Headlines

ಒಂದೇ ವಾರಕ್ಕೆ ‘ಧುರಂಧರ್ 2’ ಸಾವಿರ ಕೋಟಿ ಕಲೆಕ್ಷನ್; ಆದರೂ ಮುರಿಯೋಕೆ ಆಗಿಲ್ಲ ಒಂದು ದಾಖಲೆ

ಒಂದೇ ವಾರಕ್ಕೆ ‘ಧುರಂಧರ್ 2’ ಸಾವಿರ ಕೋಟಿ ಕಲೆಕ್ಷನ್; ಆದರೂ ಮುರಿಯೋಕೆ ಆಗಿಲ್ಲ ಒಂದು ದಾಖಲೆ


ಒಂದೇ ವಾರಕ್ಕೆ 'ಧುರಂಧರ 2' ಸಾವಿರ ಕೋಟಿ ಕಲೆಕ್ಷನ್; ಆದರೂ ಮುರಿಯೋಕೆ ಆಗಿಲ್ಲ ಒಂದು ದಾಖಲೆ

ಒಂದು ವಾರಕ್ಕೆ ನೂರು ಕೋಟಿ ರೂಪಾಯಿಗಳಿಗೆ ಆದರೆ ದೊಡ್ಡದು ಎನ್ನುವ ಪರಿಸ್ಥಿತಿ ಈಗ ಇದೆ. ಯಾರೂ ಸಿನಿಮಾ ನೋಡಲು ಥಿಯೇಟರ್ ಗೆ ಬರುತ್ತಿಲ್ಲ ಎಂಬ ಆರೋಪ ಜೋರಾಗಿರುವ ಈ ಸಂದರ್ಭದಲ್ಲಿ ರಣವೀರ್ ಸಿಂಗ್ ನಟನೆಯ ‘ಧುರಂಧರ 2’ ಸಿನಿಮಾಧುರಂಧರ 2) ಒಂದೇ ವಾರಕ್ಕೆ ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಆದರೂ ಅತಿ ವೇಗದಲ್ಲಿ ಸಾವಿರ ಕೋಟಿ ರೂಪಾಯಿ ಕ್ಲಬ್ ಸೇರಿದ ಸಿನಿಮಾ ಎಂಬ ದಾಖಲೆಯನ್ನು ಮುರಿಯಲು ಸಾಧ್ಯವಾಗಿಲ್ಲ.

‘ಧುರಂಧರ 2’ ಚಿತ್ರ ಅಬ್ಬರಿಸುತ್ತಿದೆ. ಮೊದಲ ವಾರದಲ್ಲಿ ಈ ಚಿತ್ರ ಎಲ್ಲ ಕಡೆ ಉತ್ತಮ ಪ್ರದರ್ಶನ ಕಾಣುತ್ತಿದೆ. ಹಿಂದಿದೆ, ತೆಲುಗು ಭಾಷೆಯಲ್ಲೂ ಚಿತ್ರ ಉತ್ತಮ ರೀತಿಯಲ್ಲಿ ಗಳಿಕೆ ಮಾಡುತ್ತಿದೆ. ಈ ಸಿನಿಮಾ ಒಂದು ವಾರಕ್ಕೆ 1,006 ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ಅತಿ ವೇಗದಲ್ಲಿ ಗಳಿಕೆ ಮಾಡಿದ ಎರಡನೇ ಸಿನಿಮಾ ಆಗುತ್ತಿದೆ.

ಅತಿ ವೇಗದಲ್ಲಿ ಸಾವಿರ ಕ್ಲಬ್ ಸೇರಿದ ದಾಖಲೆ ‘ಪುಷ್ಪ 2’ ಬಳಿ ಇದೆ. ಈ ಚಿತ್ರ ಏಳು ದಿನಗಳಲ್ಲಿ ಬರೋಬ್ಬರಿ 1067 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಅಲ್ಲು ಅರ್ಜುನ್ ಸಿನಿಮಾ ಮಾಡಿದ ದಾಖಲೆ ಮುರಿಯಲು ‘ಪುಷ್ಪ 2’ ಚಿತ್ರಕ್ಕೆ ಇನ್ನೂ ಸಾಧ್ಯವಾಗಿಲ್ಲ. ಒಟ್ಟಾರೆ ಗಳಿಕೆಯಲ್ಲಿ ‘ಧುರಂಧರ 2’ ಚಿತ್ರವು ‘ಪುಷ್ಪ 2’ ಚಿತ್ರದ ದಾಖಲೆಯನ್ನು ಮುರಿಯುತ್ತದೆ ಎಂಬುದು ಸದ್ಯದ ಕುತೂಹಲ.

ಇದನ್ನೂ ಓದಿ: ‘ಧುರಂಧರ 2’ ಅಬ್ಬರಕ್ಕೆ ಹೆದರಿದ ಅಕ್ಷಯ್ ಕುಮಾರ್? ‘ಭೂತ್ ಬಾಂಗ್ಲಾ’ ಬಿಡುಗಡೆ ಮುಂದೂಡಿಕೆ ಸಾಧ್ಯತೆ

‘ಧುರಂಧರ 2’ ಸಿನಿಮಾ ಬುಧವಾರ (ಮಾರ್ಚ್ 25) 47 ಕೋಟಿ ರೂಪಾಯಿ ಗಳಿಸಿದೆ. ಇದು ಹೆಚ್ಚುಗಾರಿಕೆ. ವಾರದ ದಿನವೂ ಸಿನಿಮಾ ಅಬ್ಬರಿಸುತ್ತಿರುವುದು ವಿಶೇಷ. ಈ ವಾರಾಂತ್ಯದಲ್ಲಿ ಸಿನಿಮಾ ಪ್ರತಿ ದಿನ 100 ಕೋಟಿ ರೂಪಾಯಿ ಗಳಿಕೆ ಮಾಡುವ ನಿರೀಕ್ಷೆ ಇದೆ. ವೀಕೆಂಡ್ ಶೋಗಳು ಈಗಲೇ ಹೌಸ್ ಪುಲ್ ಪ್ರದರ್ಶನ ಕಾಣುತ್ತಾ ಇವೆ. ರಣವೀರ್ ಸಿಂಗ್ ಅವರು ಸಿನಿಮಾ ಮೂಲಕ ದೊಡ್ಡ ಗೆಲುವು ಕಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

 



Source link

Leave a Reply

Your email address will not be published. Required fields are marked *