Headlines

ಐಪಿಎಲ್ ಪ್ರೇಮಿಗಳಿಗೆ ನಮ್ಮ ಮೆಟ್ರೋ ಸಿಹಿ ಸುದ್ದಿ: ಪಂದ್ಯದ ದಿನ ಮುಂಜಾನೆ 2 ಗಂಟೆಯವರೆಗೆ ರೈಲು ಸಂಚಾರ | Bengaluru Namma Metro Extension For Ipl 2026 Match Timings And Parking Details Sat

ಐಪಿಎಲ್ ಪ್ರೇಮಿಗಳಿಗೆ ನಮ್ಮ ಮೆಟ್ರೋ ಸಿಹಿ ಸುದ್ದಿ: ಪಂದ್ಯದ ದಿನ ಮುಂಜಾನೆ 2 ಗಂಟೆಯವರೆಗೆ ರೈಲು ಸಂಚಾರ | Bengaluru Namma Metro Extension For Ipl 2026 Match Timings And Parking Details Sat



ಐಪಿಎಲ್ ಪ್ರೇಮಿಗಳಿಗೆ ನಮ್ಮ ಮೆಟ್ರೋ ಸಿಹಿ ಸುದ್ದಿ: ಪಂದ್ಯದ ದಿನ ಮುಂಜಾನೆ 2 ಗಂಟೆಯವರೆಗೆ ರೈಲು ಸಂಚಾರ | Bengaluru Namma Metro Extension For Ipl 2026 Match Timings And Parking Details Sat

ಬೆಂಗಳೂರಿನಲ್ಲಿ ನಡೆಯಲಿರುವ ಐಪಿಎಲ್ 2026 ಪಂದ್ಯದ ಪ್ರಯುಕ್ತ, ಕ್ರಿಕೆಟ್ ಪ್ರೇಮಿಗಳ ಅನುಕೂಲಕ್ಕಾಗಿ ಬಿಎಂಆರ್‌ಸಿಎಲ್ ಮೆಟ್ರೋ ರೈಲು ಸಂಚಾರದ ಅವಧಿಯನ್ನು ತಡರಾತ್ರಿಯವರೆಗೆ ವಿಸ್ತರಿಸಿದೆ. ಪಂದ್ಯದ ಟಿಕೆಟ್‌ನಲ್ಲಿಯೇ ಕ್ಯೂಆರ್ ಕೋಡ್ ಪ್ರಯಾಣ ಸೌಲಭ್ಯ ವಿಶೇಷ ಪಾರ್ಕಿಂಗ್ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದೆ.

ಬೆಂಗಳೂರು (ಮಾ.25): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಐಪಿಎಲ್ 2026ರ ಕ್ರಿಕೆಟ್ ಹಬ್ಬ ಆರಂಭವಾಗುತ್ತಿದ್ದು, ಪಂದ್ಯ ವೀಕ್ಷಿಸಿ ತಡರಾತ್ರಿ ಮನೆಗೆ ಮರಳುವ ಕ್ರಿಕೆಟ್ ಪ್ರೇಮಿಗಳಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಭರ್ಜರಿ ಕೊಡುಗೆ ನೀಡಿದೆ. ಮಾರ್ಚ್ 28, 2026ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದ ಪ್ರಯುಕ್ತ ಮೆಟ್ರೋ ರೈಲು ಸಂಚಾರದ ಅವಧಿಯನ್ನು ವಿಸ್ತರಿಸಲಾಗಿದ್ದು, ವಿಶೇಷ ಪಾರ್ಕಿಂಗ್ ವ್ಯವಸ್ಥೆಯನ್ನು ಕೂಡ ಕಲ್ಪಿಸಲಾಗಿದೆ.

ಕೊನೆಯ ರೈಲು ಯಾವಾಗ? (ವೇಳಾಪಟ್ಟಿ):

ಪಂದ್ಯ ಮುಗಿಯುವುದು ತಡವಾಗುವುದರಿಂದ ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಆರ್‌ಸಿಎಲ್ ತನ್ನ ಸೇವೆಯನ್ನು ಮುಂಜಾನೆ 2:00 ಗಂಟೆಯವರೆಗೆ ವಿಸ್ತರಿಸಿದೆ. ವಿವಿಧ ನಿಲ್ದಾಣಗಳಿಂದ ಹೊರಡುವ ಕೊನೆಯ ರೈಲುಗಳ ವಿವರ ಇಲ್ಲಿದೆ:

ವೈಟ್‌ಫೀಲ್ಡ್ (ಕಾಡುಗೋಡಿ): ರಾತ್ರಿ 12:30 ಗಂಟೆ.

ಚೆಲ್ಲಘಟ್ಟ: ರಾತ್ರಿ 12:45 ಗಂಟೆ.

ರೇಷ್ಮೆ ಸಂಸ್ಥೆ ಹಾಗೂ ಮಾದಾವರ: ರಾತ್ರಿ 12:45 ಗಂಟೆ.

ಬೊಮ್ಮಸಂದ್ರ: ರಾತ್ರಿ 1:00 ಗಂಟೆ.

ಆರ್.ವಿ. ರಸ್ತೆ: ಮುಂಜಾನೆ 2:00 ಗಂಟೆ.

ನಾಡಪ್ರಭು ಕೆಂಪೇಗೌಡ ನಿಲ್ದಾಣ (ಮಜೆಸ್ಟಿಕ್): ಇಲ್ಲಿಂದ ನಾಲ್ಕೂ ದಿಕ್ಕುಗಳಿಗೆ ಮುಂಜಾನೆ 1:30ಕ್ಕೆ ಕೊನೆಯ ರೈಲುಗಳು ಹೊರಡಲಿವೆ.

ಟಿಕೆಟ್ ಕಿರಿಕಿರಿ ಇರುವುದಿಲ್ಲ:

ಮೆಟ್ರೋ ನಿಲ್ದಾಣಗಳಲ್ಲಿ ಜನಸಂದಣಿ ತಪ್ಪಿಸಲು ಬಿಎಂಆರ್‌ಸಿಎಲ್ ವಿನೂತನ ಕ್ರಮ ಕೈಗೊಂಡಿದೆ. ನಿಮ್ಮ ಐಪಿಎಲ್ ಪಂದ್ಯದ ಟಿಕೆಟ್‌ನ ಮೇಲೆಯೇ ಮೆಟ್ರೋ ಕ್ಯೂಆರ್ ಕೋಡ್ (QR Code) ಇರಲಿದೆ. ಇದು ‘ಟು-ವೇ ಟ್ರಾವೆಲ್’ (ಬರುವ ಮತ್ತು ಹೋಗುವ ಪ್ರಯಾಣ) ಸೌಲಭ್ಯವನ್ನು ಹೊಂದಿರುತ್ತದೆ. ಹೀಗಾಗಿ ಪಂದ್ಯ ವೀಕ್ಷಿಸಲು ಬರುವವರು ಪ್ರತ್ಯೇಕವಾಗಿ ಮೆಟ್ರೋ ಟಿಕೆಟ್ ಅಥವಾ ಟೋಕನ್ ಪಡೆಯಲು ಸರದಿಯಲ್ಲಿ ನಿಲ್ಲುವ ಅವಶ್ಯಕತೆಯಿಲ್ಲ.

ಯಾವ ನಿಲ್ದಾಣ ಸುಲಭ?:

ಕ್ರೀಡಾಂಗಣದ ಕಬ್ಬನ್ ರಸ್ತೆ ಭಾಗದ ಗೇಟ್‌ಗಳನ್ನು ಬಳಸುವವರು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣವನ್ನು ಮತ್ತು ಲಿಂಕ್ ರಸ್ತೆ ಭಾಗದ ಗೇಟ್‌ಗಳನ್ನು ಬಳಸುವವರು ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣವನ್ನು ಬಳಸುವಂತೆ ಸೂಚಿಸಲಾಗಿದೆ.

ವಿಶೇಷ ಪಾರ್ಕಿಂಗ್ ದರ:

ನಗರದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಬಿಎಂಆರ್‌ಸಿಎಲ್ ವಿವಿಧ ಮೆಟ್ರೋ ನಿಲ್ದಾಣಗಳಲ್ಲಿ ಹೆಚ್ಚಿನ ಪಾರ್ಕಿಂಗ್ ಸೌಲಭ್ಯ ನೀಡಿದೆ. ಪಂದ್ಯದ ದಿನದಂದು ದ್ವಿಚಕ್ರ ವಾಹನಗಳಿಗೆ ಕೇವಲ 30 ರೂ. ಮತ್ತು ಕಾರುಗಳಿಗೆ 60 ರೂ. ನಿಗದಿತ ದರ ಇರಲಿದೆ. ಇದು ದಿನದ ಮೆಟ್ರೋ ಸೇವೆ ಮುಕ್ತಾಯವಾಗುವವರೆಗೆ ಮಾನ್ಯವಾಗಿರುತ್ತದೆ. ಪ್ರೇಕ್ಷಕರು ತಮ್ಮ ವಾಹನಗಳನ್ನು ಮೆಟ್ರೋ ನಿಲ್ದಾಣದಲ್ಲೇ ಪಾರ್ಕ್ ಮಾಡಿ ಮೆಟ್ರೋ ಮೂಲಕ ಸ್ಟೇಡಿಯಂಗೆ ಬರುವುದರಿಂದ ನಗರದ ಕೇಂದ್ರ ಭಾಗದಲ್ಲಿ ಟ್ರಾಫಿಕ್ ಸಮಸ್ಯೆ ತಪ್ಪಿಸಬಹುದಾಗಿದೆ.

ಸುರಕ್ಷತೆ ಮತ್ತು ಸುಗಮ ಸಂಚಾರಕ್ಕಾಗಿ ಪ್ರಯಾಣಿಕರು ಪೊಲೀಸ್ ಮತ್ತು ಮೆಟ್ರೋ ಸಿಬ್ಬಂದಿಯೊಂದಿಗೆ ಸಹಕರಿಸಲು ಬಿಎಂಆರ್‌ಸಿಎಲ್ ವಿನಂತಿಸಿದೆ.



Source link

Leave a Reply

Your email address will not be published. Required fields are marked *