
‘ಲವ್ ಮಾಕ್ಟೇಲ್ 3’ ಚಿತ್ರದ ಮೇಲೆ ಗಂಭೀರ ಆರೋಪ ಕೇಳಿ ಬಂದಿದೆ. ಡಾರ್ಲಿಂಗ್ ಕೃಷ್ಣ ಕಥೆ ಕದ್ದಿದ್ದಾರೆ ಎಂದು ನಿರ್ದೇಶಕ ರಾಘವೇಂದ್ರ ನಾಯ್ಕ್ ಹಾಗೂ ನಿರ್ಮಾಪಕ, ನಿರ್ದೇಶಕ ಗುರು ದೇಶಪಾಂಡೆ ಆರೋಪಿಸಿದ್ದಾರೆ. ಆದರೆ, ಈ ಆರೋಪ ಸುಳ್ಳು ಎಂದು ಡಾರ್ಲಿಂಗ್ ಕೃಷ್ಣ ಸ್ಪಷ್ಟನೆ ನೀಡಿದ್ದರು. ರಾಘವೇಂದ್ರ ಹಾಗೂ ಗುರು ಅವರನ್ನು ಟೀಕಿಸಿದ್ದರು. ಇದು ಗುರು ದೇಶಪಾಂಡೆಗೆ ನೋವು ತಂದಿದೆ. ‘ಕೃಷ್ಣ ಮೊದಲು ಹೀಗಿರಲಿಲ್ಲ. ಅವರು ಒಂದು ಗಂಟೆ ಕರೆಮಾಡಿ ಮಾತನಾಡುತ್ತಾರೆ. ಲವ್ ಮಾಕ್ಟೇಲ್ ಸಕ್ಸಸ್ ಸಿಕ್ಕಮೇಲೆ ಅವರು ಬದಲಾದರು’ ಎಂದು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.