Headlines

Chiranjeevi ಬೆಂಬಲದೊಂದಿಗೆ ಸೋಶಿಯಲ್ ಮೀಡಿಯಾಗೆ ಪವನ್ ಪತ್ನಿ ಎಂಟ್ರಿ: 1800 ಕೋಟಿ ಆಸ್ತಿ ಬಿಟ್ಟು ಬಂದಿದ್ದೇಕೆ? | Pawan Kalyan Wife Anna Lezhneva Makes Social Media Debut Gvd

Chiranjeevi ಬೆಂಬಲದೊಂದಿಗೆ ಸೋಶಿಯಲ್ ಮೀಡಿಯಾಗೆ ಪವನ್ ಪತ್ನಿ ಎಂಟ್ರಿ: 1800 ಕೋಟಿ ಆಸ್ತಿ ಬಿಟ್ಟು ಬಂದಿದ್ದೇಕೆ? | Pawan Kalyan Wife Anna Lezhneva Makes Social Media Debut Gvd



Chiranjeevi ಬೆಂಬಲದೊಂದಿಗೆ ಸೋಶಿಯಲ್ ಮೀಡಿಯಾಗೆ ಪವನ್ ಪತ್ನಿ ಎಂಟ್ರಿ: 1800 ಕೋಟಿ ಆಸ್ತಿ ಬಿಟ್ಟು ಬಂದಿದ್ದೇಕೆ? | Pawan Kalyan Wife Anna Lezhneva Makes Social Media Debut Gvd

ಪವನ್ ಕಲ್ಯಾಣ್ ಅವರ ಪತ್ನಿ ಅನ್ನಾ ಕೊನಿದೆಲಾ ಸೋಶಿಯಲ್ ಮೀಡಿಯಾಗೆ ಎಂಟ್ರಿ ಕೊಟ್ಟಿದ್ದಾರೆ. ತಮ್ಮ ಮೊದಲ ಪೋಸ್ಟ್‌ನಲ್ಲಿ ಅವರು ಚಿರಂಜೀವಿ ಬಗ್ಗೆ ಪ್ರಸ್ತಾಪಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ಜನಸೇನಾ ಮುಖ್ಯಸ್ಥ ಹಾಗೂ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಪತ್ನಿ ಅನ್ನಾ ಲೆಜ್ನೆವಾ ಇನ್‌ಸ್ಟಾಗ್ರಾಮ್‌ಗೆ ಎಂಟ್ರಿ ಕೊಟ್ಟಿದ್ದಾರೆ. ‘ಅನ್ನಾ ಕೊನಿದೆಲಾ’ ಹೆಸರಿನಲ್ಲಿ ಖಾತೆ ತೆರೆದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡಿಂಗ್ ಆಗಿದ್ದಾರೆ. ಅವರ ಮೊದಲ ಪೋಸ್ಟ್ ವೈರಲ್ ಆಗಿದೆ.

ಅನ್ನಾ ಕೊನಿದೆಲಾ ತಮ್ಮ ಪತಿ ಪವನ್ ಕಲ್ಯಾಣ್ ಜೊತೆಗಿನ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ‘ಬಹಳ ದಿನಗಳಿಂದ ಕಾಯುತ್ತಿದ್ದೆ, ಇದು ಸರಿಯಾದ ಸಮಯ ಎನಿಸಿತು. ಚಿರಂಜೀವಿ ಅವರ ಆಶೀರ್ವಾದ ಮತ್ತು ಪವನ್ ಕಲ್ಯಾಣ್ ಅವರ ಬೆಂಬಲದೊಂದಿಗೆ ಈ ಹೊಸ ಪ್ರಯಾಣ ಆರಂಭಿಸುತ್ತಿದ್ದೇನೆ’ ಎಂದು ಬರೆದುಕೊಂಡಿದ್ದಾರೆ. ಪವನ್ ಜೊತೆ ನಗು ಚೆಲ್ಲುತ್ತಿರುವ ಅನ್ನಾ ಅವರ ಫೋಟೋ ಗಮನ ಸೆಳೆಯುತ್ತಿದೆ.

ಪವನ್ ಕಲ್ಯಾಣ್ ತಮ್ಮ ಪತ್ನಿಯನ್ನು ಸ್ವಾಗತಿಸಿ ಪೋಸ್ಟ್ ಮಾಡಿದ್ದಾರೆ. ಅದೇ ರೀತಿ, ಮೆಗಾಸ್ಟಾರ್ ಚಿರಂಜೀವಿ ಕೂಡ ಅನ್ನಾ ಕೊನಿದೆಲಾ ಅವರಿಗೆ ವೆಲ್‌ಕಮ್ ಹೇಳಿದ್ದಾರೆ. ಅನ್ನಾ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗುತ್ತಿದ್ದಂತೆ, ಅವರ ಕುರಿತಾದ ಹಲವು ಆಸಕ್ತಿಕರ ವಿಷಯಗಳು ವೈರಲ್ ಆಗುತ್ತಿವೆ.

ಅನ್ನಾ ಲೆಜ್ನೆವಾ ರಷ್ಯಾ ಮೂಲದ ಮಾಡೆಲ್. ಸಿನಿಮಾಗಳಲ್ಲಿ ಅವಕಾಶ ಹುಡುಕುತ್ತಾ ಭಾರತಕ್ಕೆ ಬಂದರು. ಈ ವೇಳೆ ‘ತೀನ್ ಮಾರ್’ ಸಿನಿಮಾದಲ್ಲಿ ಪವನ್ ಕಲ್ಯಾಣ್ ಜೊತೆ ನಟಿಸಿದರು. ರೇಣು ದೇಸಾಯಿ ಅವರಿಂದ ಬೇರ್ಪಟ್ಟ ನಂತರ, ಪವನ್ ಕಲ್ಯಾಣ್ 2013ರಲ್ಲಿ ಅನ್ನಾ ಲೆಜ್ನೆವಾ ಅವರನ್ನು ವಿವಾಹವಾದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

ಎಷ್ಟು ಸತ್ಯಾಂಶವಿದೆ

ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವರದಿಗಳ ಪ್ರಕಾರ, ಅನ್ನಾ ಲೆಜ್ನೆವಾಗೆ ರಷ್ಯಾ ಮತ್ತು ಸಿಂಗಾಪುರದಂತಹ ದೇಶಗಳಲ್ಲಿ 1800 ಕೋಟಿ ಮೌಲ್ಯದ ಆಸ್ತಿ ಇದೆ ಎಂದು ಹೇಳಲಾಗುತ್ತಿದೆ. ಸಿಂಗಾಪುರದಲ್ಲಿ ಅವರಿಗೆ ಹೋಟೆಲ್ ವ್ಯವಹಾರವಿದೆ ಎಂಬ ವದಂತಿಗಳಿವೆ. ಆದರೆ, ಇದರಲ್ಲಿ ಎಷ್ಟು ಸತ್ಯಾಂಶವಿದೆ ಎಂಬುದು ತಿಳಿದಿಲ್ಲ. ಇಷ್ಟೊಂದು ಆಸ್ತಿ ಇದ್ದರೂ ಅನ್ನಾ ಭಾರತಕ್ಕೆ ಏಕೆ ಬಂದರು? ಸಿನಿಮಾ ಅವಕಾಶಕ್ಕಾಗಿಯೇ? ಎಂದು ನೆಟ್ಟಿಗರು ಚರ್ಚಿಸುತ್ತಿದ್ದಾರೆ.



Source link

Leave a Reply

Your email address will not be published. Required fields are marked *