
ಹುಳಿಯಾರು, ಮಾ.25: ದೇವರ ದರ್ಶನಕ್ಕೆಂದು ಹೋದ ದಂಪತಿಯ ಮನೆಯೇ ಕಳ್ಳರ ಪಾಲಾಯಿತು ದುರ್ಘಟನೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ಹುಳಿಯಾರು ಪಟ್ಟಣದಲ್ಲಿ ನಡೆದಿದೆ. ರೋಷನ್ ಎಂಬುವವರ ಮನೆಯ ಬೀಗ ಮುರಿದಿರುವ ಕಳ್ಳರು ಕೈಚಳಕ ತೋರಿಸಿದ್ದಾರೆ. ಹುಳಿಯಾರಿನ ನಿವಾಸಿ ರೋಷನ್ ಅವರು ತಮ್ಮ ಪತ್ನಿ ನಂಜನಗೂಡಿನ ನಂಜುಂಡೇಶ್ವರ ಸ್ವಾಮಿಯ ದರ್ಶನಕ್ಕಾಗಿ ನಿನ್ನೆ ರಾತ್ರಿ ಮನೆಯಿಂದ ಹೊರಟಿದ್ದರು.ಇಂದು ಮಧ್ಯಾಹ್ನ ರೋಷನ್ ಅವರು ದೇವಸ್ಥಾನದಲ್ಲಿದ್ದಾಗ, ಅವರ ಮನೆಯ ಬಾಗಿಲು ತೆರೆದಿರುವುದನ್ನು ಗಮನಿಸಿದ ನೆರೆಹೊರೆಯವರು ಕರೆ ಮಾಡಿ ಮಾಹಿತಿ ನೀಡಿದರು. ತಕ್ಷಣ ಮನೆಯೊಳಗೆ ಹೋಗಿ ನೋಡುವಂತೆ ತಿಳಿಸಿದಾಗ ಕಳ್ಳತನವಾಗಿರುವುದು ದೃಢಪಟ್ಟಿದೆ.ವಿಷಯ ತಿಳಿಯದೆಯೇ ನಂಜನಗೂಡಿನಿಂದ ವಾಪಸ್ಸಾದ ದಂಪತಿ, ಸದ್ಯ ಹುಳಿಯಾರು ಪೊಲೀಸ್ ಠಾಣೆಗೆ ಧಾವಿಸಿ ದೂರು ನೀಡುತ್ತಿದ್ದಾರೆ. ಘಟನಾ ಸ್ಥಳಕ್ಕೆ ಹುಳಿಯಾರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕಳ್ಳರು ಎಷ್ಟು ಮೌಲ್ಯದ ಆಭರಣ ಮತ್ತು ಹಣ ದೋಚಿದ್ದಾರೆ ಎಂಬುದು ತನಿಖೆಯ ನಂತರ ತಿಳಿಯಬೇಕಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ