Headlines

7 ವರ್ಷಗಳ ಬಳಿಕ ಇರಾನ್​ನಿಂದ ಭಾರತ ಗ್ಯಾಸ್ ಖರೀದಿ: ಮಂಗಳೂರಿಗೆ ಬರಲಿದೆ LPG ಹೊತ್ತ ಹಡಗು!

7 ವರ್ಷಗಳ ಬಳಿಕ ಇರಾನ್​ನಿಂದ ಭಾರತ ಗ್ಯಾಸ್ ಖರೀದಿ: ಮಂಗಳೂರಿಗೆ ಬರಲಿದೆ LPG ಹೊತ್ತ ಹಡಗು!


7 ವರ್ಷಗಳ ಬಳಿಕ ಇರಾನ್ ನಿಂದ ಭಾರತ ಗ್ಯಾಸ್ ಖರೀದಿ: ಮಂಗಳೂರಿಗೆ ಬರಲಿದೆ LPG ಹೊತ್ತ ಹಡಗು!

ನವೀನ/ಬೆಂಗಳೂರು, ಮಾರ್ಚ್ 26: ಏಳು ವರ್ಷಗಳ ಸುದೀರ್ಘ ಅಂತರದ ನಂತರ ಭಾರತವು ಇರಾನ್‌ನಿಂದ ಎಲ್ಪಿಜಿ ಅನಿಲವನ್ನು ಖರೀದಿಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಭಾರತ 2019ರಲ್ಲಿ ಕೊನೆಯ ಬಾರಿಗೆ ಇರಾನ್‌ನಿಂದ ಅನಿಲ ಖರೀದಿಸಿತ್ತು. ಇದೀಗ ಅಮೆರಿಕದ ನಿರ್ಬಂಧಗಳ ತಾತ್ಕಾಲಿಕ ತೆರವು ಎಲ್ ಪಿಜಿ ಖರೀದಿ ನಿರ್ಧಾರಕ್ಕೆ ಬಂದಿದೆ. ದೇಶದಲ್ಲಿ ಎದುರಾಗಿರುವ LPG ಗ್ಯಾಸ್ ಸಮಸ್ಯೆ ಮತ್ತು ಕಚ್ಚಾ ತೈಲ ಕೊರತೆಯನ್ನು ನೀಗಿಸುವ ಮೂಲಕ ಭಾರತವು ಹಗಲಿರುಳು ಪ್ರಯತ್ನಗಳನ್ನು ನಡೆಸುತ್ತಿದೆ. ಇದರ ಭಾಗವಾಗಿ, ಇರಾನ್‌ನ ವಿದೇಶಾಂಗ ಇಲಾಖೆ ಮತ್ತು ಅದರ ಮುಖ್ಯಸ್ಥರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಭಾರತ ಸರ್ಕಾರವು ಇರಾನ್ ಸರ್ಕಾರದೊಂದಿಗೆ ಈ ಕುರಿತು ನಿರಂತರ ಮಾತುಕತೆ ನಡೆಸುತ್ತಿದೆ, ಏಳು ವರ್ಷಗಳ ನಂತರ ಇರಾನ್‌ನಿಂದ LPG ಗ್ಯಾಸ್ ಖರೀದಿ ಮಾಡಿಕೊಳ್ಳಲು ಸಿದ್ಧತೆಗಳು ನಡೆಯುತ್ತಿವೆ. ಮೂಲಗಳ ಪ್ರಕಾರ, ಇರಾನ್ ನಿಂದ ಎಲ್ ಪಿಜಿ ತುಂಬಿಕೊಂಡ ಹಡಗು ಹೊರಟಿದ್ದು, ಮತ್ತೊಂದು ಮಂಗಳೂರು ತಲುಪಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *