Headlines

ಪ್ರೆಸ್​ಕಾನ್ಫರೆನ್ಸ್ ನಡೆಯುವಾಗಲೇ ಹೂಸುಬಿಟ್ಟ ರಿಜ್ವಾನ್; ಸಿಟ್ಟಾದ ವಾರ್ನರ್​ ಹೇಳಿದ್ದೇನು?

ಪ್ರೆಸ್​ಕಾನ್ಫರೆನ್ಸ್ ನಡೆಯುವಾಗಲೇ ಹೂಸುಬಿಟ್ಟ ರಿಜ್ವಾನ್; ಸಿಟ್ಟಾದ ವಾರ್ನರ್​ ಹೇಳಿದ್ದೇನು?


ಪ್ರೆಸ್‌ಕಾನ್‌ಫರೆನ್ಸ್ ನಡೆಯುವಾಗಲೇ ಹೂಸುಬಿಟ್ಟ ರಿಜ್ವಾನ್; ಸಿಟ್ಟಾದ ವಾರ್ನರ್ ಹೇಳಿದ್ದೇನು?

ಪಾಕಿಸ್ತಾನ್ ಸೂಪರ್ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದಿನಿಂದ (ಮಾರ್ಚ್ 26) ಪಂದ್ಯಗಳು ಪ್ರಾರಂಭವಾಗಲಿವೆ. ಅದಕ್ಕೂ ಮೊದಲು ಪಂದ್ಯದ ಬಗ್ಗೆ ಮಾಹಿತಿ ನೀಡಲು ಸುದ್ದಿಗೋಷ್ಠಿ ನಡೆಸಲಾಯಿತು. ಈ ವೇಳೆ ಡೇವಿಡ್ ವಾರ್ನರ್ ಮೊದಲಾದವರು. ಆಗ ರಿಜ್ವಾನ್ ಜೋರಾಗಿಯೇ ಹೂಸು ಬಿಟ್ಟಿದ್ದಾರೆ. ಇದನ್ನು ನೋಡಿ ಅಲ್ಲಿದ್ದವರು ನಕ್ಕಿದ್ದಾರೆ. ಇದಕ್ಕೆ ಡೇವಿಡ್ ವಾರ್ನರ್ ಖಡಕ್ ಆಗಿ ಉತ್ತರ ಕೊಟ್ಟಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ.

ಪಾಕಿಸ್ತಾನದ ಸೂಪರ್ ಲೀಗ್ಸ್ ಬಗ್ಗೆ ಮಾಹಿತಿ ನೀಡಲು ಕರೆದರು. ಪತ್ರಕರ್ತರು ಪ್ರಶ್ನೆ ಕೇಳುವಾಗಲೇ ಉಳಿದ ತಂಡದ ಕ್ಯಾಪ್ಟನ್ಸ್ ತಮ್ಮ ಪಾಡಿಗೆ ತಾವು ಚರ್ಚೆ ನಡೆಸುತ್ತಿದ್ದರು. ಇದೇ ಸಂದರ್ಭದಲ್ಲಿ ರಿಜ್ವಾನ್ (ವಿಡಿಯೋದಲ್ಲಿ 33-34 ಸೆಕೆಂಡ್) ಹೂಸು ಬಿಟ್ಟಿದ್ದಾರೆ. ಆಗ ಉಳಿದವರು ನಕ್ಕಿದ್ದಾರೆ. ಡೇವಿಡ್ ವಾರ್ನರ್ ತಮ್ಮ ಪಾಡಿಗೆ ತಾವು ಕೂಲ್ ಆಗಿ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು. ಆದರೆ, ಉಳಿದವರು ನಗುತ್ತಾ ಡಿಸ್ಟರ್ಬ್ ಮಾಡಿದ್ದು ಡೇವಿಡ್ ವಾರ್ನರ್ ಗೆ ಇಷ್ಟ ಆಗಿಲ್ಲ.

ಇದನ್ನೂ ಓದಿ: ನೀನು ಬ್ಯಾಟಿಂಗ್ ಮಾಡಿದ್ದು ಸಾಕು ಬಾ; ಮೊಹಮ್ಮದ್ ರಿಜ್ವಾನ್‌ಗೆ ಲೈವ್ ಪಂದ್ಯದಲ್ಲೇ ಅವಮಾನ

ಈ ವಿಷಯವಾಗಿ ಡೇವಿಡ್ ವಾರ್ನರ್ ತಿರುಗೇಟು ಕೊಟ್ಟರು. ‘ಏನಾಯ್ತು ಜಂಟಲಮೆನ್ಸ್? ಕ್ಷಮಿಸಿ, ಇಲ್ಲಿ ಕೆಲವು ಶಾಲಾ ಮಕ್ಕಳಿದ್ದಾರೆ’ ಎಂದು ವಾರ್ನರ್ ಹೇಳಿದರು. ವಾರ್ನರ್ ಹಲವು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದವರು. ಹೇಗೆ ಇರಬೇಕು ಎಂಬುದು ಸರಿಯಾಗಿ ತಿಳಿದಿದೆ. ಫೀಲ್ಡ್ ನಲ್ಲಿ ಅವರು ಫನ್ ಮಾಡುತ್ತಾರೆ ನಿಜ. ಆದರೆ, ಸುದ್ದಿಗೋಷ್ಠಿಗಳಲ್ಲಿ ಅವರಿಗೆ ಹೇಗಿರಬೇಕು ಎಂಬ ವಿಷಯ ಗೊತ್ತಿದೆ. ಹೀಗಾಗಿ, ಅವರು ಸುದ್ದಿಗೋಷ್ಠಿಯಲ್ಲಿ ಗಂಭೀರವಾಗಿ ನಡೆದುಕೊಂಡಿದ್ದಾರೆ.

ಇನ್ನು, ರಿಜ್ವಾನ್ ಹೂಸು ಕೊಟ್ಟ ವಿಷಯ ಸಾಕಷ್ಟು ಟ್ರೋಲ್ ಆಗುತ್ತಿದೆ. ಅವರನ್ನು ಎಲ್ಲರೂ ಟೀಕೆ ಮಾಡುತ್ತಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಅದನ್ನು ತಡೆದುಕೊಳ್ಳಲು ಸಾಧ್ಯವಾಗಿಲ್ಲವೇ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಡೇವಿಡ್ ವಾರ್ನರ್ ಅವರು ಕರಾಚಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ವಾರ್ನರ್ ಕಳೆದ ಸೀಸನ್ ಅಲ್ಲಿ 368 ರನ್ ಪೇರಿಸಲು ಮಾತ್ರ ಶಕ್ಯವಾಗಿದ್ದರು.

ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.





Source link

Leave a Reply

Your email address will not be published. Required fields are marked *