Headlines

ತಾನೇ ನಟಸಿದ ‘ದುರಂಧರ್-2’ ಸಿನಿಮಾ ನೋಡಲೂ ಕಾಸಿಲ್ಲ; ಸಹನಟ ಬದ್ರುಲ್ ಇಸ್ಲಾಂ ಅಳಲು ನೀವೇ ಕೇಳಿ! | Dhurandhar 2 Box Office Collection And Side Roll Actor Badrul Islam Auto Driver Struggle Sat

ತಾನೇ ನಟಸಿದ ‘ದುರಂಧರ್-2’ ಸಿನಿಮಾ ನೋಡಲೂ ಕಾಸಿಲ್ಲ; ಸಹನಟ ಬದ್ರುಲ್ ಇಸ್ಲಾಂ ಅಳಲು ನೀವೇ ಕೇಳಿ! | Dhurandhar 2 Box Office Collection And Side Roll Actor Badrul Islam Auto Driver Struggle Sat



ತಾನೇ ನಟಸಿದ ‘ದುರಂಧರ್-2’ ಸಿನಿಮಾ ನೋಡಲೂ ಕಾಸಿಲ್ಲ; ಸಹನಟ ಬದ್ರುಲ್ ಇಸ್ಲಾಂ ಅಳಲು ನೀವೇ ಕೇಳಿ! | Dhurandhar 2 Box Office Collection And Side Roll Actor Badrul Islam Auto Driver Struggle Sat

ಬ್ಲಾಕ್‌ಬಸ್ಟರ್ ‘ಧುರಂಧರ್ 2’ ಚಿತ್ರದಲ್ಲಿ ಪಾತ್ರ ಮಾಡಿದ್ದ ಆಟೋ ಚಾಲಕ, ದುಬಾರಿ ಟಿಕೆಟ್ ದರದಿಂದಾಗಿ ತನ್ನ ಕುಟುಂಬದ ಜೊತೆ ಸಿನಿಮಾ ನೋಡಲು ಸಾಧ್ಯವಾಗುತ್ತಿಲ್ಲ. ಐದು ಜನರ ಟಿಕೆಟ್‌ಗೆ 2500 ರೂ. ಆಗುತ್ತೆ, ಅದು ನನ್ನ ತಿಂಗಳ ಸಂಪಾದನೆ ಇದ್ದಂತೆ ಎಂದು ನಟ ಬದ್ರುಲ್ ಇಸ್ಲಾಂ ಅಳಲು ತೋಡಿಕೊಂಡಿದ್ದಾರೆ.

ಬಾಲಿವುಡ್‌ನ ಇತ್ತೀಚಿನ ಸೆನ್ಸೇಷನ್ ‘ಧುರಂಧರ್ 2’ ಬಾಕ್ಸ್‌ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿದೆ. ರಣವೀರ್ ಸಿಂಗ್ ನಟನೆಯ ಈ ಸ್ಪೈ ಆ್ಯಕ್ಷನ್ ಥ್ರಿಲ್ಲರ್ ಕೇವಲ ಆರೇ ದಿನಗಳಲ್ಲಿ 900 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಹೊಸ ದಾಖಲೆ ಬರೆದಿದೆ. ಆದರೆ, ಇಷ್ಟೊಂದು ದೊಡ್ಡ ಮೊತ್ತದ ಹಣ ಗಳಿಸಿದ ಸಿನಿಮಾದಲ್ಲಿ ನಟಿಸಿದ ಸಹನಟನೊಬ್ಬ ಇಂದು ತನ್ನ ಕುಟುಂಬದೊಂದಿಗೆ ಅದೇ ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡಲು ಸಾಧ್ಯವಾಗದೆ ಕಣ್ಣೀರು ಹಾಕುತ್ತಿದ್ದಾರೆ.

ಯಾರು ಈ ಬದ್ರುಲ್ ಇಸ್ಲಾಂ?

ಸೋಶಿಯಲ್ ಮೀಡಿಯಾದಲ್ಲಿ ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿರುವ ನಟನ ಹೆಸರು ಬದ್ರುಲ್ ಇಸ್ಲಾಂ. ‘ಧುರಂಧರ್ 2’ ಸಿನಿಮಾದ ಕ್ಲೈಮ್ಯಾಕ್ಸ್ ಹಂತದಲ್ಲಿ ಇವರು ಒಂದು ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಜಗತ್ತಿನಲ್ಲಿ ಬಣ್ಣ ಹಚ್ಚುವ ಇವರು, ನಿಜ ಜೀವನದಲ್ಲಿ ಒಬ್ಬ ಕಷ್ಟಜೀವಿ ಆಟೋ ಚಾಲಕ. ಹಗಲಿಡೀ ಮುಂಬೈ ರಸ್ತೆಗಳಲ್ಲಿ ಆಟೋ ಓಡಿಸಿ ಬರುವ ಅಲ್ಪ ಮೊತ್ತದ ಹಣದಲ್ಲಿ ಐದು ಜನರ ಕುಟುಂಬವನ್ನು ಸಾಕುತ್ತಿದ್ದಾರೆ.

ಸಿನಿಮಾ ನೋಡಲು ಹಣವಿಲ್ಲದ ಸಂಕಷ್ಟ:

ಸಿನಿಮಾ ವಿಶ್ವಾದ್ಯಂತ ಕೋಟಿ ಕೋಟಿ ಲೂಟಿ ಮಾಡುತ್ತಿದ್ದರೂ, ಅದರಲ್ಲಿ ನಟಿಸಿದ ಬದ್ರುಲ್ ಇಸ್ಲಾಂಗೆ ಮಾತ್ರ ಆ ಸಂಭ್ರಮದಲ್ಲಿ ಭಾಗಿಯಾಗಲು ಸಾಧ್ಯವಾಗುತ್ತಿಲ್ಲ. “ನನ್ನ ಕುಟುಂಬದ ಐವರು ಸದಸ್ಯರ ಜೊತೆ ಹೋಗಿ ಈ ಸಿನಿಮಾ ನೋಡಬೇಕೆಂದು ಆಸೆ ಇದೆ. ಆದರೆ, ಮಲ್ಟಿಪ್ಲೆಕ್ಸ್‌ನಲ್ಲಿ ಒಂದು ಟಿಕೆಟ್‌ಗೆ 500 ರೂಪಾಯಿ ಇದೆ. ಐದು ಜನರಿಗೆ 2500 ರೂಪಾಯಿ ಬೇಕು. ಈ ಹಣ ನನ್ನ ಒಂದು ತಿಂಗಳ ದುಡಿಮೆಗೆ ಸಮನಾಗಿದೆ. ಅಷ್ಟೊಂದು ಹಣ ಕೊಟ್ಟು ಸಿನಿಮಾ ನೋಡಿದರೆ ನನ್ನ ಕುಟುಂಬದ ತಿಂಗಳ ಊಟಕ್ಕೆ ತೊಂದರೆಯಾಗುತ್ತದೆ” ಎಂದು ಬದ್ರುಲ್ ತಮ್ಮ ಅಳಲು ತೋಡಿಕೊಂಡಿದ್ದಾರೆ.

ವೈರಲ್ ವಿಡಿಯೋ ಮತ್ತು ನೆಟ್ಟಿಗರ ಆಗ್ರಹ:

ಬದ್ರುಲ್ ಇಸ್ಲಾಂ ಅವರ ಈ ಮನಕಲಕುವ ವಿಡಿಯೋ ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿದೆ. ಒಂದು ಸಿನಿಮಾ ಸಾವಿರ ಕೋಟಿಯತ್ತ ದಾಪುಗಾಲು ಹಾಕುತ್ತಿರುವಾಗ, ಅದರಲ್ಲಿ ನಟಿಸಿದ ಕಲಾವಿದನ ಸ್ಥಿತಿ ಹೀಗಿರಬಾರದು ಎಂದು ಅನೇಕರು ಬೇಸರ ವ್ಯಕ್ತಪಡಿಸಿದ್ದಾರೆ. ನೆಟ್ಟಿಗರು ಈ ವಿಡಿಯೋವನ್ನು ನಟ ರಣವೀರ್ ಸಿಂಗ್ ಮತ್ತು ನಿರ್ದೇಶಕ ಆದಿತ್ಯ ಧರ್ ಅವರಿಗೆ ಟ್ಯಾಗ್ ಮಾಡುತ್ತಿದ್ದಾರೆ. ‘ದಕ್ಷ ಕಲಾವಿದನಿಗೆ ಮತ್ತು ಆತನ ಕುಟುಂಬಕ್ಕೆ ಕನಿಷ್ಠ ಪಕ್ಷ ಒಂದು ಶೋ ನೋಡಲು ನೀವಾದರೂ ವ್ಯವಸ್ಥೆ ಮಾಡಿ’ ಎಂದು ಅಭಿಮಾನಿಗಳು ಮನವಿ ಮಾಡುತ್ತಿದ್ದಾರೆ.

ಧುರಂಧರ್ 2 ಕಲೆಕ್ಷನ್ ರಿಪೋರ್ಟ್:

ಟ್ರಾಕಿಂಗ್ ಸೈಟ್ ‘ಸ್ಯಾಕ್ನಿಲ್ಕ್’ ವರದಿಯ ಪ್ರಕಾರ, ‘ಧುರಂಧರ್ 2’ ಸಿನಿಮಾ ಕೇವಲ ಆರು ದಿನಗಳಲ್ಲಿ ವಿಶ್ವಾದ್ಯಂತ 937.49 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಭಾರತದಲ್ಲಿ ಮಾತ್ರ ಈ ಚಿತ್ರ 575.72 ಕೋಟಿ ರೂಪಾಯಿ (ನೆಟ್) ಗಳಿಸಿದೆ. ವಿದೇಶಿ ಮಾರುಕಟ್ಟೆಯಲ್ಲಿ 250 ಕೋಟಿ ರೂಪಾಯಿ ಬಾಚಿಕೊಂಡಿದೆ. 2025ರಲ್ಲಿ ತೆರೆಕಂಡಿದ್ದ ಮೊದಲ ಭಾಗ ‘ಧುರಂಧರ್’ 1000 ಕೋಟಿ ಗಳಿಸಿತ್ತು, ಈಗ ಎರಡನೇ ಭಾಗವೂ ಅದೇ ಹಾದಿಯಲ್ಲಿದೆ. ಆದರೆ, ಇಂತಹ ಐಷಾರಾಮಿ ಯಶಸ್ಸಿನ ನಡುವೆ ಬದ್ರುಲ್ ಇಸ್ಲಾಂ ಅವರಂತಹ ಕಲಾವಿದರ ಜೀವನದ ಕಹಿ ಸತ್ಯವು ಚಿತ್ರರಂಗದ ಮತ್ತೊಂದು ಮುಖವನ್ನು ಅನಾವರಣಗೊಳಿಸಿದೆ.



Source link

Leave a Reply

Your email address will not be published. Required fields are marked *