
ಬೆಂಗಳೂರು, (ಮಾರ್ಚ್ 25): ಕರ್ನಾಟಕ ವಿಧಾನ ಪರಿಷತ್ (ಕರ್ನಾಟಕ ವಿಧಾನ ಪರಿಷತ್ತು) ಕಲಾಪದ ವೇಳೆ ಸಭಾಪತಿ ಬಸವರಾಜ ಹೊರಟ್ಟಿ ಅವರು ವಿರಮಿಸಿದ್ದ ವೇಳೆ, ಬಿಜೆಪಿಯ ಶಾಂತರಾಮ ಸಿದ್ದಿಯವರಿಗೆ (ಶಾಂತಾರಾಮ ಸಿದ್ದಿ) ಕೆಲಕಾಲ ಕಲಾಪ ನಡೆಸುವ ಅವಕಾಶ ದೊರಕಿದೆ. ಹಾಗೆಂದು ಅವರು ಶಾಶ್ವತವಾಗಿ ಆ ಪೀಠ ಅಲಂಕರಿಸಿಲ್ಲ. ವಿಧಾನ ಪರಿಷತ್ ಕಲಾಪದ ವೇಳೆ ಪರಿಷತ್ ಸಭಾಪತಿ ವಿರಮಿಸುವ ವೇಳೆ, ಸದನದಲ್ಲಿರುವ ಹಿರಿಯ ಸದಸ್ಯರಿಗೆ ಕೆಲವು ಬಾರಿ ಕಲಾಪ ನಡೆಸಲು ಅವಕಾಶವಿದೆ. ಅದರಂತೆ ಇಂದು (ಮಾರ್ಚ್ 25) ವಿಧಾನ ಪರಿಷತ್ ಕಲಾಪದ ವೇಳೆ ಸಭಾಪತಿ ಬಸವರಾಜ ಹೊರಟ್ಟಿ ಅವರು ವಿರಮಿಸಿದ್ದ ವೇಳೆ ಶಾಂತರಾಮ ಸಿದ್ದಿಯವರಿಗೆ ಅವಕಾಶ ಸಿಕ್ಕಿದ್ದು, ಅದನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಇದರೊಂದಿಗೆ ಸಿದ್ದಿ ಸಮುದಾಯದ ರಾಜಕಾರಣಿಯೊಬ್ಬರು ಪೀಠದಲ್ಲಿ ಆಸೀನರಾಗಿರುವುದು ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಇದೆ.