿಕೊಂಡಿರುವ ಸಂಗೀತ ನಿರ್ದೇಶಕ ಶಾಶ್ವತ್ ಸಚ್‌ದೇವ್ ಅವರ ಕೆಲಸ ಪರಿಣಾಮಕಾರಿಯಾಗಿದೆ’ ಎಂದು ಶಿವರಾಜ್ ಕುಮಾರ್ ಅವರು ತಮ್ಮ ಅನಿಸಿಕೆಯನ್ನು ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
‘ನಿರ್ದೇಶಕ ಆದಿತ್ಯ ಧರ್ ಅವರ ಕೆಲಸಕ್ಕೆ ಗೌರವ ಸಲ್ಲಬೇಕು. ಸೈನಿಕನ ದೇಶಭಕ್ತಿಯೇ ಈ ಸಿನಿಮಾದ ಜೀವಾಳ. ಇಡೀ ಧುರಂಧರ್ 2 ಚಿತ್ರತಂಡಕ್ಕೆ ಅಭಿನಂದನೆಗಳು’ ಎಂದು ಶಿವರಾಜ್ಕುಮಾರ್ ಅವರು ಮೆಚ್ಚುಗೆ ಸೂಚಿಸಿದ್ದಾರೆ. ಈ ಹಿಂದೆ ಅವರು ‘ಧುರಂಧರ’ ಮೊದಲ ಭಾಗವನ್ನು ನೋಡಿ ಕೂಡ ಇದೇ ರೀತಿ ಹೊಗಳಿದ್ದರು.
ದುರಂಧರ: ಸೇಡು ತೀರಾ ಅದ್ಭುತವಾಗಿದೆ! ಅದರ ಪ್ರತಿಯೊಂದನ್ನು ಇಷ್ಟಪಟ್ಟೆ. @ರಣವೀರ್ ಅಧಿಕೃತ ಅದ್ಭುತವಾಗಿದೆ, ಮತ್ತು ಸಂಗೀತದಿಂದ @ಶಾಶ್ವತಾಲಜಿವಿಶೇಷವಾಗಿ ವಿಂಟೇಜ್ ಹಾಡುಗಳ ಬಳಕೆಯು ಶಾಶ್ವತವಾದ ಪರಿಣಾಮವನ್ನು ನೀಡುತ್ತದೆ. ಗೆ ಅಪಾರ ಗೌರವ @AdityaDharFilms ಅವನ ಕನ್ವಿಕ್ಷನ್ ಮತ್ತು ಕ್ರಾಫ್ಟ್ಗಾಗಿ. ಸೈನಿಕನ ಉದ್ದ…
— ಡಾ.ಶಿವರಾಜ್ಕುಮಾರ್ (@NimmaShivanna) ಮಾರ್ಚ್ 25, 2026
‘ಧುರಂಧರ 2’ ಸಿನಿಮಾದಲ್ಲಿ ರಣವೀರ್ ಸಿಂಗ್ ಜೊತೆ ಸಾರಾ ಅರ್ಜುನ್, ಸಂಜಯ್ ದತ್, ಅರ್ಜುನ್ ರಾಮ್‌ಪಾಲ್, ಕಬೀರ್ ಬೇಡಿ, ಆರ್. ಮಾಧವನ್ ಮುಂತಾದವರು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಬಾಕ್ಸ್ ಆಫೀಸ್ ನಲ್ಲಿ ಈ ಸಿನಿಮಾ ಭರ್ಜರಿ ಕಮಾಯಿ ಮಾಡುತ್ತಿದೆ. ಈ ಮೊದಲಿನ ಎಲ್ಲ ದಾಖಲೆಗಳನ್ನು ಅಳಿಸಿ ಹಾಕುತ್ತಿದೆ.
ಇದನ್ನೂ ಓದಿ: ‘ಧುರಂಧರ 2’ ಚಿತ್ರಕ್ಕೆ ಸಂಕಷ್ಟ: ಆ ಒಂದು ದೃಶ್ಯದಿಂದ ಸಿಖ್ ಧರ್ಮದ ಭಾವನೆಗೆ ಧಕ್ಕೆ
ಈ ಮೊದಲು ’45’ ಸಿನಿಮಾದ ಮುಂಬೈನಲ್ಲಿ ನಡೆದಿತ್ತು. ಅದರಲ್ಲಿ ಭಾಗವಹಿಸಿದ್ದ ಶಿವರಾಜ್‌ಕುಮಾರ್ ಅವರು ‘ರಂಧ್ರ’ ಸಿನಿಮಾದ ಬಗ್ಗೆ ಮಾತನಾಡಿದ್ದರು. ‘ರಣವೀರ್ ಸಿಂಗ್ ಅವರು ಮಾಡಿದ ಪಾತ್ರ ಸುಲಭವಲ್ಲ. ಅದನ್ನು ಅವರು ಬಹಳ ಬ್ರಿಲಿಯಂಟ್ ಆಗಿ ನಿಭಾಯಿಸಿದ್ದಾರೆ’ ಎಂದು ಶಿವರಾಜ್ ಕುಮಾರ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.